Breaking News
Home / featured / ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

 

ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ ಮಾತ್ರ ಸಲ್ಲುತ್ತದೆ . ಜಾಯಮಾನದಲ್ಲಿ ಯಾರೂ ಮಾಡಲಾಗದ ಅನೇಕ ಸಾಮಾಜಿಕ ಆದರ್ಶ ಕೆಲಸ ಮಾಡಿ ಕನಸೆಲ್ಲ ನನಸಾಗಿಸಿದ್ದಾರೆ.

ಆದರೂ ಇನ್ನೊಂದು ಮಹತ್ವದ ಅವರ ಕನಸು ಅರ್ಧಕ್ಕೆ ನಿಂತಿರುವ ರೋಚಕ ವಿಷಯ ಇದೆ. ವಿವರವಾಗಿ ಓದಿ ತಿಳಿಯಿರಿ.

ಮಂಗಳೂರಿನ ಮೂಲದ ವೀಣಾಕುಮಾರಿ ಎಂಬ ಆದರ್ಶ ಗ್ರಹಿಣಿ ಅವಳು. ಒಮ್ಮೆ ಗಂಡನಿಗೆ ಕಣ್ಣಿನ ತೊಂದರೆ ತೋರಿಸಲು ಆಸ್ಪತ್ರೆಗೆ ಹೋದಾಗ ವೈದ್ಯರು ಏಡ್ಸ ಬಂದಿರುವುದಾಗಿ ಹೇಳುತ್ತಾರೆ. ಕೆಲ ದಿನದಲ್ಲಿ ಅವರು ತೀರಿಹೋಗುತ್ತಾರೆ. ವೀಣಾ ಪರೀಕ್ಷೆ ಮಾಡಲಾಗಿ ಇವರಿಗೂ HIV ಪಾಸಿಟಿವ್ ಇರುವುದಾಗಿ ಕಂಡು ಬರುತ್ತದೆ. ಆಕಾಶ ತಲೆ ಮೇಲೆ ಬಿದ್ದಂತಾಗಿ ಸಾಯಲು ನಿರ್ಧಾರ ಮಾಡುತ್ತಾರೆ. ಆದರೂ ಧೈರ್ಯ ಮಾಡಿ ಇರುವಷ್ಟು ದಿವಸ ಏನಾದರೂ ಸಮಾಜಕ್ಕೆ ಸೇವೆ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ.
HIV ವೈರಸ್ ಕುರಿತು ಸಾಕಷ್ಟು ತಿಳಿದು ಕೊಳ್ಳುತ್ತಾರೆ. ಶರೀರದಲ್ಲಿ ರೋಗ ಶಕ್ತಿ ಕುಂದದಂತೆ ಅನೇಕ ಗಿಡಮೂಲಿಕೆ ತಿಳಿದು ತಿನ್ನುತ್ತಾ ಇಂಗ್ಲಿಷ್ ಔಷಧಿ ಬಿಡುತ್ತಾರೆ.

ರಾಜ್ಯದ ಮೂಲೆ ಮೂಲೆಯಲ್ಲಿರುವ HIV ಪೀಡಿತರಿಗೆ ಮಾರ್ಗದರ್ಶನ ಮಾಡುತ್ತಾರೆ. ಅರೋಗ್ಯ,ಔಷಧಿ ಮಾಹಿತಿ ಜೊತೆ ಭಯ ದುರುಮಾಡುತ್ತಾರೆ. ಸಮಗ್ರ ಮಾಹಿತಿ ನೀಡುತ್ತಾ ಬೆನ್ನೆಲುಬಾಗಿ ನಿಲ್ಲುತ್ತಾರೆ.
ವೀಣಾ ಕೆಲಸ ರವಿಗೆ ಗೊತ್ತಾಗುತ್ತೆ. ಈ ಟಿವಿಯಲ್ಲಿ ಪ್ರಸಾರ ಮಾಡುತ್ತಾರೆ. ಸ್ವತಃ HIV ಹೊಂದಿರುವ ವೀಣಾ ಕುರಿತು ದೇಶ ವಿದೇಶಕ್ಕೂ ಹಬ್ಬುತ್ತೆ.
ಆಗ ಕನ್ನಡ ಸಂಸ್ಕೃತಿ ಸಚಿವರು ಆಗಿದ್ದ ಎಂ ಪಿ ಪ್ರಕಾಶರು ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ ಮಾಡಿದ್ದರು. ನಂತರ ಬೇತಾಳನಂತೆ ಬೆನ್ನತ್ತಿ ವೀಣಾ ಹೆಸರು ಸೇರಿಸಿ ರಾಜ್ಯೋತ್ಸವದ ಪ್ರಶಸ್ತಿ ರವಿ ಬೆಳಗೇರಿ ಕೊಡಿಸುತ್ತಾರೆ.

