ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ತೋಂಟದ ಡಾ.ಸಿದ್ದರಾಮ ಶ್ರೀ..

ಗದಗ: ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮ ಶ್ರೀಗಳು ತಿಳಿಸಿದ್ದಾರೆ.
ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯಿಂದ ನಡೆದ ಲಿಂಗಾಯತ ಧರ್ಮ ಮತ್ತು ಚಿಂತನಾ ಗೋಷ್ಠಿ ಬಳಿಕ ಮಾತನಾಡಿದ ಶ್ರೀಗಳು, ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಲಿಂಗಾಯತರು ಹಿಂದೂ ಧರ್ಮದಿಂದ ಹೊರಗೆ ಹೋಗಬಾರದು ಎನ್ನುವುದು ಉದ್ದೇಶವನ್ನು ಬಿಜೆಪಿ ಹೊಂದಿದೆ ಆದರಿಂದ ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಯನ್ನು ತಡೆಯುತ್ತಿದ್ದಾರೆ. ನಿಮ್ಮ ಧರ್ಮ ಪ್ರಚಾರಕ್ಕಾಗಿ ಲಿಂಗಾಯತ ಧರ್ಮವನ್ನು ಭ್ರಷ್ಟಗೊಳಿಸಿದ್ದಿರಿ. ಆದರೆ ಈಗ ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ ಆಗಬೇಕೆಂದು ಯಾಕೆ ಹೇಳುತ್ತಿರಿ? ಎಂದ ಅವರು, ನನ್ನ ಮೂರನೇ ಪ್ರಶ್ನೆ ನೀವು ಬೇಡ ಜಂಗಮರೋ, ಬ್ರಾಹ್ಮಣರೋ, ವೀರಶೈವ ಬ್ರಾಹ್ಮಣರೋ? ಲಿಂಗಾಯತರೋ? ಎನ್ನುದನ್ನು ಸ್ಪಷ್ಟಪಡಿಸಿ ಎಂದು ