Breaking News
Home / General News / ವಿನಯ ಕುಲಕರ್ಣಿ ಎಂಬ ಹೋರಾಟಗಾರನ ಜೀವನ

ವಿನಯ ಕುಲಕರ್ಣಿ ಎಂಬ ಹೋರಾಟಗಾರನ ಜೀವನ

ಧಾರವಾಡ ಜಿಲ್ಲೆ ಕರುನಾಡಿಗೆ ಅನೇಕ ರಾಜಕೀಯ ನಾಯಕರನ್ನು ನೀಡಿದೆ. ಬಂಡಾಯದ ನಾಡೇ ಎಂದು ಹೆಸರಾಗಿರುವ ಧಾರವಾಡ ಜಿಲ್ಲೆಯ ನವಲಗುಂದ ಮೂಲದ ವಿನಯ ಕುಲಕರ್ಣಿ ಎಂಬ ಉತ್ಸಾಹಿ, ನೊಂದವರ ಪರವಾಗಿ ಹಿಂದೆ, ಮುಂದೆ ನೋಡದೇ ಸದಾ ನಿಲ್ಲುವ, ನಂಬಿಗಸ್ಥರಿಗೆ ಪ್ರೀತಿಯ ಅಣ್ಣನಾಗಿರುವ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯುತ್ತಿರುವ ನಾಯಕ.

ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮೂಲಕ ರಾಜಕಾರಣ ಪ್ರವೇಶಿಸಿರುವ ವಿನಯ ಕುಲಕರ್ಣಿ ಅವರು, ದೀನ ದಲಿತರಿಗಾಗಿ, ನೊಂದವರಿಗೆ ಬೆನ್ನೆಲುಬಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಹಾದಿ ಸವಿಸಿದ್ದಾರೆ.

ಧಾರವಾಡವನ್ನು ತಮ್ಮ ಕಾರ್ಯಸ್ಥಾನ ಮಾಡಿಕೊಂಡು ಜನ ಸೇವೆ ಮಾಡುತ್ತಿರುವ ವಿನಯ ಅವರು ರಾಜಕಾರಣಿಗಿಂತಲೂ ಒಬ್ಬ ಅಪ್ಪಟ ರೈತ. ವಿನಯ ಡೇರಿ ಹುಟ್ಟಿ ಹಾಕುವ ಮೂಲಕ ಸಾವಿರಾರು ಗೋವುಗಳನ್ನು ಪ್ರೀತಿಯಿಂದ ಸಾಕಿ, ಕೃಷಿಯನ್ನು ಹೇಗೆ ಲಾಭದಾಯಕ ಮಾಡಿಕೊಳ್ಳಬಹುದು ಎಂದು ಇತರ ರೈತರಿಗೂ ತೋರಿಸಿ ಕೊಟ್ಟ ಯಜಮಾನ. ವಿನಯ ಅವರ ಕೃಷಿ ಪದ್ದತಿ ನೋಡಿ ಕೇವಲ ಕರ್ನಾಟಕ ಅಷ್ಟೇ ಅಲ್ಲ, ಪಕ್ಕದ ಮಹಾರಾಷ್ಟ್ರ ದಲ್ಲಿ ಕೂಡ ಅನೇಕ ರೈತರು ಬದಲಾವಣೆ ಕಂಡುಕೊಂಡಿದ್ದಾರೆ. ತಮ್ಮ ಎಡೆಬಿಡದ ರಾಜಕೀಯ ಕೆಲಸಗಳ ನಡುವೆಯೂ ಅವರು ತಮ್ಮ ಕೃಷಿಯನ್ನು, ಡೇರಿಯನ್ನು ಮರತಿಲ್ಲ. ಒಬ್ಬ ರೈತ ಆಗಿ ರೈತರ ಸಂಕಷ್ಟಗಳ ಸ್ಪಷ್ಟ ಅರಿವಿರುವ ವಿನಯ ಕುಲಕರ್ಣಿ ಅವರ ವ್ಯಕ್ತಿ ಚಿತ್ರವನ್ನು ಸಂಕ್ಷಿಪ್ತವಾಗಿ ಕಟ್ಟಿ ಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಪೂರ್ಣ ಹೆಸರು; ವಿನಯ ರಾಜಶೇಖರಪ್ಪ ಕುಲಕರ್ಣಿ

