Breaking News
Home / featured / ಬೀದರನಲ್ಲಿ ೧೭, ೧೮ ಮತ್ತು ೧೯ ರಂದು ವಚನ ವಿಜಯೋತ್ಸವ -೨೦೧೯

ಬೀದರನಲ್ಲಿ ೧೭, ೧೮ ಮತ್ತು ೧೯ ರಂದು ವಚನ ವಿಜಯೋತ್ಸವ -೨೦೧೯

ಶರಣರ ನಾಡು ಬೀದರ ನಗರದಲ್ಲಿ
ಫೆಬ್ರುವರಿ ೧೭, ೧೮ ಮತ್ತು ೧೯ ರಂದು
ವಚನ ವಿಜಯೋತ್ಸವ -೨೦೧೯

ಬಸವಾದಿ ಶರಣರ ವಚನಗಳು ಅಧ್ಯಾತ್ಮದ ತವನಿಧಿ, ಮಾನವೀಯತೆಯ ಸಾಗರ. ಶಾಂತಿಯ ಆಗರ. ಪರಮ ಚೈತನ್ಯದ ಚೆನ್ನುಡಿ: ಭವತಾರಕ ಮಂತ್ರ. ಸುಧಾ ವಾಹಿನಿ. ಕ್ರಾಂತಿಯ ಕಿಡಿ, ಇದಕ್ಕೆ ಸಮನಾದ ಸಾಹಿತ್ಯ ಪ್ರಕಾರ ಪ್ರಪಂಚದಲ್ಲೆಲ್ಲಿಯೂ ಕಾಣಸಿಗದು.
ವಚನ ಸಾಹಿತ್ಯ ದೇಶ-ಕಾಲಾತೀತವಾಗಿ ಸದಾ ಪ್ರಸ್ತುತ. ವಚನಗಳು ಭರವಸೆಯ ಬೆಳಕಾಗಿ ಬದುಕನ್ನು ಹಸನುಗೊಳಿಸುತ್ತವೆ. ಇಂತಹ ವಚನ ಸಾಹಿತ್ಯ ಕನ್ನಡದಲ್ಲಿರುವುದು ಕನ್ನಡಿಗರ ಪುಣ್ಯ. ವಚನಗಳಿಂದಾಗಿಯೇ ಕನ್ನಡ ಧರ್ಮ ಭಾಷೆಯ ಸ್ಥಾನ ಪಡೆದಿದೆ. ಶಾಸ್ತ್ರೀಯ ಸ್ಥಾನಮಾನಕ್ಕೆ ಭಾಜನವಾಗಿದೆ.
೧೨ನೇ ಶತಮಾನದಲ್ಲಿ ಶರಣರ ಅನುಭಾವದ ಮೂಸೆಯಲ್ಲಿ ಮೂಡಿ ಬಂದ ವಚನಗಳು ೨೧ನೇ ಶತಮಾನದಲ್ಲಿಯ ನಮಗಾಗಿ ಉಳಿಸಿ ಕೊಟ್ಟದ್ದರ ಹಿಂದೆ ಶರಣರ ವೀರಗಾಥೆ ಇದೆ. ಬಲಿದಾನವಿದೆ. ಕಲ್ಯಾಣ ಕ್ರಾಂತಿಯ ಬೀಜವಾದ ವಚನ ಸಾಹಿತ್ಯವನ್ನು ನಾಶಗೊಳಿಸಬೇಕೆಂಬ ಪುರೋಹಿತಶಾಹಿಗಳ, ಸಂಪ್ರದಾಯವಾದಿಗಳ ಮತ್ತು ರಾಜ್ಯಶಾಹಿಗಳ ಕುತಂತ್ರಕ್ಕೆ ಪ್ರತಿಯಾಗಿ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿದ ಶರಣರು ವಚನ ಸಾಹಿತ್ಯವನ್ನು ಸಹ್ಯಾದ್ರಿ ತಪ್ಪಲಿನ ಉಳವಿಯ ದಟ್ಟ ಅರಣ್ಯದಲ್ಲಿ ಸಂರಕ್ಷಿಸುವಲ್ಲಿ ಯಶಸ್ವಿಯಾದರು. ವಚನ ರಕ್ಷಣೆಯ ಹೋರಾಟದಲ್ಲಿ ಅನೇಕ ಶರಣಚೇತನಗಳು ಮಾರ್ಗಮಧ್ಯದಲ್ಲಿಯೇ ಪ್ರಾಣಾರ್ಪಣೆ ಮಾಡಬೇಕಾಯಿತು. ಉಳಿವೆಯ ಕಾಡಿನಲ್ಲಿ ಸುರಿಯುವ ಮಳೆಯಲ್ಲಿ, ಕೊರೆಯುವ ಚಳಿಯಲ್ಲಿ, ರಕ್ತ ಹೀರುವ ಜಿಗಣಿಗಳನ್ನು ಲೆಕ್ಕಿಸದೆ, ಮರಗಳ ಮೇಲೆ ದಿನರಾತ್ರಿಗಳನ್ನು ಕಳೆದು, ವಚನ ಸಾಹಿತ್ಯ ಜ್ಯೋತಿಯನ್ನು ನಂದದಂತೆ ರಕ್ಷಿಸಿದರು.
ತಮ್ಮ ಜೀವತೆತ್ತು ನಮಗಿತ್ತ ’ವಚನ ಸಾಹಿತ್ಯ ಸಂರಕ್ಷಣೆಯ’ ಐತಿಹಾಸಿಕ ಘಟನೆಯನ್ನು ನಮ್ಮ ಪೀಳಿಗೆ ಮರೆಯಬಾರದು. ಅದಕ್ಕಾಗಿ ವಚನ ಸಾಹಿತ್ಯ ಸಂರಕ್ಷಣೆಯ ಸ್ಮರಣೆಗಾಗಿ ಲಿಂಗಾಯತ ಮಹಾಮಠ ಬೀದರ ಮತ್ತು ಬಸವ ಸೇವಾ ಪ್ರತಿಷ್ಠಾನದಿಂದ ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿಯವರ ಸಾನಿಧ್ಯದಲ್ಲಿ ಪ್ರತಿ ವರ್ಷವೂ ವಚನ ವಿಜಯೋತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ೨೦೧೯ನೇ ಸಾಲಿನ ’ವಚನ ವಿಜಯೋತ್ಸವ’ವು ಫೆಬ್ರುವರಿ ೧೭, ೧೮ ಮತ್ತು ೧೯ ರಂದು ಅರ್ಥಪೂರ್ಣವಾಗಿ ನೆರವೇರಲಿದ್ದು, ಈ ಉತ್ಸವದಲ್ಲಿ ತಾವೆಲ್ಲರೂ ಪಾಲ್ಗೊಂಡು ಪುನೀತರಾಗಬೇಕಾಗಿ ಮನವಿ.
ರಮೇಶಸ್ವಾಮಿ ಕನಕಟ್ಟಾ
ಬೀದರ

