Breaking News
Home / featured / ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

 

ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ.

ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ 17.2017 ರಂದು ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾದ ಸಭೆಯನ್ನು ಕರೆದು ಲಿಂಗಾಯತ ಧರ್ಮ ಹೋರಾಟದ ರೂಪುರೇಷೆಯನ್ನು ಸಿದ್ಧ ಪಡಿಸಲಾಯಿತು. ದಿನಾಂಕ 18.6.2017ರಂದು ಬಸವೋತ್ಸವ ಕಾರ್ಯಕ್ರಮದಲ್ಲಿ ಹೊರಾಟ ಮಾಡುವ ಸಂಕಲ್ಪವನ್ನು ಅಧಿಕೃತವಾಗಿ ಘೊಷಣೆ ಮಾಡಲಾಯಿತು.

ನಾನು *ದಿನಾಂಕ. 19.6.2017ರಂದು* ಪೂಜ್ಯ ಶ್ರೀ ಮಾತಾಜಿಯವರಿಗೆ ಪೋನ್ ಕರೆ ಮಾಡಿ ಹೋರಾಟದ ಸಂಕ್ಷಿಪ್ತ ಮಾಹಿತಿ ತಿಳಿದುಕೊಂಡೆ ಅಲ್ಲದೆ ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯವರನ್ನು ಬೀದರಗೆ ಬರಲು ಕೇಳಿಕೊಂಡಾಗ ಮಾತಾಜಿಯವರು ಒಪ್ಪಿಗೆ ಸೂಚಿಸಿ ಅವರನ್ನು ಕಳುಹಿಸಿಕೊಟ್ಟರು.

ಅಂದು ರಾತ್ರಿ ಪೂಜ್ಯರು ನಾವು ದೂರವಾಣಿ ಮೂಲಕ ಪ್ರಚಾರ ಹೇಗೆ ಮಾಡಬೇಕು ಮತ್ತು ಲಿಂಗಾಯತ ಸಂಘಟನೆಗಳು ಈ ಹೋರಾಟದಲ್ಲಿ ಒಳಗೊಳ್ಳುವಿಕೆಯ ಕುರಿತು ಏನೆಲ್ಲ ಕ್ರಮ ಅನುಸರಿಸಬೇಕೆಂದು ಚರ್ಚಿಸಿದೇವಲ್ಲದೆ, ಅವರು ಬೀದರಗೆ ಆದಷ್ಟು ಬೇಗ ಬರಲು ವಿನಂತಿಸಿದೆ.

ಲಿಂಗಾಯತ ಧರ್ಮದ ಹೋರಾಟಕ್ಕೆ ಐತಿಹಾಸಿಕ ಮುನ್ನಡಿಯನ್ನು ಬರೆದ ಸಭೆ:

ದಿನಾಂಕ ಜೂನ್ 28.2017 ರಂದು ಬೀದರ್ ಬಸವ ಮಂಟಪದಲ್ಲಿ ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ, ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿ, ಪೂಜ್ಯ ಶ್ರೀ ಸತ್ಯಾದೇವಿ ಮಾತಾಜಿ ನೇತೃತ್ವದಲ್ಲಿ ನಡೆಯಿತು. ಹಿರಿಯ ಶರಣರಾದ ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ, ಕುಶಲ ಪಾಟೀಲ ಖಾಜಾಪೂರು, ಬಸವರಾಜ ಸಂಗಮರ, ರಾಜೇಂದ್ರ ಜೊನ್ನಿಕೇರಿ, ಸುರೇಶ ಸ್ವಾಮಿ, ಶಾಂತಪ್ಪ ಮುಗುಳಿ, ಬಸವಂತರಾವ್ ಬಿರಾದಾರ, ರವಿಕಾಂತ ಬಿರಾದಾರ, ಮನ್ಮಥಸ್ವಾಮಿ, ಮಲ್ಲಿಕಾರ್ಜುನ ಜೇಲರ್ ಮತ್ತು ನಮ್ಮ ಯುವ ಕಾರ್ಯಕರ್ತರಾದ ಸಿದ್ರಾಮ ಶೆಟಗಾರ, ಗಣಪತಿ ಬಿರಾದಾರ, ನಾಗಶಟ್ಟಿ ಶೆಟಗಾರ ಸೇರಿದಂತೆ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾದ ಸಭೆಯಲ್ಲಿ ಭಾಗವಹಿಸಿದ್ದರು. ಹಸಿದ ಹೆಬ್ಬಾವಿನಂತೆ ಲಿಂಗಾಯತ ಧರ್ಮ ಮಹಾಸಭಾ ರಾಜ್ಯ ಸಂಚಾಲಕರಾದ ಶ್ರೀ ಕಾಂತ ಸ್ವಾಮಿಯವರು, ಭಾಲ್ಕಿ ಬಸವಕೇಂದ್ರದ ಕಿರಣ ಖಂಡ್ರೆಯವರು ಸಭೆಯ ಮುಂದೆ ಕ್ರಾಂತಿಕಾರಿಯಾಗಿ ಹೊರಾಟದ ಹಸಿವನ್ನು ವ್ಯಕ್ತಪಡಿಸಿದರು. ಅಲ್ಲದೆ ಬೀದರ್ ಜಿಲ್ಲೆಯ ಬಸವಪರ ಸಂಘಟನೆಗಳನ್ನು ಕೂಡಿಸಿಕೊಂಡು‌ ಹೋರಾಟ ಮಾಡಬೇಕೆಂಬ ಸಲಹೆ ಮುಂದಿಟ್ಟರು. ಇವರ ಸಲಹೆಯನ್ನು ಕೂಲಂಕುಷವಾಗಿ ಪರಿಗಣಿಸಿದ ಅಂದಿನ ಸಭೆ ಸರ್ವಾನುಮತದಿಂದ ಒಪ್ಪಿಕೊಂಡು ಲಿಂಗಾಯತ ಧರ್ಮ ಸಮನ್ವಯ ಸಮಿತಿಯನ್ನು ರಚಿಸಲಾಯಿತು.

ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಮತ್ತು ನಮ್ಮ ನೇತೃತ್ವದ ಮತ್ತು ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭೆಯ ಒಂದು ನಿಯೋಗವನ್ನು ಒಂದು ಮನವಿ ಪತ್ರದೊಂದಿಗೆ ಬೀದರ್ ಮಠಾಧೀಶರಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಿದೆವು. ಅದರಂತೆ ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದ್ದೇವರನ್ನು, ಹುಲಸೂರಿನ ಶಿವಾನಂದ‌ ಅಪ್ಪಗಳನ್ನು, ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರನ್ನು ಭೇಟಿ ಮಾಡಿ ಅವರಿಂದ ಹೋರಾಟದ ಸಲಹೆ ಪಡೆದೆವು. ಅವರು ಅತ್ಯುತ್ಸಾಹ ತೋರಿದರಲ್ಲದೆ, ತನು ಮನ ಧನ ಸಮಯದಿಂದ ಸಹಕರಿಸಲು ಒಪ್ಪಿದರು.

ದಿನಾಂಕ 10/07/2017 ರಂದು ಸಂಜೆ ಬೀದರ್ ಗಂಜ ಬಸವೇಶ್ವರ ದೇವಸ್ಥಾನದಲ್ಲಿ ಜಿಲ್ಲೆಯ ಬಸವಪರ ಸಂಘಟನೆಯ ಪೂಜ್ಯರ ಮತ್ತು ಲಿಂಗಾಯತ ಉದ್ಯಮಿಗಳ ಸಭೆಯನ್ನು ಬಸವೇಶ್ವರ ಗಂಜ್ ನ ಉದ್ಯಮಿದಾರರು ಒಂದು ಸಭೆಯನ್ನು ಆಯೋಜಿಸಿದರು. ಈ ಸಭೆಯು ಮುಂದಿನ ಹೋರಾಟಕ್ಕೆ ಒಂದು ದಿಕ್ಷೂಚಿ ಎಂದೇ ಹೇಳಬೇಕು. ಆ ಸಭೆಯಲ್ಲಿ ಶರಣ ಲಿಂ. ಕಾಶಪ್ಪ ದನ್ನೂರು, ಬಿ.ಜಿ. ಶೆಟಗಾರ, ಗುರುನಾಥ ಕೊಳ್ಳೂರು, ಶಿವಶರಣಪ್ಪ ವಾಲಿ, ಬಸವರಾಜ ಬುಳ್ಳಾ, ಬಸವರಾಜ ಧನ್ನೂರು, ಬಾಬು ವಾಲಿ, ಆನಂದ ದೇವಪ್ಪ, ರಮೇಶ ಮಠಪತಿ, ಬಸವರಾಜ ಭತಮುರ್ಗೆ, ರಾಜೇಂದ್ರ ಗಂದಗೆ, ಶ್ರೀಕಾಂತ ಸ್ವಾಮಿ, ಶಕುಂತಲಾ ಬೆಲ್ದಾಳೆ, ಕಾಶಿನಾಥ ಬೆಲ್ದಾಳೆ, ಸೋಮಶೇಕರ ಪಾಟೀಲ ಗಾದಗಿ, ವಿರುಪಾಕ್ಷಿ ಗಾದಗಿ ಇನ್ನಿತರ ಹಿರಿಯ ಲಿಂಗಾಯತ ಮುಖಂಡರು ಭಾಗವಹಿಸಿ ಅನೇಕ ಸಲಹೆ ಸೂಚನೆ ನೀಡಿ ಹೋರಾಟದ ಸಮಗ್ರ ರೂಪುರೇಷೆಯನ್ನು ಹೆಣೆದರು. ಅಂದಿನ ಸಭೆಯು ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳುವಳಿಯ ಮೊದಲ ಸಭೆಯಂತೆ ಕಂಗೊಳಿಸಿತು. ಮಹತ್ವ ಪೂರ್ಣ ಚರ್ಚೆಗಳೊಂದಿಗೆ ಸಭೆಯು ಮುಗಿಯಿತು.