ಜನ್ಮ ದಿನಾಂಕ; ನವೆಂಬರ್ 7, 1968, ನವಲಗುಂದ ತಾಲೂಕಿನ ಗುಮ್ಮಗೋಳದಲ್ಲಿ, ಧಾರವಾಡ ಜಿಲ್ಲೆ,

ಪತ್ನಿ; ಶಿವಲೀಲಾ ಕುಲಕರ್ಣಿ

ಮಕ್ಕಳು; ವೈಶಾಲಿ, ದೀಪಾಲಿ, ಹೇಮಂತ

ಶಿಕ್ಷಣ; ಬಿಎಸ್ಸಿ, ಕೃಷಿ, ಧಾರವಾಡ ಕೃಷಿ ವಿವಿ

1992 ರಲ್ಲಿ ವಿನಯ ಡೇರಿ ಪ್ರಾರಂಭ

1996 ರಲ್ಲಿ ಧಾರವಾಡ ಕೃಷಿ ವಿವಿ ವಿದ್ಯಾರ್ಥಿ ಯೂನಿಯನ್ ನಾಯಕ

1997 ನಾಯಕನೂರಿನ ಅಗ್ರಿ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ಕೆಲಸ

1998 ಧಾರವಾಡ ಜಿಲ್ಲಾ ಯುತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ

2000 ರಲ್ಲಿ ಜಿಲ್ಲಾ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯರಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ

2002 ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾಗಿ ಆಯ್ಕೆ

2004 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (ಕೆಪಿಸಿ) ಸದಸ್ಯರಾಗಿ ನೇಮಕ

2004 ಏಪ್ರಿಲ್ ನಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ

2006 ರಲ್ಲಿ ಕರ್ನಾಟಕದ ಪ್ರಸಿದ್ಧ ಮಠವಾದ ಧಾರವಾಡ ಮುರುಘಾಮಠದ ಆಡಳಿತ ಮಂಡಳಿ ಟ್ರಸ್ಟ್ ನ ಕಾರ್ಯಾಧ್ಯಕ್ಷರಾಗಿ ಸೇವೆ (ಇಂದಿನವರೆಗೂ)

2010 ರಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷರಾಗಿ ಆಯ್ಕೆ

2013 ರಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆ

2013 ರಲ್ಲಿ ವೈಶುದೀಪ ಫೌಂಡೇಶನ್ ಸಾಮಾಜಿಕ ಶೈಕ್ಷಣಿಕ ಎನ್ ಜಿ ಓ ಆರಂಭ

2015 ರಲ್ಲಿ ಕರ್ನಾಟಕ ಸರಕಾರದ ಸಿದ್ದರಾಮಯ್ಯ ಸಂಪುಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿ ಕೆಲಸ ಪ್ರಾರಂಭ

2016 ರಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ

2016 ರಲ್ಲಿ ಮೈಸೂರು ಮಿನಿರಲ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ.

ಪ್ರಮುಖ ಗೌರವಗಳು

*ಅತ್ಯುತ್ತಮ ಪ್ರಗತಿಪರ ರೈತ ಪ್ರಶಸ್ತಿ ಬೆಂಗಳೂರು ಪಶು ವಿಶ್ವವಿದ್ಯಾಲಯದಿಂದ (2008)

*ವಿಶ್ವ ಮಾನವ ಪ್ರಶಸ್ತಿ, ಬಿ ಎಸ್ ಯಡಿಯೂರಪ್ಪ ಅವರಿಂದ (2008)

*ಮಂಡ್ಯದ ದಿವಂಗತ ಕೆ ಎನ್ ನಾಗೇಗೌಡ ಸಾಮಾಜಿಕ ಸೇವಾ ಪ್ರಶಸ್ತಿ (2011)

ವಿನಯ ಕುಲಕರ್ಣಿ ಅವರಿಗಿದೆ ಭವ್ಯ ರಾಜಕೀಯ ಪರಂಪರೆ🙏🏽

ವಿನಯ ಕುಲಕರ್ಣಿ ಅವರು ಕೆಲವರ ಹಾಗೇ ಸಮಾಜವನ್ನು ಒಡೆದು, ಕೋಮು ಭಾವನೆಗಳನ್ನು ಕೆರಳಿಸಿ ರಾಜಕೀಯಕ್ಕೆ ಬಂದವರಲ್ಲ. ಇವರಿಗೆ ಭವ್ಯ ರಾಜಕೀಯ ಹಿನ್ನೆಲೆ ಇದೆ. ಬ್ರಿಟಿಷ್ ಕಾಲದಲ್ಲಿ ಖ್ಯಾತ ವಕೀಲರಾಗಿದ್ದ ಶ್ರೀ ಕರಿವೀರಪ್ಪ ಅವರು ಇವರ ಮುತ್ತಾತ. ಇವರು ಬ್ರಿಟಿಷ್ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಿ ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದರು. ಭಾರತೀಯರು ಅಷ್ಟೇ ಅಲ್ಲದೇ ಬ್ರಿಟಿಷರು ಇವರನ್ನು ಅದ್ವಿತೀಯ ನ್ಯಾಯ ಪಂಡಿತರು ಎಂದು ಗುರುತಿಸಿದ್ದರು. ಇವರು ಧಾರವಾಡ ಮುರುಘಾಮಠಕ್ಕೆ ಬರೋಬ್ಬರಿ 77 ಎಕರೆ ಭೂಮಿಯನ್ನು ದಾನ ನೀಡಿ, ಧಾರವಾಡ ವಿದ್ಯಾಕಾಶಿ ಆಗಲು ಕಾರಣವಾದರು.