ಬಸವ ಭಕ್ತರ ತಾತ್ವಿಕ ಶ್ರದ್ಧಾಕೇಂದ್ರವಾಗಿ ’ಗುರುವಚನ ಪರುಷ ಕಟ್ಟೆ’ ಯೋಜನೆ

ಶರಣರ ಸಮಗ್ರ ಕ್ರಾಂತಿಯ ದಿವ್ಯಕ್ಷೇತ್ರ ಬೀದರ ಜಿಲ್ಲೆಯು ಬಸವ ಭೂಮಿಯೆಂದೇ ಸುಪ್ರಸಿದ್ಧ. ವಚನ ಸಾಹಿತ್ಯ ಗಂಗೆಯ ಗಂಗೋತ್ರಿ ಇದು. ಆದರೆ ಇಲ್ಲಿಗೆ ಬಂದವರಿಗೆ ಬಸವಾದಿ ಶರಣರ ಜೀವನ-ಸಂದೇಶಗಳ ದರ್ಶನ ಮಾಡಿಸುವ ಒಂದೇ ಒಂದು ಸ್ಮಾರಕವೂ ಇಲ್ಲದಿರುವುದು ಬಹುದೊಡ್ಡ ಕೊರಗು.
ಬಸವಣ್ಣನವರ ವಿಚಾರಧಾರೆಯನ್ನು ಜನಮನದಲ್ಲಿ ಹರಿಸಿ, ಜನರ ಬದುಕನ್ನು ಹಸನುಗೊಳಿಸಲು ಲಿಂಗಾಯತ ಮಹಾಮಠ ಬೀದರ ಮತ್ತು ಬಸವ ಸೇವಾ ಪ್ರತಿಷ್ಠಾನವು ಹತ್ತು ಹಲವು ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಶರಣರು ಅಡಿಯಿಟ್ಟು ಸುಕ್ಷೇತ್ರವೆನಿಸಿದ ಬಸವಗಿರಿಯಲ್ಲಿ ಬಸವ ಭಕ್ತರ ಶ್ರದ್ಧಾಕೇಂದ್ರವಾಗಿ ’ಗುರುವಚನ ಪರುಷ ಕಟ್ಟೆ’ ಎಂಬ ಬೃಹತ್ ಸ್ಮಾರಕವನ್ನು ನಿರ್ಮಿಸಲು ಯೋಜಿಸಲಾಗಿದೆ.
ನಿರಂತರ ವಚನ ಪಾರಾಯಣ ಮಂಟಪ, ಇಷ್ಟಲಿಂಗಯೋಗ ಕೇಂದ್ರ, ಶರಣ ಸಾಹಿತ್ಯ ಗ್ರಂಥಾಲಯ, ಶರಣರ ಚರಿತ್ರೆಯನ್ನು ಮನದಟ್ಟು ಮಾಡಿಕೊಂಡುವಂಥ ವಸ್ತು ಸಂಗ್ರಹಾಲಯ, ಶರಣ ಸಂಸ್ಕಾರ ತರಬೇತಿ ಕೇಂದ್ರ ಮತ್ತು ಅತಿಥಿಗೃಹ ಮುಂತಾದ ಸೌಲಭ್ಯಗಳನ್ನು ಈ ಸ್ಮಾರಕದಲ್ಲಿ ಕಲಿಸಲಾಗುವುದು.
ಹನ್ನೆರಡನೇಯ ಶತಮಾನದಲ್ಲಿ ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತೆಯ ತಳಹದಿಯ ಮೇಲೆ ಸರ್ವ ಶೋಷಣಾಮುಕ್ತ ಸಮಾಜ ಕಟ್ಟಬಯಸಿ, ಮಾನವೀಯ ಮೌಲ್ಯಗಳನ್ನು ಬೋಧಿಸಿದ ಮಂತ್ರಪುರುಷ ಬಸವಣ್ಣನವರು, ಕಲ್ಯಾಣ ಪಟ್ಟಣದಲ್ಲಿ ಪ್ರತಿದಿನ ಜನತೆಯ ಸುಖ ದುಃಖಗಳನ್ನು ಆಲಿಸುತ್ತಿದ್ದರು. ಜನ ತಂಡೋಪ ತಂಡಗಳಲ್ಲಿ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಬೇಡಿದವರಿಗೆ ಬೇಡಿದುದನ್ನು ಇಲ್ಲೆನ್ನದೇ ಈವ ಬಸವ ಎಂಬ ಮಾತು ಅಂದು ಬಹು ಪ್ರಚಲಿತವಾಗಿತ್ತು. ಇಂದಿಗೂ ಅದು ಸತ್ಯ. ಬಸವಣ್ಣನವರಲ್ಲಿ ಶರಣು ಬಂದವರು ಯಾರೂ ಬರಿಗೈಯಿಂದ ಹೋಗಲಾರರು. ಅಂದು ಜನರ ಸಮಸ್ಯೆಗಳನ್ನು ಪರಿಹರಿಸಿ ದುಃಖ ದುಮ್ಮಾನಗಳನ್ನು ದೂರಮಾಡಲು ಬಸವಣ್ಣನವರು ನಿತ್ಯ ಕುಳಿತುಕೊಳ್ಳುತ್ತಿದ್ದ ಕಟ್ಟೆಯೇ ಪರುಷ ಕಟ್ಟೆ ಎಂದು ಪ್ರಸಿದ್ಧವಾಯಿತು.