ಈ ವೀಣಾರನ್ನು ಬೈಲೂರು ಶ್ರಿ ನಿಜಗುಣಾನಂದ ಸ್ವಾಮೀಜಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಸಹಸ್ರಾರು ಜನರ ಮುಂದೆ ಸನ್ಮಾನಿಸಿದ್ದರು.ನನ್ನಿಂದ ಹತ್ತು ಸಾವಿರ ರೂ ಪಡೆದು ಪ್ರಶಸ್ತಿ ಜೊತೆ ವೀಣಾಗೆ ನೀಡಿದ್ದು ಇನ್ನೊಂದು ವಿಶೇಷ.
ಆಗ ತುಂಬಿದ ಸಭೆಯಲ್ಲಿ ವೀಣಾ ಖುಷಿಯಾಗಿ ಪರಕಾಯ ಪ್ರವೇಶವಾದಂತೆ ಮಾತನಾಡುತ್ತ, ಯಮ ತಡೆದು ನಿಲ್ಲಿಸಿದಾಗಿ ಹೇಳಿ, ಸಿಕ್ಕಾ ಪಟ್ಟೆ ನಕ್ಕಳು.ಆ ನಗು ಸಾಯುವ ಮುನ್ನ ಕೊನೆಯ ಸಂತೋಷ ಎಂಬಂತೆ ಇತ್ತು. ಕೊನೆಗೆ ಸುಧಾರಿಸಿ ಕೊಂಡು ಮಾತನಾಡುತ್ತ ಈ ನಾಡಲ್ಲಿ ಬಹಳ ಬರಗಾಲ ಬಂದಿದೆ, ಈ ಹಣ ನೀವೇ ಉಪಯೋಗಿಸಿಕೊಳ್ಳಿರಿ ಎಂದಿದ್ದು ಎಲ್ಲರನ್ನು ಮುಖವಿಸ್ಮತರನ್ನಾಗಿಸಿತು.

ನಂತರ ಕಿತ್ತೂರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ HIV ಕುರಿತು ಉಪನ್ಯಾಸ ಏರ್ಪಡಿಸಿದೆವು.ವೈದ್ಯರು ತಪ್ಪು ಮೂಡಿಸಿದ್ದು ಆಧಾರ ಸಹಿತವಾಗಿ ಮಾತನಾಡಿ ಯಾರಿಗಾದರೂ ಈ ವೈರಸ್ ಬಂದಿದ್ದರೆ ದೈರ್ಯವಾಗಿ 32 ವರ್ಷ ಬದುಕಬಹುದು ಎಂದು ಹೇಳುತ್ತಾ ನಮ್ಮನ್ನು ಸಂಪರ್ಕ ಮಾಡಿ ಸಮಸ್ಯೆಗೆ ಸಮಾಧಾನ ಕಂಡುಕೊಳ್ಳಲು ತಿಳಿಸಿದಳು.

ಎಸ್ ಎಂ ಕೃಷ್ಣ ಮಹಾರಾಷ್ಟ್ರದಲ್ಲಿ ರಾಜ್ಯಪಾಲರು ಆಗಿದ್ದರು. ಈ ಸಮಯದಲ್ಲಿ ಬಾಂಬೆ ಏಡ್ಸ್ ರೋಗಿಗಳಿಗೆ ಚೈತನ್ಯ ತುಂಬಲು ವೀಣಾ ಕರೆಸಿದ್ದರು. ರಾಜಭವನದಲ್ಲಿ ಇರಲು ವ್ಯವಸ್ಥೆ ಮಾಡಿದ್ದರು. ಬಿಡುವಾದಾಗ ನನಗೆ ರಾಜಭವನದಿಂದ ಫೋನ್ ಮಾಡಿ ಮಾತನಡುತ್ತ HIV ಪೀಡಿತರ ಕುರಿತು ಚರ್ಚೆ ಮಾಡುತಿದ್ದರು. ಮತ್ತೆ ತಕ್ಷಣ ಇಷ್ಟೋತ್ತು ನಿಮ್ಮ ಜೊತೆ ಮಾತನಾಡದೆ ಯಾರಾದರೂ ಪೀಡಿತರ ಜೊತೆ ಮಾತನಾಡಿದರೆ ಅವರನ್ನು ಉಳಿಸಿಕೊಳ್ಳಬಹುದು ಎಂದು ಸಮಯ ಪ್ರಜ್ಞೆ ಮೆರೆದು ಕರೆ ಕಟ್ ಮಾಡುತಿದ್ದರು.

HIV ಪೀಡಿತರ ಸೇವೆಗಾಗಿ ದಕ್ಷಿಣ ಆಪ್ರಿಕಾಗೆ ಹೋಗಿ ಬಂದರು. ಊಟ ವಿಶ್ರಾಂತಿ ನಿದ್ದೆ ಇಲ್ಲದೆ ಊರುಂದುರಿಗೆ ಅಲೆಯುತಿದ್ದರು , ಪತ್ರಿಕೆಯಲ್ಲಿ ಸಮಸ್ಯೆಗಳಿಗೆ ಸಮಾಧಾನ ನೀಡುತಿದ್ದರು .

ರವಿ ಹುಟ್ಟು ಹಬ್ಬದ ಒಂದಿನಾ ವೀಣಾ ನಾನು ಅವರ ಪತ್ರಿಕೆ ಕಚೇರಿಯಲ್ಲಿ ಇದ್ದೆವು. ಅನೇಕ ತರಹದ ಸಮಸ್ಯೆ ಪೀಡಿತರು ಅಲ್ಲಿದ್ದರು.ತಮ್ಮ ತಪ್ಪಿನಿಂದಲ್ಲದೆ HIV ವೈರಸ್ ಪಡೆದುಕೊಂಡ ದಂಡು ಅಲ್ಲಿತ್ತು. ಇವರಿಗೆಲ್ಲ ರವಿ ಆಶ್ರಯದಾತ ವೀಣಾ ಮಾರ್ಗದರ್ಶಿ.ಆದರೂ ಒಮ್ಮೊಮ್ಮೆ ರವಿಯನ್ನೇ ಅವರು ಗದರಿಸುತಿದ್ದರು ಅಷ್ಟು ಆತ್ಮೀಯತೆ ಅವರಲ್ಲಿತ್ತು. ವೀಣಾ ಹಾಗೆ ನೊಂದವರ ಕಾಯಕದಲ್ಲಿ ನಿರತರಾಗಿದ್ದರು.ಹಾಗೆ ಕುಳುತಿರುವೆ ಮಜ್ಜಿಗೆ ಆದರೂ ಕುಡಿ ಎಂದು ಮೂರ್ನಾಲ್ಕು ಸಲ ರವಿ ಬಂದು ಹೇಳಿದರೂ ವೀಣಾ ಹೂ ಎನ್ನುತ್ತಾ ಚರ್ಚೆ ಮಾಡುತ್ತಿದ್ದರು.

