ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು ತಮ್ಮ ಜೀವದ ಪರಿವೆ ಇಲ್ಲದೆ ಬಸವಾದಿ ಶರಣರ ವಚನಗಳನ್ನು ಕಾಪಾಡಲು ಹೋರಾಟ ಮಾಡಿದ್ದರು, ಅದರಲ್ಲಿ ನೂರಾರು ಶರಣರು ತಮ್ಮ ಜೀವ ಕೊಟ್ಟರು, ಕೊಲೆ ಆಯಿತು, ಹಲವಾರು ಶರಣರು ಉರು ಕುಟುಂಬ ತೊರೆದು ಜೀವದ ಹಂಗಿಲ್ಲದೆ ವಚನ ಸಾಹಿತ್ಯ ಕಾಪಾಡಿದರು. ಒಂದು ವೇಳೆ ಶರಣರು ಈ ಕಾರ್ಯ ಮಾಡಿಲ್ಲ ಅಂದರೆ ಭಾರತೀಯ ಪುರಾಣ ಕಥೆಗಳ ತರಹ ಕಲ್ಯಾಣ ಕ್ರಾಂತಿ ಕೂಡ ಸಾಹಿತ್ಯಕ್ಕೆ ಸೀಮಿತವಾಗಿರುತಿತ್ತು.
ಬಸವಣ್ಣನವರ ಕಲ್ಯಾಣ ಕ್ರಾಂತಿ ಯಾವ ಮಟ್ಟಿಗೆ ಜನರ ಮೇಲೆ ಪ್ರಭಾವ ಬೀರಿತ್ತು ಅಂದರೆ, ಜನ ಯಾವುದೇ ಮಠ ಮಾನ್ಯ, ಪೂಜ್ಯರು, ಗುರುಗಳು ಇಲ್ಲದ ಹಾಗೆ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಾ ಹೊರಟರು. ವೈದಿಕರ ಪ್ರಭಾವ, ಪುರೋಹತಶಾಹಿಗಳ ಒತ್ತಡದ ಮಧ್ಯವು ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ ಕುಗ್ರಾಮಗಳಲ್ಲಿ ಜಾತಿ ಲಿಂಗ ಭೇದ ಇಲ್ಲದೆ ಆಚರಣೆಯಲ್ಲಿ ಇದ್ದವು. ಗ್ರಾಮೀಣ ಭಾಗದಲ್ಲಿ ವಚನಗಳು ಇಲ್ಲದಿದ್ದರೂ ಜಾನಪದ ಪದ್ಯಗಳ ಮುಖಾಂತರ ಬಸವಣ್ಣ ಅವರ ವ್ಯಕ್ತಿತ್ವ ಕೊಂಡಾಡಿದರು. ಅದರಲ್ಲಿ ಹಂತಿ ಪದ, ಜೋಗುಳ ಪದ, ಭೂಲಾಯಿ ಪದ, ಶಿಗಿ ಪದ, ಗಿಗಿ ಪದ,ಭಜನಾ ಹಾಡುಗಳು, ಕೋಲಾಟ ಹಾಡುಗಳು, ರೈತರ ರೈತ ಕೂಲಿ ಕಾರ್ಮಿಕರ ಕ್ರಾಂತಿ ಪದ, ಬಹುರೂಪಿಗಳ ರೂಪಕ ಹೀಗೆ ಎಲ್ಲ ದಿನ ನಿತ್ಯ ಕಾರ್ಯದಲ್ಲಿ ಬಸವಾದಿ ಶರಣರ ಕ್ರಾಂತಿಗಳು ತತ್ವಗಳು ರಾರಾಜಿಸುತ್ತ ಇದ್ದವು. ಈ ಜನ ಪದಗಳೇ ಬಸವಣ್ಣನವರ ಪ್ರಚಾರಕ್ಕೆ ಪೂರಕ ಆದವು, ನೂರಾರು ವರ್ಷ ಬಸವ ತತ್ವ ಪ್ರಚಾರ ಮಾಡಿದ್ದೆ ಜನಸಾಮಾನ್ಯರು.