ಅಂದು ಇಂದು ಮುಂದು, ಎಂದೆಂದಿಗೂ ಗುರುಬಸವಣ್ಣನವರು ವಚನಗಳ ರೂಪದಲ್ಲಿ ನಮ್ಮೊಂದಿಗಿದ್ದಾರೆ. ಇಂದಿಗೂ ವಚನಗಳ ಮುಲಕ ತಮ್ಮೊಂದಿಗೆ ಮಾತನಾಡುತ್ತಾರೆ. ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾರೆ. ಪರುಷ ಮುಟ್ಟಿದ ಲೋಹ ಚಿನ್ನವಾಗುವಂತೆ, ವಚನಪರುಷ ಮುಟ್ಟಿದ ಜೀವನ ಉಜ್ಜೀವನ. ಬದುಕು ಬಂಗಾರ., ಸುಖ ಶಾಂತಿಯ ನೆಮ್ಮದಿಯ ತಾಣ. ವಚನಗಳು ಶ್ರೇಷ್ಣ ಮಂತ್ರಗಳು. ಹಿಂದೆ ಲೋಕ ನಡೆದು ಬರಲೆಂದು ಸೆರಗು ಕೊಟ್ಟು ಹೋದ ನಮ್ಮ ಬಸವಯ್ಯ ಎನ್ನುತ್ತಾರೆ ಅಕ್ಕನಾಗಲಾಂಬಿಕಾ ತಾಯಿ. ಸೆರಗು ಎಂದರೆ ಅಭಯದ ಆಸರೆ. ಜೀವನದ ಕಷ್ಟ-ನಷ್ಟಗಳಲ್ಲಿ ಭಾವ ಬೇಗೆಯಲ್ಲಿ ಬೆಂದ ಮನಗಳಿಗೆ ಸಮಾಧಾನದ ಸಿಂಚನ ನೀಡುವ ತಾಯಿಯ ಮಡಿಲಾಗಿ ಈ ’ಗುರುವಚನ ಪರುಷ ಕಟ್ಟೆ’ ನಿರ್ಮಾಣಗೊಳ್ಳುತ್ತಿದೆ.
ಬಸವ ಭಕ್ತರ, ಬಸವಾಭಿಮಾನಿಗಳ ಶ್ರದ್ಧೆಯ ಕೇಂದ್ರ-ಹೆಮ್ಮೆಯ ತಾಣವಾಗಿ ಬಹುಕೋಟಿ ಯೋಜನೆಯಲ್ಲಿ ಬೃಹತ್ ಪ್ರಮಾಣದಲ್ಲಿ ಮೈದಾಳಿ ಲೋಕಾರ್ಪಣೆಗೊಳ್ಳಲಿದೆ ಗುರುವಚನ ಪರುಷ ಕಟ್ಟೆ ಪ್ರತಿದಿನ ಇಷ್ಟಲಿಂಗಯೋಗ, ಅನುಭಾವ ಗೋಷ್ಠಿ, ವಚನಪಠಣಗಳ ಮೂಲಕ ವ್ಯಕ್ತಿ ಕಲ್ಯಾಣ, ಸಮಾಜ ಕಲ್ಯಾಣ ಮತ್ತು ವಿಶ್ವಕಲ್ಯಾಣದ ಸಂಕಲ್ಪ ಸಿದ್ಧಿಗೊಳಿಸುವ ಗುರುಶಕ್ತಿ ಕೇಂದ್ರ ಈ ಗುರುವಚನ ಪರುಷ ಕಟ್ಟೆ.
ಬನ್ನಿ! ನಮ್ಮ ಸುಖ ದುಃಖ ನೋವು ನಲಿವು, ಲಾಭ ಹಾನಿ, ಆಗುಹೋಗುಗಳನ್ನು ಗುರುದೇವರಲಿ ಬಿನ್ನಹಗೈದು, ಗುರುವಚನಗಳ ಮೂಲಕ ಪರಿಹಾರ ಪಡೆದುಕೊಳ್ಳೋಣ, ಧನ್ಯರಾಗೋಣ.

ಅಕ್ಕ ಅನ್ನಪೂರ್ಣತಾಯಿ
ಲಿಂಗಾಯತ ಮಹಾಮಠ ಬೀದರ

ವಚನಗಳಿಗೆ ಪರಮೋಚ್ಛ ಗೌರವ ಸಲ್ಲಿಸುವ
ವಚನ ಸಾಹಿತ್ಯಕ್ಕೆ ಪಟ್ಟಾಭೀಷೇಕ ವೆಂಬ ವಿನೂತನ ಮಾದರಿಯ ಆಚರಣೆ

