Breaking News
Home / featured / ಲಿಂಗಾಯತ ಧರ್ಮದ ಹೋರಾಟ ಸರಣಿ-2

ಲಿಂಗಾಯತ ಧರ್ಮದ ಹೋರಾಟ ಸರಣಿ-2

 

ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ?

ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ ಮುತುವರ್ಜಿಯಿಂದ ಭಾಗಿಯಾದ ಮತ್ತು ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಆತ್ಮಿಯರಾದ ಲಿಂಗಾಯತ ಧರ್ಮದ ಜಗದ್ಗುರುಗಳಾದ *ಚಿತ್ರದುರ್ಗದ ಪೂಜ್ಯ ಶ್ರೀ ಮುರುಘಾ ಶರಣರು, ಗದುಗಿನ ಪೂಜ್ಯ ಶ್ರೀ ಜಗದ್ಗುರು ಸಿದ್ಧರಾಮ ಸ್ವಾಮಿಗಳು, ಕೂಡಲಸಂಗಮದ ಪೂಜ್ಯ ಶ್ರೀ ಜಗದ್ಗುರು ಮಾತೆ ಗಂಗಾದೇವಿಯವರು, ಭಾಲ್ಕಿಯ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಜಯಮೃತ್ಯಂಜಯ ಸ್ವಾಮಿಗಳು, ಸುಲಫಲ ಮಠದ ಪೂಜ್ಯ ಶ್ರೀ ಮಹಾಂತಸ್ವಾಮಿಗಳು, ಸಾಣೆಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು, ಬೆಂಗಳೂರಿನ ಬೇಲಿ ಮಠದ ಪೂಜ್ಯ ಶ್ರೀ ಶಿವರುದ್ರ ಸ್ವಾಮಿಗಳು* ಇನ್ನಿತರ ಸ್ವತಂತ್ರ್ಯ ಧರ್ಮ ಹೋರಾಟದಲ್ಲಿ ಭಾಗಿಯಾದ ಮಹನಿಯರು ಸೇರಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 2018ರಲ್ಲಿ ರಾಜ್ಯ ಸರಕಾರ ಶಿಫಾರಸ್ಸು ಮಾಡಿದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಜಾರಿಗೆ ತರುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ಕೇಳಿಕೊಳ್ಳಲು ಮನವಿ.

ಕಾಂಗ್ರೇಸ್ ಸರಕಾರವಿದ್ದಾಗ ತೀವ್ರತೆಯಿಂದ ಹೋರಾಟಗಳು ನಡೆದು ಅಂದಿನ ಮುಖ್ಯಮತ್ರಿ ಶ್ರೀ ಸಿದ್ದರಾಮಾಯ್ಯನವರ ಬಳಿ ಸುಮಾರು 300ಕ್ಕೂ ಹೆಚ್ಚು ಮಠಾಧೀಶರ ನಿಯೋಗ ಹೋಗಿ ನಾಗಮೋಹನ್ ದಾಸ್ ವರದಿ ಪ್ರಕಾರ ಲಿಂಗಾಯತ ಧರ್ಮದ ಶಿಫಾರಸ್ಸು ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದರು. ಅದರಿಂದ ಅನ್ಯ ಸಮಾಜದ ಸಿದ್ಧರಾಮಯ್ಯನವರು ತಾತ್ವಿಕ ಲಿಂಗಾಯತರಾದರು…ನಿಜ ಲಿಂಗಾಯತ ಅಂದರೆ ಸಿದ್ದರಾಮಯ್ಯವರು, 12ನೇ ಶತಮಾನದ ಸಿದ್ದರಾಮಯ್ಯನವರಂತೆ ನೀವು ಎಂದು ಕೊಂಡಾಡಿದರು. ಇದರಿಂದ ಕುಪಿತಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಕರ್ನಾಟಕದಲ್ಲಿ ಪ್ರವಾಸ ಕೈಗೊಂಡು ಲಿಂಗಾಯತ ನಾಯಕ ಅಲ್ಲಲ್ಲ ವೈದಿಕ- ವೀರಶೈವರ ನಾಯಕ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿ ಪಂಚಾಚಾರ್ಯರ ಮಠಗಳಿಗೆ ಭೇಟಿಕೊಟ್ಟು ಸತ್ಯ ಗೊತ್ತಿದ್ದರೂ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿದರೆ ಹಿಂದೂ ಧರ್ಮ ಹೊಡೆಯುತ್ತದೆ ಎಂಬ ಭ್ರಾಂತಿಯ ಸಂದೇಶವನ್ನು ನೀಡುತ್ತಾ ಲಿಂಗಾಯತ ಧರ್ಮದ ಶಿಫಾರಸ್ಸು ಮಾನ್ಯ ಮಾಡಿಸದಂತೆ ವ್ಯವಸ್ಥಿತವಾಗಿ ಕುತಂತ್ರ ಹೆಣೆದು ತಪ್ಪಿಸಿದರು.