ಇಂದಿಗೂ ಕೂಡ ಬಸವಣ್ಣನವರ ವಾರಸುದಾರರು ಹಾಗೂ ಸಂಸ್ಥೆಗಳು ಇಲ್ಲಿಯವರೆಗೆ ಬಸವಣ್ಣನವರ ತತ್ವ ಹಾಗೂ ಧರ್ಮದ ಮೇಲೆ ಪ್ರಹಾರ ಮಾಡುತ್ತಾ ಇವೆ, ಬಸವಣ್ಣನವರಿಗೆ ಒಳಗಿನವರೆ ಮೊದಲು ಶತ್ರುಗಳು ಆಗಿದ್ದಾರೆ.
ಇಂದು ಸರಕಾರ ಮಾಡುತ್ತಿರುವ ನಿಗಮದ ಕುತಂತ್ರ, ಮೀಸಲಾತಿ ಮುಖಾಂತರವೂ ಕೂಡ ಬಸವಾದಿ ಶರಣರ ತತ್ವ ಹಾಗೂ ಧರ್ಮಕ್ಕೂ ಹೊಡೆತ ಕೊಡುವ ಹುನ್ನಾರವೇ ಆಗಿದೆ. ಇಂದಿಗೂ ರಾಜಕೀಯ ಉಳಿವಿಗು ಕೂಡ ಬಸವಣ್ಣನವರ ಧರ್ಮವೇ ಆಯುಧ ಆಗಿದೆ. ಇಂದು ಆಗಿದ್ದು ಅದೇ, ಸರಕಾರ ನಡೆಸಲು ರಾಷ್ಟ್ರೀಯ ನಾಯಕರು ಅಡೆತಡೆ ಮಾಡಿದರೆ ಆರೆಸಸ್ ಸಂಸ್ಥೆಗೆ ಬೇಡವಾದ ಲಿಂಗಾಯತರಿಗೆ ಕೇಂದ್ರದಲ್ಲಿ ಮೀಸಲಾತಿ ಕೊಡುತ್ತೇವೆ ಎಂದು ಉಪಯೋಗಿಸಿದ ತಂತ್ರಗಾರಿಕೆ. ಅದಕ್ಕೆ ಹೆದರಿ ನಾಗಪುರ ದಿಂದ ಬಂದ ಸಂದೇಶದಿಂದ ರಾಷ್ಟ್ರೀಯ ನಾಯಕರು ಮುಖ್ಯಮಂತ್ರಿ ಯವರಿಗೆ ಮೀಸಲಾತಿ ತಡೆಹಿಡಿಯಲು ಯಶಸ್ವಿ ಆದರು. ಮುಖ್ಯಮಂತ್ರಿಯವರಿಗೆ ಕೂಡ ತನ್ನ ಕುರ್ಚಿ ಉಳಿಯಬೇಕಾಗಿತ್ತು, ಅದಕ್ಕೆ ಮೀಸಲಾತಿ ಕೈ ಬಿಟ್ಟರು, ಅವರ ತಂತ್ರ ಕೆಲಸ ಕೊಟ್ಟಿತ್ತು.