ವಚನ ಸಂವಿಧಾನ, ಶರಣ ಸಂಕುಲದ ಆತ್ಮನಾದ, ಸರ್ವ ಸಮತ್ವವನ್ನು ಸಾರುವ ಇಷ್ಟಲಿಂಗ ತತ್ತ್ವದ ಆಗರ. ನಮ್ಮನ್ನು ನಾವು ಅರಿತುಕೊಳ್ಳಲು ಇರುವ ಜ್ಞಾನಗನ್ನಡಿ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವಂಥ ಪ್ರಜ್ಞೆಯ ಪ್ರತೀಕ. ಒಬ್ಬನೇ ದೇವರು, ಒಂದೇ ವಿಶ್ವ. ಒಂದೇ ಮಾನವ ಕುಲ ಎಂದು ಸಾರುವ ಧೀರ ವಾಣಿ. ವಚನಗಳು ಉಸಿರಾಗಿಸಿಕೊಂಡವರ ಕಾಮಧೇನು, ಕಲ್ಪವೃಕ್ಷ ಮತ್ತು ಪರುಷಮಣಿ, ಗುರುವಚನಕ್ಕೆ ಪಟ್ಟ ಕಟ್ಟುವುದೆಂದರೆ, ನಮ್ಮೊಳಗಿನ ಘನವು ಸಕಲ ಜೀವಾತ್ಮರೊಳಗೆ ಇದೆ ಎಂಬುದನ್ನು ಲೋಕಕ್ಕೆ ತಿಳಿಸುವುದರ ಮೂಲಕ ಆ ಘನಕ್ಕೆ ಪಟ್ಟಕಟ್ಟಿದಂತೆ. ವ್ಯಕ್ತಿಗಿಂತ ತತ್ವ ಶ್ರೇಷ್ಠ. ವ್ಯಕ್ತಿಗಳ ಪಟ್ಟಾಭೀಷೇಕಕ್ಕಿಂತ ವಚನಗಳಿಗೆ ಅಂದರೆ ಜ್ಞಾನಕ್ಕೆ ಪಟ್ಟಗಟ್ಟುವುದು ಸೂಕ್ತವೆಂದು ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿಯವರು ವಚನಗಳಿಗೆ ಪಟ್ಟಗಟ್ಟುವ ಆಚರಣೆಯನ್ನು ಜಾರಿಗೆ ತಂದು, ಲೋಕಕ್ಕೆ ಮಾದರಿಯಾಗಿರುವರು. ಈ ಸಲ ವಚನಗಳಿಗೆ ಪಟ್ಟಗಟ್ಟುವ ೧೨ನೇ ಮಹೋತ್ಸವ ನೆರವೇರಲಿದೆ. ಆದ್ದರಿಂದ ವ್ಯಕ್ತಿ ಪಟ್ಟಾಭೀಷೇಕ ಬೇಡ. ಬನ್ನಿ ನಮ್ಮೆಲ್ಲರೊಳಗಿನ ಘನದ ಸಂಕೇತವಾದ ಗುರುವಚನಕ್ಕೆ ಪಟ್ಟಕಟ್ಟೋಣ. ತನ್ಮೂಲಕ ಮಾನವೀಯ ಮೌಲ್ಯಗಳ ಆಗರವಾದ ಮಂತ್ರ ಸ್ವರೂಪವಾದ ವಚನಗಳಿಗೆ ಪರಮೋಚ್ಛ ಗೌರವ ಸಲ್ಲಿಸಿ, ಧನ್ಯರಾಗೋಣ.