ಇವರ ಇನ್ನೊಬ್ಬ ಮುತ್ತಾತ ಕರ್ನಾಟಕ ಏಕೀಕರಣ ರೂವಾರಿ, ಬಾಂಬೆ ಪ್ರೆಸಿಡೆನ್ಸಿಯಲ್ಲಿ ಸಚಿವರಾಗಿ ಕನ್ನಡಿಗರ ಪರವಾಗಿ ಸದಾ ಹೋರಾಡುತ್ತಿದ್ದ ಹಾಗೂ ವಿದ್ಯಾಕಾಶಿ ಮುಕುಟಮಣಿ ಕರ್ನಾಟಕ ಕಾಲೇಜ್ ನಿರ್ಮಾಣ ಆಗಲು ಕಾರಣಿಭೂತರಾದ ಸರ್ ಸಿದ್ದಪ್ಪ ಕಂಬಳಿ ಅವರು ಕೂಡ ವಿನಯ ಕುಲಕರ್ಣಿ ಅವರಿಗೆ ಮುತ್ತಾತ. ಸಿದ್ದಪ್ಪ ಕಂಬಳಿ ಅವರ ಬಗ್ಗೆಯಂತೂ ನಾಡಿನ ಜನಕ್ಕೆ ಗೊತ್ತಿರುವಂತ ಮಾತು‌.

ಇನ್ನು, ವಿನಯ ಕುಲಕರ್ಣಿ ಅವರ ಅಜ್ಜ ಎಂ ಕೆ ಕುಲಕರ್ಣಿ ಅವರು ನವಲಗುಂದ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಜನ ಸೇವೆ ಮಾಡಿದವರು. ಅಷ್ಟೇ ಅಲ್ಲದೇ ಕಾಂಗ್ರೆಸ್ ನ ಅಗ್ರಗಣ್ಯ ನಾಯಕರಾಗಿದ್ದವರು.

ವಿನಯ ಕುಲಕರ್ಣಿ ಅವರ ತಂದೆ ಶ್ರೀ ರಾಜಶೇಖರಪ್ಪ ಕುಲಕರ್ಣಿ ಅವರು ಸಕ್ರಿಯ ರಾಜಕಾರಣದಿಂದ ದೂರ ಇದ್ದರೂ ನವಲಗುಂದ ಭಾಗದಲ್ಲಿ ಪ್ರಗತಿಪರ ಕೃಷಿ ಮಾಡಿ, ಇತರ ರೈತರ ಬಾಳಲ್ಲಿ ಬದಲಾವಣೆ ತಂದವರು‌.

ಇಂತಹ ಅಪ್ಪಟ ದೇಶಿ ಸೊಗಡಿನ, ಚಾಲುಕ್ಯರ ನಾಡಿನ, ಭವ್ಯ ರಾಜಕೀಯ ಪರಂಪರೆ‌ಯಿಂದ ಬಂದ ವಿನಯ ಕುಲಕರ್ಣಿ ಅವರೂ ಕೂಡ ತಮ್ಮ ಮನೆತನದ ಹೆಸರು ಉಳಿಸುವ ನಿಟ್ಟಿನಲ್ಲಿ ರಾಜಕೀಯದ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ‌. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಲವೇ ಕೆಲವರು, ವಿನಯ ಕುಲಕರ್ಣಿ ಅವರಿಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡಿ ಅವರಿಗೆ ಕೆಟ್ಟ ಹೆಸರು ತರುತ್ತಿರುವುದು ದುರದೃಷ್ಟಕರವೇ ಸೈ.

………..

ಸ್ನೇಹಿತರೇ ಯಾವಾಗಲೂ ಪ್ರಚಾರ ಬಯಸದ ವಿನಯ ಕುಲಕರ್ಣಿ ಅವರ ನೈಜತೆ ಬಗ್ಗೆ ಇನ್ನಷ್ಟು ಜನರಿಗೆ ಗೊತ್ತಾಗುವಂತೆ ಮಾಡಲು ಈ ಸಂದೇಶವನ್ನು ಹೆಚ್ಚಿನ ರೀತಿಯಲ್ಲಿ ಶೇರ್ ಮಾಡಿ🙏

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!