ನಾವು ಕ್ರೈಸ್ತ ರಲ್ಲಿ ಇರುವ ಬಡವರು ತತ್ವ ನಿಷ್ಠೆ ಬಗ್ಗೆ ಗಮನಕೊಡಬೇಕು. 1991 ರಲ್ಲಿ ನಮ್ಮ ಬೀದರ ಮನೆ ಕಟ್ಟುವಾಗ ಒಬ್ಬ ಉಪಾರ ಕ್ರೈಸ್ತ ಆಗಿದ್ದ, ಅವನ ಮಗನು ಪೊಲೀಸ್ ನೇಮಕಾತಿಗೆ ಅರ್ಜಿ ಹಾಕಬೇಕಿತ್ತು, ಅವನು ನನ್ನ ಸಲಹೆ ಕೇಳಿದ, ಅದಕ್ಕೆ ನಾನು ಅವನಿಗೆ ಹೇಳಿದ್ದೆ ನೀವು ಮಾದಿಗರು, ಮಾದಿಗ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿದ್ದರೆ, ನಿನಗೆ ಸಲೀಸಾಗಿ ಸರಕಾರಿ ನೌಕರಿ ಸಿಗುತ್ತದೆ ಅಂದೆ.ಅದಕ್ಕೆ ಅವನು ಉತ್ತರ ಕೊಟ್ಟಿದ್ದು ಕೇಳಿ ನನಗೆ ದಿಗಿಲಾಗಿತ್ತು, ಅವನು ಹೇಳಿದ್ದ ಸರ್ ನಾನು ಕ್ರೈಸ್ಟ್ ದೊಡ್ಡ ಧರ್ಮದವ, ನಾನೇಕೆ ದಲಿತ ಆಗಲಿ, ನನಗೆ ನೌಕರಿಗಿಂತ ಏಸು ಸಿದ್ಧಾಂತ ಬೇಕು ಅಂದ, ದಲಿತ ಆಗಿ ನಿಮ್ಮ ಸೇವೆ ಮಾಡುವದಗಿಂತ ದುಡಿದು ತಿನ್ನುತೇವೆ ಅಂದ. ಅದೇ ನಾವು ಲಿಂಗಾಯತರು ಕೂಡ ಈ ಜುಜುಬಿ ನಿಗಮ ಮೀಸಲಾತಿ ಗಿಂತ ಬಸವಾದಿ ಶರಣರ ತತ್ವ ಸಿದ್ಧಾಂತ ಸಾಕು, ಇದರಿಂದ ನಾವು ಉನ್ನತವಾದ ಜೀವನ ಸಾಗಿಸಬಹುದು.
ಲಿಂಗಾಯತ ಧರ್ಮ ಬಸವ ತತ್ವ ಪ್ರಚಾರಕ್ಕೆ ಯಾವುದೇ ರಾಜ್ಯ ರಾಷ್ಟ್ರೀಯ ಉನ್ನತ ನಾಯಕರ ಅವಶ್ಯಕತೆ ಇಲ್ಲ, ಇವರು ಕೇವಲ ಸಮಾಜದಲ್ಲಿ ಇರುವ ಬಡವರಿಗೆ ದೊರೆಯುವ ಸಹುಲತ್ತುಗಳಿಗೆ ಕಲ್ಲು ಹಾಕಬಹುದು, ಆದರೆ ಬದುಕು ಕಟ್ಟಿಕೊಳಲ್ಲು ಬಸವಣ್ಣ ಕೊಟ್ಟ ಕಾಯಕ ಸಿದ್ಧಾಂತ, ಸಮಾಜ ಕಟ್ಟುವ ದಾಸೋಹ ಸಿದ್ಧಾಂತಗಳನ್ನು ಕಸಿದುಕೊಳಲ್ಲು ಇವರಿಂದ ಸಾಧ್ಯ ಇಲ್ಲ. ನಾವು ಲಿಂಗಾಯತರು ಇಂತಹ ನಾಯಕರ ಬೆದರಿಕೆಗೆ ಕುತಂತ್ರಕ್ಕೆ ಬಲಿ ಆಗುವದಿಲ್ಲ, ನಾವು ನಮ್ಮ ಹೋರಾಟ ಹೀಗೆ ಮುಂದುವರಿಸುತ್ತೇವೆ, ನಮಗೆ ಮುಖ್ಯವಾದುದು ನಮ್ಮ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಹಾಗೂ ಧರ್ಮಕ್ಕೆ ಅಲ್ಪಸಂಖ್ಯಾತ ಸೌಲಭ್ಯ.
ಎಲ್ಲರೂ ಒಗ್ಗಟ್ಟಾಗಿ ಮತ್ತೊಮ್ಮೆ ಹೋರಾಟಕ್ಕೆ ಮುನ್ನುಡಿ ಬರೆಯೋಣ, ಸಿಗ್ರದಲ್ಲೆ ಬೀದರ ದಿಂದ ಕ್ರಾಂತಿಯ ಕಹಳೆ ಉದುತ್ತೇವೆ.
ಜೈ ಬಸವ ಜೈ ಲಿಂಗಾಯತ
ಶ್ರೀಕಾಂತ ಸ್ವಾಮಿ ಬೀದರ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.