ರಮೇಶಸ್ವಾಮಿ ಕನಕಟ್ಟಾ
ಬೀದರ


ಕರ್ನಾಟಕದ ಮುಕುಟ ಪ್ರಾಯವಾದ ಬಸವಭೂಮಿ ಬೀದರ ನಗರದಲ್ಲಿ ಫೆಬ್ರುವರಿ ೧೭.೧೮ ಮತ್ತು ೧೯ ರಂದು ವಚನ ವಿಜಯೋತ್ಸವ ಕಾರ್ಯಕ್ರಮದ ವಿವರಗಳು
ವಚನ ಸಾಹಿತ್ಯ ಸಂರಕ್ಷಣೆಯ ಸ್ಮರಣೆಗಾಗಿ ಪ್ರತಿವರ್ಷದಂತೆ ೨೦೧೯ನೇ ಸಾಲಿನ ವಚನ ವಿಜಯೋತ್ಸವವನ್ನು ಇದೇ ಫೆಬ್ರುವರಿ ೧೭, ೧೮ ಮತ್ತು ೧೯ರಂದು ಮೂರು ದಿನಗಳ ಕಾಲ, ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ ಮತ್ತು ಪೂಜ್ಯಶ್ರಿ ಡಾ|| ಗಂಗಾಂಬಿಕೆ ಅಕ್ಕನವರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ನೆರವೇರಿಸಲಾಗುತ್ತಿದೆ.
ಫೆಬ್ರುವರಿ ೧೭ ರಂದು ಅಂದರೆ ಮೊದಲ ದಿನ ಮುಂಜಾನೆ ೮.೦೦ ಗಂಟೆಗೆ ಮಾನವ ಸಮಾನತೆಯ ಸಂಕೇತವಾದ ಷಟಸ್ಥಲ ಧ್ವಜಾರೋಹಣ ಮತ್ತು ಸಾಮೂಹಿಕ ಇಷ್ಟಲಿಂಗಯೋಗದೊಂದಿಗೆ ವಚನ ವಿಜಯೋತ್ಸವವು ಆರಂಭವಾಗುವುದು. ಮುಂಜಾನೆ ೧೧.೩೦ ಗಂಟೆಗೆ ಉದ್ಘಾಟನಾ ಸಮಾರಂಭ ಮತ್ತು ಬ್ರಹತ್ ಮಹಿಳಾ ಸಮಾವೇಶ ನೆರವೇರುವುದು. ಮಧ್ಯಾಹ್ನ ೩.೩೦ ಗಂಟೆಗೆ ಲಿಂಗಾಯತ ಸಮಾವೇಶ ಹಾಗೂ ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಸಂವಾದ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಸಂಜೆ ೬.೦೦ ಗಂಟೆಗೆ ಶರಣ ಸಂಸ್ಕೃತಿ ಆಧರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ-ಮನ ಸೂರೆಗೊಳ್ಳಲಿವೆ.
ಫೆಬ್ರುವರಿ ೧೮ ರಂದು ಅಂದರೆ ಎರಡನೇ ದಿನ ಮುಂಜಾನೆ ೮.೦೦ ಗಂಟೆಗೆ ಲಿಂಗಾಯತ ಧರ್ಮಗ್ರಂಥ ಗುರುವಚನ ಪಾರಾಯಣ ಜರುಗುವುದು. ೭೭೦ ಅಮರಗಣಂಗಳ ಸಂಕೇತವಾಗಿ ಸಹಸ್ರಾರು ಶರಣ-ಶರಣೆಯರು ಬಸವಣ್ಣನವರ ಸಮಗ್ರ ವಚನಗಳನ್ನು ಸಾಮೂಹಿಕವಾಗಿ ಏಕಕಾಲಕ್ಕೆ ಓದುವ ವಿಶಿಷ್ಠ ಕಾರ್ಯಕ್ರಮವಿದು. ಸಹಸ್ರಾರು ಜನ ಒಂದೇ ಧ್ವನಿಯಲ್ಲಿ ವಚನ ಪಾರಾಯಣ ಮಾಡುವ ರೋಮಾಂಚನಗೊಳಿಸಿ ಭಕ್ತಿ ತೇಲಾಡಿಸುವ ಅನುಭವ ನೀಡುವ ಕಾರ್ಯಕ್ರಮವಿದು. ವಚನಗಳ ಪ್ರಾಮುಖ್ಯತೆ ಕುರಿತು ಅನುಭಾವ ಸಹ ಮಂಡಿಸಲಾಗುವುದು. ಮುಂಜಾನೆ ೧೧.೩೦ ಗಂಟೆಗೆ ಯುವ ಪ್ರೇರಣಾ ಸಮಾವೇಶ. ಈ ಭಾಗದ ಯುವಕ-ಯುವತಿಯರಿಗೆ, ಎಸ್.ಎಸ್.ಎಲ್.ಸಿ ನಂತರದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗುರಿ ಸಾಧನೆಗಾಗಿ ಪ್ರೇರಣೆ ನೀಡುವ ಪ್ರೋತ್ಸಾಹದಾಯಕ ಕಾರ್ಯಕ್ರಮವಿದು. ಯುವ ಸಮುದಾಯದ ಮನದಲ್ಲಿ ಬಸವ ತತ್ವದ ಮೌಲ್ಯಗಳನ್ನು ಬಿತ್ತುವ ಮಹತ್ವ ಪೂರ್ಣ ಕಾರ್ಯ ಇಲ್ಲಿ ನಡೆಯುವುದು. ಮಧ್ಯಾಹ್ನ ೩.೩೦ ಗಂಟೆಗೆ ವಚನ ಸಾಹಿತ್ಯ ಮತ್ತು ಆರೋಗ್ಯ ಕುರಿತು ಉಪನ್ಯಾಸಗಳು ಮೂಡಿಬರುವವು. ಸಂಜೆ ೬.೦೦ ಗಂಟೆಯಿಂದ ವಚನ ಕಲಾ ರೂಪಕಗಳು ಮತ್ತು ವಚನ ಸಂಗೀತ ಕಾರ್ಯಕ್ರಮಗಳು ನಾಡಿನ ಹೆಸರಾಂತ ಕಲಾವಿದರಿಂದ ಮೂಡಿಬರುವವು.

