Breaking News
Home / featured / ರೈತರ ಬಾಳು ‘ಹಾಂ’ ಅನ್ನುವದರೊಳಗೆ ತಿಂಗಳಾಗಿ ಪಗಾರ ಬಂದಂತಲ್ಲ!

ರೈತರ ಬಾಳು ‘ಹಾಂ’ ಅನ್ನುವದರೊಳಗೆ ತಿಂಗಳಾಗಿ ಪಗಾರ ಬಂದಂತಲ್ಲ!

ಸಿಂದಗಿ: ಅವರು ಆರು ತಿಂಗಳು, ಒಂದು ವರ್ಷ ಅವರೇ ದುಡಿದ ಅನ್ನಕ್ಕಾಗಿ ಕಾಯಬೇಕು. ಅದೂ ಯಾವ ಬೆಳೆಗೆ ಎಷ್ಟು ಬರುತ್ತೆ ಅನ್ನೋ ಗ್ಯಾರಂಟಿಯೇ ಇಲ್ಲದೆ. ಯಾವುದಕ್ಕೂ ಒಂದು ಬೆಲೆ ಅಂತ ಇಲ್ಲವೇ ಇಲ್ಲವಲ್ಲ. ಹಾಗಾಗಿ ಈಗಾಗಲೇ ರೇಟು ಹೇಳದೆಯೇ ಬಹುತೇಕ ಕಬ್ಬಿನ ಕಾರಖಾನೆಗಳು ಶುರುವಾಗಿವೆ. ಅವರು ಕೊಟ್ಟಿದ್ದೇ ರೇಟು. ಇಟ್ಟಿದ್ದೇ ಬಿಲ್ಲು. ರೈತರಿಗೂ ಕಬ್ಬು ಹೋದರೆ ಸಾಕೆನ್ನುವ ಹುಕಿ. ಅವರ ಹೊಟ್ಟೆಯ ತ್ರಾಸು ಬಾಯಿಗೆ ಬಂದಿರುತ್ತೆ. ಎಷ್ಟಾದರೂ ಬಂದರೆ ಸಾಕೆನ್ನುವ ಹಪಹಪಿ. ಏನು ಮಾಡುವುದು..

ನಿನ್ನೆಗೆ ನಮ್ಮ ಹತ್ತಿ ಬಿಡಿಸೋದು ಮುಗಿದಿತ್ತು. ರಾತ್ರಿ ತುಂಬಿ, ಇವತ್ತು ಬೆಳಗ್ಗೆ ಮಿಲ್ ಗೆ ಕಳಿಸಿದೆವು. ಏನೊ ನಿರಾಳ ಭಾವ. ಇನ್ನೂ ಹೈರಾಣಾದ್ರೆ, ಬುದ್ಧಿವಂತಿಕೆಯ ಲೆಕ್ಕಾಚಾರದಲ್ಲಿದ್ರೆ, ನಿರಂತರವಾಗಿ ಹೊಲಕ್ಕೆ ದುಡಿದರೆ ಮತ್ತೂ ಒಳ್ಳೆಯದಾಗಬಹುದು ಅನಿಸಿತು. ಈ ಸಲ ಹೆಚ್ಚಿನ ಮಳೆಯಾಗದಿದ್ದರೆ ಎಲ್ಲರದೂ ಲಾಭಾಂಶ ಚೆನ್ನಾಗಿರುತ್ತಿತ್ತು. ಇನ್ನು ತೊಗರಿ, ಕಬ್ಬು ಇದೆ. ಹತ್ತಿ ಇನ್ನೊಂದು ಸುತ್ತು ಬಿಡಿಸಬೇಕು.
ಹೊಲ ಮಾಡುವವರಿಗೆ, ಉಳಿದೆಲ್ಲ ಶ್ರಮಿಕರಿಗೆ ಶರಣು ಹೇಳಲೇಬೇಕು.

ನಮ್ಮದು ಬರೀ ಭಾಷಣ ಮಾಡಲಷ್ಟೇ ‘ಕೃಷಿ ಪ್ರಧಾನ ದೇಶ’. ಬೇರೆ ವಿಷಯಗಳಿಗೆ ಕೊಡೋ ಗಮನವನ್ನು ಸರಕಾರಗಳು, ಬುದ್ಧಿಗೇಡಿ ಮುಖಂಡರು ರೈತಾಪಿ ಜನಕ್ಕೆ ಕೊಟ್ಟಿದ್ದರೆ ‘ಗ್ರಾಮೀಣ ಭಾರತ’ ಹೀಗಿರುತ್ತಿರಲಿಲ್ಲ. ಮಾಹಿತಿ ಕ್ರಾಂತಿ, ಡಿಜಿಟಲ್- ಮೇಕ್ ಇನ್ ಇಂಡಿಯಾ ಅನ್ನುತ್ತೇವೆಯೇ ಹೊರತು ಇಲ್ಲೇ ಹೊಲದಲ್ಲಿ ‘ಮೇಕಿಂಗ್’ ಮಾಡಿರೋ ಬೆಳೆಗಳನ್ನು ಕೇಳೋರಿಲ್ಲ. ರೈತರ ಮನೆಯಲ್ಲಿ ಟಿವಿ, ಕಿಸೆಯಲ್ಲಿ ಉದ್ರಿ ನೆಟ್ ಇರೋ ಮೊಬೈಲಿವೆ. ಆದರೆ; ಅವರ ಹೊಟ್ಟೆ ಮತ್ತು ನೆತ್ತಿ ಈಗಲೂ ಹಸಿದೇ ಇವೆ.
ಯಾವಾಗ ಇದೆಲ್ಲ ಮುಗಿದು, ರೈತರದು ಘನತೆಯ ಬದುಕು ರೂಪುಗೊಳ್ಳುತ್ತೋ.. ಏನು ಮಾಡೋದು ಒಗ್ಗಟ್ಟಿಲ್ಲ ನಮ್ಮಲ್ಲಿ.  ಎಂ.ಡಿ. ನಂಜುಂಡಸ್ವಾಮಿ ಯವರಂತಹ ಚೇತನಗಳೂ ಈಗಿಲ್ಲ. ಬುದ್ಧಿ ಇರೋ ಬೆಳೆಯೂ ಒಣಗಿ ಹೋಗಿದೆ.

-ಶಿವಕುಮಾರ್ ಉಪ್ಪಿನ,
88809 59555

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ …

Leave a Reply

Your email address will not be published. Required fields are marked *

error: Content is protected !!