ಬಿಜೆಪಿ ಮತ್ತು ವೈದಿಕ-ವೀರಶೈವ ಮಠಾಧೀಶರು ನಮ್ಮ ಹೋರಾಟವನ್ನು ಎಷ್ಟೇ ಹತ್ತಿಕ್ಕಲು ಪ್ರಯತ್ನಿಸಿದರು ನಮ್ಮ ಹೋರಾಟ ಯಶ ಕಂಡಿತಾದರೂ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆಯುವಲ್ಲಿ ಅವರ ಕುತಂತ್ರ ಮೇಲಾಯಿತು.

2018ರಲ್ಲಿ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆದು‌ ಮೂರು ಪಕ್ಷವೂ ಅತಂತ್ರ ಸ್ಥಿತಿಗೆ ತಲುಪಿದ್ದು, ಸಮ್ಮಿಶ್ರ ಸರಕಾರ ರಚನೆಯಾಗಿದ್ದು, ವಾಮ ಮಾರ್ಗದಿಂದ ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಈಗ ಇತಿಹಾಸ. ಈಗ ಸ್ಪಷ್ಟ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಯ ಸರಕಾರದಲ್ಲಿ ನಾಮ ನಿರ್ಧೇಶಿತ ಲಿಂಗಾಯತ ನಾಯಕ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ್ದಾರೆ. ಈಗ ಲಿಂಗಾಯತ ಹೋರಾಟಗಾರರಲ್ಲಿ ಮಠಾಧೀಶರ ಮತ್ತು ಹೋರಾಟದ ಮುಖಂಡತ್ವ ವಹಿಸಿದ ಜಾಗತಿಕ ಲಿಂಗಾಯತ ಧರ್ಮ ಮಹಾಸಭಾ ಮತ್ತು ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಸಮನ್ವಯ ಸಮಿತಿ ನಡೆ ಕುರಿತು ಜನ ಸಾಮಾನ್ಯರಲ್ಲಿ ಮತ್ತು ಕಾಂಗ್ರೇಸ್ ವಲಯದಲ್ಲಿ ಅನುಮಾನದ ಬುಗ್ಗೆ ಪುಟಿದೇಳುತ್ತಿದೆ. ಕಾಂಗ್ರೇಸ್ ಸರಕಾರದಲ್ಲಿ ಎಷ್ಟೊಂದು ತೀವ್ರವಾಗಿ ಹೋರಾಟ ಮಾಡಿದವರು ಈಗ ಬಿಜೆಪಿ ಸರಕಾರವಿದೆ, ಲಿಂಗಾಯತ ನಾಯಕ ಮುಖ್ಯಮಂತ್ರಿಯಾಗಿದ್ದಾರೆ ಏಕೆ ಸುಮ್ಮನಿದ್ದೀರಿ ಎಂದು. ಈ ಪ್ರಶ್ನೆ ಕೇಳಲೇ ಬೇಕಾದದ್ದು ಸಹಜವಾಗಿದೆ.