ಫೆಬ್ರುವರಿ ೧೯ ರಂದು ಅಂದರೆ ವಚನ ವಿಜಯೋತ್ಸವದ ಮೂರನೇ ದಿನ ಮುಂಜಾನೆ ೯.೦೦ ಗಂಟೆಗೆ ಬೀದರ ನಗರದ ಶ್ರೀ ಬಸವೇಶ್ವರರ ವೃತ್ತದಿಂದ ಪವಿತ್ರ ಕ್ಷೇತ್ರ ಗುರುವಚನ ಪರುಷ ಕಟ್ಟೆ ಬಸವಗಿರಿಯವರೆಗೆ ನಗರದ ಪ್ರಮುಖ ಬೀದಿಗಳ ಮುಖಾಂತರ ಗುರುವಚನ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಜರುಗುವುದು. ಮೆರವಣಿಗೆಯಲ್ಲಿ ಹೂವಿನ ರಥದಲ್ಲಿ ಗುರುಬಸವ ಭಾವಚಿತ್ರ ಮತ್ತು ವಚನ ಸಾಹಿತ್ಯ ಇಟ್ಟು ಭಕ್ತಿ ಪೂರ್ವಕವಾಗಿ ಮೆರವಣಿಗೆ ನೆರವೇರಿಸಲಾಗುವುದು. ಮೆರವಣಿಗೆಯಲ್ಲಿ ಶರಣರ ಸ್ತಬ್ಧಚಿತ್ರಗಳು ನೂರಾರು ಗ್ರಾಮಗಳಿಂದ ಆಗಮಿಸುವ ಬಸವ ಜ್ಯೋತಿಗಳು ತಲೆ ಮೇಲೆ ವಚನ ಸಾಹಿತ್ಯ ಹೊತ್ತ ಸಾವಿರಾರು ಶರಣ-ಶರಣೆಯರು ಭಕ್ತಿಯ ಹೊನಲ್ಲನ್ನು ಹರಿಸಿದರೆ, ನಂದಿ ಕೋಲು, ಡೊಳ್ಳು ಕುಣಿತ, ಚುಟಕಿ ಭಜನೆ ಸೇರಿದಂತೆ ಹಲವು ಕಲಾತಂಡಗಳು ಭಜನಾತಂಡಗಳು ಮತ್ತು ವಚನವಡಪುಗಳು ಹೇಳುವ ತಂಡಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಲಿವೆ. ಮೆರವಣಿಗೆ ವೈಭವವನ್ನು ನೋಡುವದೇ ಒಂದು ಸಂಭ್ರಮ. ಭಕ್ತಿ-ಭಾವ ಉಕ್ಕಿಸುವ, ಬಸವಾದಿ ಶರಣರ ಬಗ್ಗೆ ಹೆಮ್ಮೆ ಮೂಡಿಸುವ ಮೆರವಣಿಗೆಯಲ್ಲಿ ನಾಡಿನ ಮೂಲೆ-ಮೂಲೆಗಳಿಂದ ನೆರೆ ರಾಜ್ಯಗಳಿಂದಲೂ ಬಸವ ಭಕ್ತರು ಭಾಗವಹಿಸುವುದು ವಿಶೇಷ. ತಾವುಗಳು ಸಹ ಈ ವಚನ ವಿಜಯೋತ್ಸವ ಮೆರವಣಿಗೆಯ ವಿಶೇಷ ಅನುಭವ ಪಡೆದುಕೊಳ್ಳಲು ಇಂದೇ ಸಜ್ಜಾಗಿರಿ. ಮಧ್ಯಾಹ್ನ ೨.೩೦ ಗಂಟೆಗೆ ವಿಶ್ವದ ಗಮನ ಸೆಳೆದ ವಿಶೇಷವಾದ ಮತ್ತು ತಾತ್ವಿಕವಾದ ಗುರುವಚನ ಪಟ್ಟಾಭಿಷೇಕದ ೧೨ನೇ ಮಹೋತ್ಸವ ನೆರೆದ ಶರಣ-ಶರಣೆಯರ ವಚನ ಜಯಘೋಷಗಳೊಂದಿಗೆ ಸಂಪನ್ನಗೊಳ್ಳುವುದು. ಮಧ್ಯಾಹ್ನ ೩.೩೦ ಗಂಟೆಗೆ ವಚನ ವಿಜಯೋತ್ಸವ ಭವ್ಯ ಸಮಾರಂಭ ಜರುಗುವುದು.
ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಪೂಜ್ಯರು, ಖ್ಯಾತ ಚಿಂತಕರು, ಅನುಭಾವಿಗಳು, ನೇತಾರರು ಸಮಾರಂಭದಲ್ಲಿ ಪಾಲ್ಗೊಂಡು, ಅತ್ಯಮೂಲ್ಯವಾದ ಅನುಭಾವ ನೀಡಲಿರುವರು, ಎಲ್ಲಾ ಗೋಷ್ಠಿಗಳಲ್ಲಿ ವಚನ ಸಂಗೀತ, ಕೋಲಾಟ, ವಚನ ನೃತ್ಯ ರೂಪಕ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗುವವು.
ಆದಕಾರಣ, ಶರಣ ಬಂಧುಗಳು ಮತ್ತು ಬಸವಾಭಿಮಾನಿಗಳು ತನು-ಮನ-ಧನದಿಂದ ಸಹಕರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ವಿನಂತಿಸುತ್ತೇವೆ.
ಶರಣರು-ಶರಣಾರ್ಥಿ
’ಶರಣರ ಬರವಿಂಗೆ ಗುಡಿತೋರಣವ ಕಟ್ಟಿ ಸ್ವಾಗತಿಸುವೆವು- ತಾವು ಬನ್ನಿ ತಮ್ಮವರನ್ನೂ ಕರೆತನ್ನಿ’