ಲಿಂಗಾಯತ ಧರ್ಮಿಯರ ಐತಿಹಾಸಿಕ ಸಭೆ ಮತ್ತು ರ‌್ಯಾಲಿ:

ಬೀದರ ಜಿಲ್ಲೆಯು 12ನೇ ಶತಮಾನದ ಕ್ರಾಂತಿಯನ್ನು ಮರು ನೆನಪಿಸುವಂತೆ ಪ್ರಚಾರ ಸಭೆಯ ಕಾರ್ಯಗಳು ಅಭೂತಪೂರ್ವವಾಗಿ ನಡೆದವು; ಸುಮಾರು 9ಸುತ್ತಿನ ಸಭೆಗಳು ನಡೆದವು. ಬೀದರ ಜಿಲ್ಲೆಯ ಐದು ಆಯಾ ತಾಲೂಕಾವಾರು ರಾಷ್ಟ್ರೀಯ ಬಸವದಳಗಳ ಶರಣರನ್ನು ಕರೆದುಕೊಂಡು ನೂರಾರು ಹಳ್ಳಿಗಳಲ್ಲಿ ಸುಮಾರು 100 ಬೈಕ್ ತೆಗೆದುಕೊಂಡು ರ್ಯಾಲಿಗಳ ಮೂಲಕ ಪ್ರಚಾರ ಮಾಡಿ ಲಿಂಗಾಯತ ಮತ್ತು ಲಿಂಗಾಯತೇತರ ಬಸವಭಕ್ತರನ್ನು ಬಡಿದೆಬ್ಬಿಸಿ ಚಳುವಳಿಯಲ್ಲಿ ಭಾಗವಹಿಸಲು ಉತ್ಸಾಹ ತುಂಬಿದೆವು. ಯುವಕರು, ಮಹಿಳೆಯರು, ವೃದ್ಧರು, ಚಿಕ್ಕ ಮಕ್ಕಳಿಂದ ಅಭೂತಪೂರ್ವ ಬೆಂಬಲ ದೊರೆಯಿತು.

ಬೀದರ ಜಿಲ್ಲೆಯ ಲಿಂಗಾಯತ ಉಧ್ಯಮಿಗಳ ಸಹಕಾರ:

ಜಿಲ್ಲೆಯ ಉದ್ಯಮ ವರ್ಗ ಮತ್ತು ಬಸವಪರ ಸಂಘಟನೆಯ ಮುಖ್ಯಸ್ಥರು ತಾಲೂಕಾವಾರು 100ಕ್ಕೂ ಹೆಚ್ಚು ಕಾರ್ ರ್ಯಾಲಿ ಮಾಡಿದರು ಇದರಿಂದ ಲಿಂಗಾಯತ ಯುವಕರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದರು. ಹೋರಾಟಕ್ಕೆ ಕೆಚ್ಚು ತುಂಬಿದರು. ಇವರ ಪ್ರಾಮಾಣಿಕ ಕಾರ್ಯವೈಖರಿ ಮುಂದಿನ ಎಲ್ಲಾ ಹೋರಾಟಗಳಿಗೆ ಶಕ್ತಿ ಒದಗಿಸಿತೆಂದರೆ ತಪ್ಪಾಗಲಾರದು. ಅವರ ಸಹಕಾರ ಮತ್ತೊಮ್ಮೆ ಗರಿಗೆದರಿ ಎರಡನೇ ಹೋರಾಟಕ್ಕೆ ಮುನ್ನುಡಿ ಬರೆಯುವದೇ ಕಾದು ನೋಡಬೇಕು.

