Breaking News
Home / featured / ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

 

ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, 16 and 17), ಇವು ರಾಜ್ಯ ಸರಕಾರಗಳಿಗೆ ಅನುಮತಿ ನೀಡುತ್ತವೆ, ಆ ನಿಟ್ಟಿನಲ್ಲಿ ರಾಜ್ಯ ಸರಕಾರ, ರಾಜ್ಯದಲ್ಲಿ ಸಾಮಾಜಿಕ ಸಮಾನತೆ ತರುವ ನಿಟ್ಟಿನಲ್ಲಿ ಪೂರಕವಾದ ಈ ಮೂರೂ ಅಂಶಗಳನ್ನ ಗಮನದಲ್ಲಿಟ್ಟು ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ;
ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವುದು. (Article 15)
ಸಾರ್ವಜನಿಕ ಉದ್ಯೋಗದ ವಿಷಯಗಳಲ್ಲಿ ಅವಕಾಶದ ಸಮಾನತೆ (Article 16)
ಅಸ್ಪೃಶ್ಯತೆಯ ನಿರ್ಮೂಲನೆ (Article 17)

ಮೂರೂ ಅಂಶಗಳ ಸಾರಾಂಶ ಏನಂದ್ರ, ಆರ್ಥಿಕವಾಗಿ, ಸಾಮಾಜಿಕವಾಗಿ, ಮತ್ತು ಶೈಕ್ಷಿಣಕವಾಗಿ ಹಿಂದುಳಿದ ಸಮುದಾಯಗಳನ್ನ (ವರ್ಗಗಳನ್ನ) ಸಮಾಜದ ಮುಖ್ಯವಾಹಿನಿಗೆ ತರುವ ಮತ್ತು ಅಸಮಾನತೆಯನ್ನ ಹೋಗಲಾಡಿಸುವ ಹೆಬ್ಬಾಕೆಯ ಕಾನೂನ. ಇದನ್ನ ಅನೇಕ ರಾಜಕೀಯ ಪಕ್ಷಗಳು ತಮ್ಮ ಸೈದ್ಧಾಂತಿಕ ನಿಲುವಿನ ಮೇಲೆ ರಾಜಕೀಯ ಪ್ರೇರಿತ ಅಥವಾ ನೈಜ ಬೇಡಿಕೆಯನ್ನ ಈಡೇರಿಸುವಲ್ಲಿ ತಮ್ಮ ಅನಕೂಲಕ್ಕ ತಕ್ಕ ಹಾಗೆ ಸಾದರಪಡಿಸ್ತಾ ಬಂದಿದಿದ್ದಾವೆ.

ಉದಾ: ಇತ್ತೀಚನ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ (ಸಾಮಾಜಿಕ ಪ್ರಾತಿನಿಧ್ಯತೆ ) ಯನ್ನ ಭಾರತ ಸರಕಾರ ಘೋಷಣೆ ಮಾಡಿದ್ದು, ಮೇಲ್ನೋಟಕ್ಕೆ ಅದು ಒಂದೇ ಸಮುದಾಯಕ್ಕೆ ಪೂರಕವಾಗಿದ್ದರು, ಆ ಸಮುದಾಯ ಸಾಮಾಜಿಕವಾಗಿ ಹಿಂದುಳಿಯದೆ ಇದ್ದರು, ಸರಕಾರ ಜನರ ಕಣ್ಣಿಗೆ ಮಣ್ಣೆರಚುವ ಕೆಲಸಮಾಡಿ ಅದು ಎಲ್ಲ ಆರ್ಥಿಕವಾಗಿ ಹಿಂದುಳಿದವರಿಗೆ ಅನ್ನುವ ಭ್ರಮೆ ಹುಟ್ಟಿಸುವಲ್ಲಿ ಯಶಸ್ವಿಯಾಯಿತು; ಮೀಸಲಾತಿ (ಸಾಮಾಜಿಕ ಪ್ರಾತಿನಿಧ್ಯತೆ )ಯನ್ನ ಸಾರಸಾಗಾಟವಾಗಿ ಧಿಕ್ಕರಿಸುವ ಯುವ ಸಮೂಹ ಕೂಡಾ ಯಾಕೊ ಅಪ್ಪಿಕೊಂಡಂತಹ ಭಾವ ಕಂಡುಬಂತು.

ಮೀಸಲಾತಿ (ಸಾಮಾಜಿಕ ಪ್ರಾತಿನಿಧ್ಯತೆ) ಸಾರ್ವಜನಿಕ ವಲಯದ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಇದ್ದಿದ್ದು ಅನೇಕ “ಜಾತಿವಾದಿಗಳಿಗೆ” ನುಂಗಲಾರದು ತುತ್ತು ಜಾತಿ ವ್ಯವಸ್ಥೆ ಖಾಯಂ ಇರಬೇಕು, ಮೌಢ್ಯದ ಹೆಸರಿನಲ್ಲಿ ಅಸ್ಪೃಶ್ಯತೆ ನಿತ್ಯವಾಗಿರಬೇಕು. ಡಾ| ಬಾಬಾಸಾಹೇಬ ಅಂಬೇಡ್ಕರ ಅವರು ಈ ಎಲ್ಲ “ಕುತಂತ್ರಿಗಳ” ಮೌಢ್ಯದ ಕತ್ತಲದಲ್ಲಿ ದಮನಿತರು ನರಳಾಡಿದರಾಲಿ ಅಂತ “ಸಂವಿದಾನವೆಂಬ ಚಿಜ್ಯೋತಿಃ” ಯನ್ನ ಶ್ರಮದ, ಜ್ಞಾನದ ಮಾನವೀತೆಯ ಎಣ್ಣೆ ಎರೆದು ನಮಗ ಬೆಳಕ ನೀಡಲಿ ಅಂತ ಹಚ್ಚಿಹೋಗ್ಯಾರ. ಅವರು ನಮ್ಮ ದೇವರು, ಸಾವಿಲ್ಲದವರು.