ರಮೇಶಸ್ವಾಮಿ ಕನಕಟ್ಟಾ
ಬೀದರ

About Shivanand

Admin : Lingayat Kranti Monthly news paper 8884000008 [email protected]

Check Also

ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

  ಬೆಂಗಳೂರು: ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ …

ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ‘ವಚನ ಪಿತಾಮಹ’ ಡಾ. ಫ.ಗು.ಹಳಕಟ್ಟಿ

  ರಾಮದುರ್ಗ: ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ …

ರಾಣಿ ಚನ್ನವೀರಮ್ಮ

  ಲಿಂಗಾಯತ ಕ್ರಾಂತಿ: ಚನ್ನಮ್ಮ ಮತ್ತು ವೀರಮ್ಮ ಇವರಿಬ್ಬರು ಕಿತ್ತೂರ ದೇಸಾಯಿಣಿಗಳು. ಇವರಿಬ್ಬರ ಹೆಸರು ಒಂದಾಗಿರುವ ಚನ್ನವೀರಮ್ಮಾಜಿ ಎನ್ನುವ ಕೆಳದಿಯ …

ಜನಪದವೇ ಲಿಂಗಾಯತ ಧರ್ಮ ಉಳಿವಿಗೆ ಆಧಾರ

  ಬೀದರ್: 12ನೆ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಲಿಂಗಾಯತ ಧರ್ಮದ ಶರಣರು ಚೆಲ್ಲಾಪಿಲ್ಲಿ ಆದರು, ಹಲವಾರು ಶರಣರು …

ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ

  ~ ಡಾ. ಜೆ ಎಸ್ ಪಾಟೀಲ. ವಿಜಯಪುರ: ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ …

ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ: ರಾಮಪ್ಪ ಬಿದರಿ

ವಿಜಯಪುರ: 1952-1962 ಹತ್ತು ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿದ್ದ ರಾಮಪ್ಪ ಬಿದ್ರಿ ಈ ಹುದ್ದೆಯನ್ನು ಎಂದೂ ತಮ್ಮ ಸ್ವಂತದ ಲಾಭಕ್ಕಾಗಿ …

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

Leave a Reply

Your email address will not be published. Required fields are marked *

error: Content is protected !!