ಹೌದು!.. ಅಕ್ಕಿ ಮೇಲೆ ಆಶೆ ನೆಂಟರ ಮೇಲೆ ಪ್ರೀತಿ ಎನ್ನುವಂತೆ ನಮ್ಮ ಲಿಂಗಾಯತ ಮಠಾಧೀಶರ ಮತ್ತು ಸಂಘಟನೆಯವರ ಮನಸ್ಥತಿ ಇದೆ. ಯಡಿಯೂರಪ್ಪನವರ ಮೇಲೆ ತಮ್ಮ ಮಠಗಳಿಗೆ ಏನಾದರೂ ಅನುದಾನ ಕೊಡುವರೆಂಬ ಆಶೆ ಒಂದು ಕಡೆ ಹಗಲು ರಾತ್ರಿ ಶ್ರಮಿಸಿ ಲಿಂಗಾಯತ ಧರ್ಮ ಹೋರಾಟ ಮಾಡಿದ್ದು ಅದು ಈಗ ಮಾನ್ಯತೆ ಪಡೆಯಬೇಕೆಂಬ ಅಲ್ಪ ಸ್ವಲ್ಪ ಪ್ರೀತಿ ಇನ್ನೊಂದು ಕಡೆ. ಈ ದ್ವಂದ್ವದಲ್ಲಿ ಮಠಾಧೀಶರು ಮುಳುಗಿದ ಬೆನ್ನಲ್ಲೇ ಅವರನ್ನು ಯಾಮಾರಿಸಲು ವೀರಶೈವ ಲಿಂಗಾಯತರ ನಿಗಮ ಸ್ಥಾಪಿಸಿ ಯಡಿಯೂರಪ್ಪನವರು ತಮ್ಮ ಸಮುದಾಯಕ್ಕೆ ಮತ್ತು ಮಠಾಧೀಶರಿಗೆ ಮೂಗಿಗೆ ತುಪ್ಪ ಸವರಿ ಕೈತೊಳೆದುಕೊಳ್ಳುವ ತವಕದಲ್ಲಿದ್ದಾರೆ. ಇದನ್ನು ಸ್ವಾಗತ ಮಾಡಿಕೊಂಡಿರುವ ಕೆಲ ಮಠಾಧೀಶರ ನಡೆಯನ್ನು ಮಾನ್ಯ ಎಂ.ಬಿ.ಪಾಟೀಲರು ಖಂಡಿಸಿದ್ದು ಶ್ಲಾಘನೀಯ.

ಲಿಂಗಾಯತ ಧರ್ಮ ಜಾತಿಯಾಗಬಾರದೆಂಬ ಉದ್ಧೇಶವನ್ನು ಹೊಂದಿ ಐತಿಹಾಸಿಕ ಸಂಶೋಧನೆ ಮತ್ತು ಬ್ರಿಟೀಷ್ ದಾಖಲೆ ಮೂಲಕ ಜಗದ್ಗುರು ಮಾತೆ ಮಹಾದೇವಿಯವರು ಮತ್ತು ಮಾನ್ಯ ಎಂ.ಬಿ ಪಾಟೀಲರು ಹಾಗೂ ಎಸ್ ಎಮ್ ಜಾಮದಾರ ಸಾಬೀತು ಮಾಡಿ ಹೋರಾಟಕ್ಕೆ ಪ್ರಯತ್ನಿಸಿದ್ದರೋ ಅದನ್ನು ಲೆಕ್ಕಿಸದೆ ಲಿಂಗಾಯತ ಧರ್ಮದ ವಿರೋಧಿ ಮಾನ್ಯ ಯಡಿಯೂರಪ್ಪನವರ ಸರಕಾರ ಮತ್ತವರ ವೀರಶೈವ ಬಳಗ ಜಾತಿ ಪಟ್ಟ ಕಟ್ಟಿ ಲಿಂಗಾಯತ ಸ್ವತಂತ್ರ್ಯ ಧರ್ಮವನ್ನು ಶಾಶ್ವತವಾಗಿ ಮಣ್ಣು ಮಾಡಲು ಹೊರಟಿರುವುದು ದುಃಖದ ಸಂಗತಿ.

ಹಾಗಾದರೆ ಲಿಂಗಾಯತಧರ್ಮದ ಒಳಪಂಗಡದವರ ಮುಂದಿನ ಗತಿ ಏನು?
ಶತ ಶತಮಾನದಿಂದ ಲಿಂಗಾಯತ ಧರ್ಮದ ತಾತ್ವಿಕ ಸಿದ್ಧಾಂತವನ್ನು ತಿಳಿದು, ಸಂಸ್ಕಾರವನ್ನು ಅಳವಡಿಸಿಕೊಂಡು ಲಿಂಗಾಯತ ಎಂದು ಪ್ರಮಾಣ ಪತ್ರವಿಲ್ಲದಿದ್ದರೂ ಗರ್ವದಿಂದ *ನಾನು ಲಿಂಗಾಯತ* ಎಂದು ಹೇಳಿಕೊಂಡು ಧರ್ಮದ ಹೋರಾಟದಲ್ಲಿ ಉನ್ನತ ಆಶಯದಿಂದ ಭಾಗಿಯಾದ ತಳ ವರ್ಗದ ಮಠಾಧೀಶರ ಮತ್ತವರ ಸಮುದಾಯದವರ ಮುಂದಿನ ಗತಿ ಏನು ಅವರೀಗ ಯಾವ ಧರ್ಮವನ್ನು ಸ್ವೀಕರಿಸಬೇಕು…ಯೋಚಿಸಬಲ್ಲೀರಾ…???

*ಲಿಂಗಾಯತ ಹೋರಾಟದ ಮುಂಚೂಣಿ ಮಠಾಧೀಶರು ಮತ್ತು ಸಂಘಟನಾಕಾರರಿಗೆ ನನ್ನದೊಂದು ಕಳಕಳಿ*
ತಾವು ಕಾಂಗ್ರೇಸ್ ಸರಕಾರವಿದ್ದಾಗ ಯಾವ ಮಾದರಿಯಲ್ಲಿ ಹೋರಾಟ ನಡೆಸಿ, ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮನವೊಲಿಸಿ ಶಿಫಾರಸ್ಸು ಪಡೆಯುವಲ್ಲಿ ಯಶಸ್ಸನ್ನು ಕಂಡಿದ್ದೀರೋ.. ಅದೇ ರೀತಿಯಾಗಿ ನಿಮ್ಮ ಪ್ರೀತಿಯ ಆಶಾಗೋಪುರದ ಕಳಸ ಈಗಿನ ಬಿಜೆಪಿ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಬಳಿ ನಿಯೋಗ ತೆಗೆದುಕೊಂಡು ಹೋಗಿ…ಲಿಂಗಾಯತ ಧರ್ಮವನ್ನು ಜಾತಿ ಹೆಸರಿನ ಮೇಲೆ ನಿಗಮಕ್ಕೆ ಬಲಿಕೊಡುವುದನ್ನು ತಡೆದು, ತಮ್ಮದೇ ಕೇಂದ್ರ ಸರಕಾರದಿಂದ ಸ್ವತಂತ್ರ್ಯ ಮಾನ್ಯತೆ ಜಾರಿ ಮಾಡಲು ಮನಸಾಪೂರ್ವಕವಾಗಿ ಕೇಳಿಕೊಂಡು ನಮಗೆ ನ್ಯಾಯ ಒದಗಿಸಿಕೊಟ್ಟು ಮಾನ್ಯ ಯಡಿಯೂರಪ್ಪನವರನ್ನು ಲಿಂಗಾಯತ ಧರ್ಮಿಯರ ಪ್ರಶ್ನಾತೀತ ನಾಯಕನನ್ನಾಗಿ ಮಾಡಬಲ್ಲೀರಾ ಎಂದು ನಂಬಿದ್ದೇನೆ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬಸವಕಲ್ಯಾಣ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!