Breaking News
Home / featured / ಲ್ಯಾನ್ಸ್ ನಾಯಕ ಹನುಮಂತಪ್ಪ ಕೂಪ್ಪದ

ಲ್ಯಾನ್ಸ್ ನಾಯಕ ಹನುಮಂತಪ್ಪ ಕೂಪ್ಪದ

🇮🇳MIRACAL MAN🇮🇳*………


ಸಿಯಾಚಿನ್ ಹೀರೋ ಭಾರತೀಯ ಸೇನೆಯ ನಾಯಕ ,ಲ್ಯಾನ್ಸ್ ನಾಯಕ ಹನುಮಂತಪ್ಪ ಕೂಪ್ಪದ 2016, ಫೆಬ್ರವರಿ 11 ರಂದು ನಿಧನರಾದ ಕನ್ನಡದ ಕಣ್ಮಣಿ.ಭಾರತೀಯ ಸೇನೆಯ ದೇವ ಮಾನವನ ಪುಣ್ಯ ಸ್ಮರಣೋತ್ಸವ..

2016ರಲ್ಲಿ ಸಿಯಾಚಿನಲ್ಲಿ ಗಡಿಕಾಯುವಾಗ ಹಿಮಕುಸಿತದಿಂದ 25ಅಡಿ ಹಿಮದ ಕೆಳಗಡೆ ಮೈನಸ 45 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಸಿಲುಕಿ ಐದು ದಿನಗಳು ಬದುಕಿ ನಂತರ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ 2016 ಫೆಬ್ರವರಿ ೧೧ ನಿಧನರಾದ ಭಾರತೀಯ ಸೇನೆಯ ದೇವಮಾನವ………..
ಇವತ್ತಿನ ಗಡಿಯೂಳಗೆ ನಾವೆಲ್ಲ ಬೆಚ್ಚಗಿನ ಬದುಕನ್ನು ಕಳೆಯಲು ಇಂತಹ ನೂರಾರು ಸೈನಿಕರು ತಮ್ಮ ಬದುಕನ್ನು ಮುಡಿಪಿಟ್ಟು ನಮ್ಮನ್ನು ಕಾಪಾಡುವಾಗ ಅರೆಬರೆ ಓದಿಕೂಂಡು ಸಾಹತಿಗಳೆಂದು ಸ್ವಯಂ ಪಟ್ಟಕಟ್ಟಿಕೂಂಡು ,ಸೈನಿಕರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂರ್ಖರಿಗೆ ಏನು ಗೊತ್ತು ತಮ್ಮ ಹೆಂಡತಿ,ಮಕ್ಕಳ ಪ್ರಾಣ ,ಗಳಿಸಿದ ಆಸ್ತಿಪಾಸ್ತಿ ಎಲ್ಲವು ಬೆಚ್ಚಗೆ ಉಳಿದಿರುವುದು ಸೈನಿಕರೆಂಬ ದೇವ ಮಾನವರಿಂದ….
ಮಳೆ,ಚಳಿ,ಬಿಸಿಲು,ಗಾಳಿ ಯಾವುದನ್ನು ಲೆಕ್ಕಿಸದೇ,ಕುಟುಂಬದಿಂದ ತಿಂಗಳಗಟ್ಟಲೇ ಸಾವಿರಾರು ಕಿಲೋಮಿಟರ ದೂರ ಉಳಿದು ನಾಡು ಕಾಯುವ ಸೈನಿಕನಿಗೇ ಸಾವಿರ,ಸಾವಿರ,ನಮನಗಳು.
ಇವತ್ತು ಸೇನೆಯ ದೇವಮಾನವನಿಗೆ ಮುಖಪುಟದ ನುಡಿನಮನಗಳು.
ಸಾವಿಗೆ ಸವಾಲೆಸೆದು,ಉಸಿರಾಡಲು ಆಮ್ಲಜನಕ ಸಿಗದೇ ಇರುವ,ಶರೀರದಲ್ಲಿ ರಕ್ತಸಂಚಾರ ಆಗಲು ಅವಕಾಶವಿಲ್ಲದಿರುವ,ಸಿಯಾಚಿನಗ್ಲೆಸಿಯರನಲ್ಲಿ ಮೈನಸ45 ಡಿಗ್ರಿ ಸೆಲ್ಸಿಯಸ್ ನಲ್ಲಿ ಪ್ರಕೃತಿ ವಿಕೋಪದ ಸ್ಥಳದಲ್ಲಿ 25ಅಡಿ ಆಳದಲ್ಲಿ ಐದು ದಿನಗಳ ಕಾಲ ಬದುಕಿ ನಂತರ ಎರಡು ದಿನಗಳ ಕಾಲ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಬಡಿದಾಡಿದ್ದು ವೈದ್ಯ ಲೋಕಕ್ಕೆ ವಿಸ್ಮಯವಾದ ಘಟನೆ… ವೀರಮರಣಹೂಂದಿದ ಲ್ಯಾನ್ಸ ನಾಯಕ ಹಣಮಂತಪ್ಪ ಕೊಪ್ಪದ ಈ ದೇಶದ ಯುವ ಜನತೆಗೆ ಮಾದರಿ ವ್ಯಕಿತ್ವ..ಹೀಗಾಗಿ ಆತನ ಶರೀರದ ಕಠೋರತೆ,ಸಾವನ್ನು ಒಪ್ಪಿಕೊಳ್ಳದ ಮಾನಸಿಕ ಪ್ರಬಲತೆಯೇ ಈ ದೇಶದ ಯುವ ಜನಾಂಗದ ಆಸ್ತಿಯಾಗಲಿ,,,ಅವರಿಗೆ ಮಾದರಿಯಾಗಲಿ.
ಹಣಮಂತಪ್ಪ ಕೊಪ್ಪದ ಅವರ ಶರೀರ ಅಗಲಿರಬಹುದು…ಆದರೆ ಆ ಮಹಾತ್ಮನ ಪ್ರಕೃತಿಗೆ ವಿರೋಧವಾಗಿ,ಸಾವಿಗೆ ಸವಾಲೊಡ್ಡಿ ಬದುಕುವಲ್ಲಿ ಆತ ನಡೆಸಿದ ಹೋರಾಟ ದೇಶಪ್ರೇಮ ನಮ್ಮ ಹೆಮ್ಮೆಯ ಕನ್ನಡಿಗ,ಗಂಡು ಮೆಟ್ಟಿದ ನಾಡಿನ ಕಲಿ,ಕರ್ನಾಟಕದ ಮನೆಮಗ,ಭಾರತಾಂಬೆಯ ಸುಪುತ್ರ ದೇಶಕ್ಕಾಗಿ ಮಡಿದ ವೀರ ಯೋಧ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರಿಗೆ ನನ್ನ ಕೋಟಿ ಕೋಟಿ ನಮನಗಳು

ಲೇಖನ : ಮಹೇಶ ಚನ್ನಂಗಿ
ಚನ್ನಮ್ಮನ ಕಿತ್ತೂರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

Leave a Reply

Your email address will not be published. Required fields are marked *

error: Content is protected !!