Breaking News
Home / General News / ಬೆಳಗಾವಿ ಜಾಗತಿಕ ಲಿಂಗಾಯತ ಮಹಾಸಭೆಯಿಂದ ಸತ್ಸಂಗ

ಬೆಳಗಾವಿ ಜಾಗತಿಕ ಲಿಂಗಾಯತ ಮಹಾಸಭೆಯಿಂದ ಸತ್ಸಂಗ


ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಲ್ಲ ಸಂಸ್ಕ್ರತಿ ಇದ್ದರೆ ಅದು ಶರಣ ಸಂಸ್ಕೃತಿ,ಹನ್ನೆರಡನೆಯ ಶತಮಾನದ ಶರಣರು ಸುಂದರ, ಸದೃಢ ಸಮಾಜದ ನಿರ್ಮಾಣದಲ್ಲಿ ,ಕಾಯಕ ದಾಸೋಹ ಮಹತ್ವವನ್ನು ಆಚರಿಸುವ ಮೂಲಕ ಸರ್ವರಿಗೂ ಮಾರ್ಗದರ್ಶಿ ಸೂತ್ರಗಳನ್ನು ವಚನಗಳ ಮೂಲಕ ಸಮಾಜಕ್ಕೆನೀಡಿದ್ದಾರೆ.ಪರಿಪೂರ್ಣ ಸಂಸ್ಕ್ರತಿಯ ಅಳಿವು ಉಳಿವು ಎಲ್ಲರ ಸಮಾನತೆಗೆ ಪೂರಕವಾಗಿರಬೇಕು,ಎಂದು ಹಿರಿಯ ಸಾಹಿತಿ ಶರಣೆ ಸುನಂದಾ ಎಮ್ಮಿಯವರು ಹೇಳಿದರು. ಸ್ಥಳೀಯ ಮಹಾಂತಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ರಾಷ್ಟ್ರೀಯ ಬಸವಸೇನೆ ಜಿಲ್ಲಾ ಘಟಕ ಬೆಳಗಾವಿಯ ಮಾಸಿಕ ಶರಣ ಸತ್ಸಂಗ ಕಾರ್ಯಕ್ರಮದಲಿ ವಿಶೇಷ ಉಪನ್ಯಾಸ ನೀಡಿ ಮೇಲಿನಂತೆ ಹೇಳಿದರು. ಮುಂದುವರಿದು ಕೂಡು ಕುಟುಂಬದಲ್ಲಿ ಮಕ್ಕಳಿಗೆ ಹಿರಿಯರು ಸಂಸ್ಕೃತಿಯ ಕುರಿತು ಮಾರ್ಗದರ್ಶನ ಮಾಡಿ ಸುಸಂಸ್ಕೃತ ವಾತಾವರಣ ನಿರ್ಮಿಸಲು ಅವಕಾಶ ಮಾಡಿಕೊಡುತ್ತಿದ್ದರು.ಈಗಿನ ಕಾಲದಲ್ಲಿ ಚಿಕ್ಕದಾದ ಕುಟುಂಬಗಳಿಗೆ, ಮಕ್ಕಳಿಗೆ ಇಂತಹ ಮಾರ್ಗದರ್ಶನ ಕೊರತೆಯ ಪರಿಣಾಮವಾಗಿ ವೃಧ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಿವೆ.ಇದಕ್ಕೆ ಹಿರಿಯರ ಮಾರ್ಗದರ್ಶನ ವುಳ್ಳ ಕುಟುಂಬದ ಬದುಕು ಪ್ರಸ್ತುತ ಎಂಬ ಅಭಿಪ್ರಾಯ ಪಟ್ಟರು.
ಸಾನಿದ್ಯವಹಿಸಿದ ಮ.ನಿ.ಪ್ರ.ಸ್ವ.ಶ್ರೀ ಗುರುಬಸವ ಸ್ವಾಮಿಗಳು ವಿರಕ್ತಮಠ ಕಡೋಲಿ ಆಧ್ಯಾತ್ಮಿಕ ಪರಿಸರ ನಿರ್ಮಾಣದಲ್ಲಿ ಇಂತಹ ಸಂಘಟನೆಗಳ ಪಾತ್ರ ಪ್ರಾಮುಖ್ಯತೆ ಪಡೆದಿವೆ ಎಂದು ತಮ್ಮ ಆಶೀರ್ವಚದಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜೀವಮಾನ ಸಾಧನೆಗಾಗಿ ನೀಡಿದ ಪ್ರಶಸ್ತಿಗೆ ಭಾಜನರಾದ ಶರಣೆ ಶೈಲಜಾ ಭಿಂಗೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶರಣ ಆನಂದ ಮತ್ತು ವಿದ್ಯಾ ಕರ್ಕಿ ದಂಪತಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.ಶರಣ ಅರವಿಂದ ಪರುಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು.ಶರಣೆ ಅನುಶೂಯ ಬಸೆಟ್ಟಿ ಮತ್ತು ಶರಣೆ ವೀಣಾ ನಾಗಮೋತಿಯವರು ಅತಿಥಿಗಳನ್ನು ಪರಿಚಯಿಸಿದರು ಅಶೋಕ ಮಳಗಲಿ ಸ್ವಾಗತಿಸಿದರು. ಶರಣ ಶಂಕರ ಗುಡಗನಟ್ಟಿಯವರು ನಿರೂಪಿಸಿದರು.
ದೀಪಾ ತೊಲಗಿ,ಜ್ಯೋತಿ ಬದಾಮಿ ಲಲಿತಾ ಪಾಟೀಲ ಅಡಿವೆಪ್ಪ ಬೆಂಡಿಗೇರಿ ಸತೀಶ ಚೌಗಲಾ ನಿಂಗಪ್ಪಾ ಕಡ್ಲೆಪ್ಪನವರ,ಡಾ.ಗೋಮಾಡಿ ಶಂಕರ ಗುಡಸ ಗೀತಾ ಬೆಣಚಿನಮರ್ಡಿ ಮತ್ತಿತ್ತರರು ಉಪಸ್ಥಿತರಿದ್ದರು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!