ಈಗ “ಜಾತಿ ನಿಗಮಗಳು”, ಈ ಕಾನೂನಿನ ಅಂತರ್ಗದಲ್ಲಿ ಬರುವಂತಹ ರಾಜ್ಯಗಳ ಸ್ವಾಯತ್ತೆತೆಯ ನಿರ್ಣಯಗಳು, ಇಂತಹ ನಿರ್ಣಯಗಳು ರಾಜಕೀಯ ಪ್ರೇರಿತವಾಗಿರಲು ಸಾಧ್ಯವಿದೆ, ಆದರೆ ಕೆಲವು ಕಡೆ ಸಮುದಾಯದ ಸ್ಥಿತಿಗತಿ ಗಮನಿಸಿ, ಬೇಡಿಕೆಯನ್ನ ಗುರುತಿಸಿ ಅದರ ಸುತ್ತಿರುವ ಹೋರಾಟಗಳನ್ನ ಮನ್ನಿಸಿ, ಸರಕಾರಗಳು ನಿರ್ಣಯ ತೆಗೆದುಕೊಂಡಿವೆ, ಇತ್ತೀಚಿಗೆ ಕಾಡುಗೊಲ್ಲ ಸಮುದಾಯ ಅಭಿವೃದ್ಧಿ ನಿಗಮ ಮಾಡಿದ್ದು, ಅದರಲ್ಲಿ ಮೂಲಭೂತವಾದ ಅವಶ್ಯಕತೆ ಇತ್ತು, ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಮತ್ತು ಶೈಕ್ಷಿಣಕವಾಗಿ ಹಿಂದುಳಿದಿತ್ತು.

ಆದರೆ, ಮಾನ್ಯ ಮುಖ್ಯಮಂತ್ರಿಯವರು ಎರಡು ಸಮುದಾಯ ನಿಗಮಗಳನ್ನ, “ಬೇಡಿಕೆಯಿಲ್ಲದೆ ಅವಶ್ಯಕತೆಯ ಪರಶೀಲನೆ ನಡಿಸದೆ, ಹೋರಾಟದ ಸುಳಿವು ಇಲ್ಲದ ಮತ್ತು “ವೈಜ್ಞಾನಿಕ ಕಾರಣಗಳಿಲ್ಲದೆ ತರಾತುರಿಯಲ್ಲಿ, ಕೇಳದ ಮಕ್ಕಳಿಗಿ ಕರೆದು ಅಟಿಕಿ ಸಮಾನ ಕೊಟ್ಟಂಗ.

ಹಾಗೆ, ವೀರಶೈವ ಲಿಂಗಾಯತ ನಿಗಮ; ಒಂದು ನಿಷ್ಪ್ರಯೋಜಕ, ಕೆಲುವು ಪಟ್ಟಭದ್ರ ಹಿತಾಸಕ್ತಿಗೆ ಮಣಿದು ತಮ್ಮ ನಾಲ್ಕು ದಶಕಗಳ ಅನುಭವ ಮತ್ತು ನಿರ್ಣಾಯಕ ಶಕ್ತಿಯನ್ನ ಯಾರಿಗೋ ದಾರೆ ಎರೆದು, ನಿಮ್ಮನ್ನೇ ನಂಬಿದ ಒಂದು ಇಡೀ ಸಮುದಾಯವನ್ನ “ಯಾಮಾರಿಸಿದರಿ” (ಇವತ್ತಿನ ನಿಮ್ಮಆದೇಶ ನೋಡಿ ಅನಿಸಿದ್ದು).

ಲಿಂಗಾಯತ ಧರ್ಮದ ಪಂಗಡಗಳು ಸಾಮಾಜಿಕ ಪ್ರಾತಿನಿಧ್ಯತೆಯಾ ಸಲುವಾಗಿ ಹರಿದು ಹಂಚಿ ಹೋಗತಾ ಇದೆ, ಅದನ್ನ ಒಗ್ಗೂಡಿಸಿ ಮೀಸಲಾತಿ ನೀಡಿ ಇಲ್ಲವೇ, ಧರ್ಮ ಮಾನ್ಯತೆ ಒದಗಿಸಿಕೊಡುವಲ್ಲಿ ಪ್ರಯತ್ನಿಸಿ, ಶರಣರ ತತ್ವ ಪ್ರಚಾರಕ್ಕೂ ಮತ್ತು ಆ ತತ್ವಗಳನ್ನ ನಂಬಿದ ಬಸವಅನುಯಾಯಿಗಳಿಗೆ ಒಂದು ಆತ್ಮಸ್ಥೈರ್ಯ ತುಂಬಿದಂತೆ ಆಗುತ್ತೆ.

ಶರಣು ಶರಣಾರ್ಥಿ!

ಬಸವ ಪಾಟೀಲ್

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!