ರಾಜಕಾರಣಿಗಳ ಧನ ರಹಿತ ಮನ ಮತ್ತು ಸಮಯ ಸಹಕಾರ:

ಬೀದರ್ ಜಿಲ್ಲೆಯಲ್ಲಿ ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆಯವರನ್ನು ಹೊರತು ಪಡಿಸಿ, ಉಳಿದೆಲ್ಲ ಲಿಂಗಾಯತ ರಾಜಕಾರಣಿಗಳು ಹಣ ರಹಿತ ಮನ ಮತ್ತು ಸಮಯ ನೀಡಿ ಸಂಪೂರ್ಣ ಸಹಕರಿಸಿದರು ಹಾಗೂ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಬೀದರನ ನೆಹರು ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಅಭೂತಪೂರ್ವ ಪ್ರಥಮ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಿದರು.

ಬೀದರ ಜಿಲ್ಲೆಯ ಬಸವತತ್ವದ ಮಠಾಧೀಶರ ಐತಿಹಾಸಿಕ ಒಗ್ಗಟ್ಟು ಪ್ರದರ್ಶನ:

ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು, ಪೂಜ್ಯ ಶ್ರೀ ಮ.ಘ.ಚ.ಡಾ.ಬಸವಲಿಂಗ ಪಟ್ಟದ್ದೇವರು, ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು, ಪೂಜ್ಯ ಶ್ರೀ ಸಿದ್ಧರಾಮ ಶರಣರು, ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ, ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ, ಪೂಜ್ಯ ಶ್ರೀ ಅಕ್ಕ ಗಂಗಾಬಿಕೆ, ಬಸವ ಧರ್ಮ ಪೀಠದ ಜಗದ್ಗುರು ಜಂಗಮ ಮೂರ್ತಿಗಳ ಒಗ್ಗಟ್ಟು ಪ್ರದರ್ಶನವು ನಂತರ ಕರ್ನಾಟಕ, ಮಹಾರಾಷ್ಟ್ರದಲ್ಲಿ ನಡೆದ ಎಲ್ಲ ಹೊರಾಟಗಳಿಗೆ ಬಹುದೊಡ್ಡ ಮುನ್ನಡೆಯನ್ನು ತಂದುಕೊಟ್ಟಿತು.

ಜುಲೈ 19.2017 ಬೀದರ ಮಹಾನಗರದಲ್ಲಿ ಐತಿಹಾಸಿಕ ಲಿಂಗಾಯತ ಧರ್ಮಿಯರ ಹೊರಾಟ:

ಅಂದು ಬೀದರ ನಗರವು ನವ ವಧುವಿನಂತೆ ಕಂಗೊಳಿಸಿತು. ನೆಹರು ಕ್ರೀಡಾಂಗಣ ಮದುವೆ ಮಂಟಪದಂತೆ ಭಾಸವಾಯಿತು. ಎಲ್ಲೆಡೆ ಗುರು ಬಸವಣ್ಣನವರ ಭಾವಚಿತ್ರದ ಷಟಸ್ಥಲದ ಧ್ವಜಗಳು ರಾರಾಜಿಸಿದವು, ಎಲ್ಲೆಡೆ ಲಕ್ಷಾಂತರ ಲಿಂಗಾಯತ ಧರ್ಮಿಯರಿಂದ ಬೀದರನ ಗಲ್ಲಿ ಗಲ್ಲಿಗಳು ತುಂಬಿ ತುಳುಕಿದವು. ವೇದಿಕೆ ಮೇಲೆ ಪೂಜ್ಯ ಮಾತಾಜಿಯವರ ಪ್ರತಿಜ್ಞೆಗಳು, ಬೀದರ ಜಿಲ್ಲೆಯ ಪೂಜ್ಯರ ಒಂದೊಂದು ಮಾತುಗಳು ರೋಮಾಂಚನದಿಂದ ಕೂಡಿ, ಯುವಕರಲ್ಲಿ ಅತ್ಯತ್ಸಾಹವನ್ನು ತುಂಬಿದವು, ಹೋರಾಟದ ಕೆಚ್ಚು ಗಟ್ಟಿಗೊಳಿಸಿದವು. ಇದು ನಮ್ಮ ಕಾಲದಲ್ಲಿಯೇ ಈ ಹೋರಾಟವನ್ನು ನೋಡುವ ಭಾಗ್ಯ ಸಿಕ್ಕಿತೆಂಬ ಸಂತಸದಲ್ಲಿ ಹಿರಿಯ ಜೀವಗಳು ನಲಿನಲಿದಾಡಿದವು. ಜಿಲ್ಲೆಯ ವೈದ್ಯರ, ವಕೀಲರ, ಕಾರ್ಮಿಕರ, ಶಿಕ್ಷಕರ, ಸರಕಾರಿ ನೌಕರರ, ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಧರ್ಮಿಯರ ಬೆಂಬಲವನ್ನು ನಾವು ಎಂದೂ ಮರೆಯುವಂತಿಲ್ಲ.