ರವಿ ಪ್ರಾರ್ಥನಾ ಶಾಲೆ ತರಹ ಇನ್ನೊಂದು ಸಂಸ್ಥೆ ಪ್ರಾರಂಭಿಸಬೇಕು ಎಂದು ನಿರ್ಧಾರ ಮಾಡಿದ್ದರು. ವೀಣಾ ಮಾರ್ಗದರ್ಶದಲ್ಲಿ HIV ಪೀಡಿತರಿಗಾಗಿ 20ಎಕರೆ ಜಮೀನಲ್ಲಿ. ಅದು ಬೆಂಗಳೂರಲ್ಲಿ ಉಚಿತ ಸೇವೆ ಮಾಡಲು ಆಸ್ಪತ್ರೆ ತೆರೆಯಬೇಕೆಂದು ಮಾಡಿದ್ದರು.
ಆದರೆ ಅವಿಶ್ರಾಂತ ಕೆಲಸ ಮಾಡುತಿದ್ದ ವೀಣಾ ತನ್ನ ಆರೋಗ್ಯದ ಕಡೆ ಗಮನ ಹರಿಸಲು ಸಾದ್ಯವಾಗದ್ದಕ್ಕೆ ಪಾರ್ಶ್ಯ್ವಾಯು ಖಾಯಿಲೆಗೆ ತುತ್ತಾಗುತ್ತಾಳೆ.ವೈದ್ಯಕೀಯ ಲೋಕ್ HIV ವೈರಸ್ ಕುರಿತು ತಪ್ಪು ಮಾಹಿತಿ ನೀಡಿ ಬೇಗ ಸಾವು ಬರುತ್ತದೆ ಎಂದು ಹೇಳಿದ್ದಕ್ಕೆ, ಪೀಡಿತರನ್ನು ಪ್ರಯೋಗದ ಬಲಿಪಶು ಮಾಡಿದ್ದಕ್ಕೆ ತಪ್ಪೆಂದು ಸಾರಿ ಹೇಳುತ್ತಿದ್ದರು. ಕ್ಯಾನ್ಸರ್ ವೈರಸ್ ಅಷ್ಟು ಕೆಟ್ಟದ್ದಲ್ಲ ಈ ವೈರಸ್ ಎಂದು ಹೇಳುತ್ತಿದ್ದರು. ಗಿಡ ಮೂಲಿಕೆ ಯಿಂದ ಔಷಧಿ ತಗೆದು ಕೊಳ್ಳುತಿದ್ದಳು. ಇಂಗ್ಲಿಷ್ ಔಷಧಿ ಮುಟ್ಟುತಿರಲ್ಲಿ.

ಅದಕ್ಕಾಗಿ ಆಸ್ಪತ್ರೆಗೆ ನನ್ನ ಕರೆದುಕೊಂಡು ಹೋದರೆ ನಾನು ಬದುಕಲಾರೆ ಎನ್ನುತಿದ್ದಳು. ಅನಿವಾರ್ಯವಾಗಿ ಆಸ್ಪತ್ರೆಗೆ ಅಡ್ಮಿಟ್ ಮಾಡುತ್ತಾರೆ ಅಲ್ಲಿ ಜೀವ ಬಿಡುತ್ತಾರೆ.
ವೀಣಾ ಇನ್ನಷ್ಟು ವರ್ಷ ಬದುಕಿದ್ದರೆ ರವಿ ಬೆಳಗೇರಿ ದೇಶಕ್ಕೆ ಮಾದರಿಯಾಗುವಂತೆ HIV ಪೀಡಿತರಿಗೆ ಉಚಿತ ಆಸ್ಪತ್ರೆ ತೆರೆಯುತಿದ್ದರು ಆ ಕನಸು ನನಸಾಗಲಿಲ್ಲ.
ರವಿ ಇನ್ನಿಲ್ಲ ಸುದ್ದಿ ತಿಳಿದು ತಲೆ ತುಂಬಾ ಅವರ ವಿಚಾರಗಳು ಸುತ್ತಲು ಹತ್ತಿದವು. ವೀಣಾಕುಮಾರಿ ರವಿ ಬೆಳಗೇರಿ ನೊಂದವರ ಕಣ್ಣೀರು ಒರೆಸುವ ಈ ದಂತ ಕತೆ ಹಾಗೂ ಆಸ್ಪತ್ರೆ ಕನಸು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ ಎಂದು ಇದನ್ನು ಬರೆದು ಅಕ್ಷರ ಶ್ರದ್ದಾನಂಜಲಿ ಅರ್ಪಿಸಿದೆ ಪಡ್ಡೆ ಗುರುವಿಗೆ.

ಚಂದ್ರಗೌಡ ಪಾಟೀಲ
ಹಿರಿಯ ಪತ್ರಕರ್ತರು ಚನ್ನಮ್ಮನ ಕಿತ್ತೂರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!