ಬಸವರಥದ ಮೆರವಣಿಗೆಯು ಸುಮಾರು 3ಗಂಟೆಗಳ ಕಾಲ ನೆಹರು ಮೈದಾನದಿಂದ ಅಂಬೇಡ್ಕರ್ ವೃತ್ತದ ಹಿಂದಿನ ಭಾಗದಿಂದ, ಗಡಿಯಾರ ಕಂಭ ಮಾರ್ಗವಾಗಿ, ಗುರು ಬಸವೇಶ್ವರ ವೃತ್, ಭಗತ್ ಸಿಂಗ್ ವ್ತತ್ತವನ್ನೊಳಗೊಂಡು, ಶಿವಾಜಿ ವೃತ್ತದಲ್ಲಿ ಸಮಾಪ್ತಿಯಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಭಾಲ್ಕಿ ಶ್ರೀಗಳು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರವು ಶಿಫಾರಸ್ಸು ಮಾಡುವಂತೆ ಒತ್ತಾಯಸಿ ಮನವಿ ಸಲ್ಲಿಸಿದರು. ನಂತರ ನಮ್ಮ ಹೋರಾಟಕ್ಕೆ ಅಸ್ತು ಎನ್ನುವಂತೆ ದೇವರು ವರುಣನ ಮೂಲಕ ಹೂ ಮಳೆಗೆರೆದಿದ್ದು ನಿಜಕ್ಕೂ ಹೋರಾಟ ನಿರತ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತು. ಒಂದು ಕ್ಷಣವೂ ತಡ ಮಾಡದೇ ಕುಣಿದು ಕುಪ್ಪಳಿಸಿದರು. ಫುಜ್ಯರು ಕಾರ್ಯಕರ್ತರ ಉತ್ಸಾಹಕ್ಕೆ ಜೀವಕಳೆ ತುಂಬಿ ಹೆಜ್ಜೆ ಹಾಕಿದರು. ಆ ಕ್ಷಣ ನಮ್ಮೊಳಗಿನ ಮತಿಯ ಭೇದಗಳನ್ನು ಮರೆತು ಸಹೋದರ ಭಾವದಲ್ಲಿ, ಪ್ರೀತಿಯ ಬೆಸುಗೆಯಲ್ಲಿ ಒಂದಾಗಿದ್ದೆವು. ಇದಕ್ಕೆಲ್ಲಾ ಕಾರಣ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಈ ಸಮಿತಿಗೆ ಅನಂತ ಕೋಟಿ ಕೃತಜ್ಞತೆಗಳನ್ನು ಸಲ್ಲಿಸಲೇಬೆಕು. ಇದೆಲ್ಲವೂ ಈಗ ಇತಿಹಾಸ. ನೆನೆದರೆ ದುಃಖ ಮತ್ತು ಆನಂದಭಾಷ್ಪ ಮರುಕಳಿಸುತ್ತವೆ. ಇಂತದ್ದೊಂದು ಹೊರಾಟಕ್ಕೆ ಬೀದರ ಜಿಲ್ಲೆ ಮುನ್ನುಡಿ ಬರೆದಿತ್ತಾ? ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ಈಗ ಬಸವಪರ ಸಂಘಟನೆಯ ನಾವುಗಳು ಮನಸ್ಸನ್ನು ಸಂಕುಚಿತಗೊಳಿಸಿಕೊಂಡಿದ್ದು ದುರಂತವೇ ಸರಿ. ಇದೆಲ್ಲವುಗಳನ್ನು ಮರೆತು ಮತ್ತೇ ಹೋರಾಟದ ಸರಣಿ(ಪೇಸ್-2) 2ರಲ್ಲಿ ಒಂದಾಗುತ್ತೇವೆ ಎಂಬ ಆಶಾಭಾವನೆಯಿಂದ ನನ್ನ ಬರಹಕ್ಕೆ ವಿರಾಮ ನೀಡುತ್ತೇನೆ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬಸವಕಲ್ಯಾಣ

About Shivanand

Admin : Lingayat Kranti Monthly news paper 8884000008 [email protected]

Check Also

ಲಿಂಗಾಯತ ದಿಟ್ಟ ಶರಣೆ: ಪ್ರೇಮಕ್ಕಾ ಅಂಗಡಿ

  ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ …

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!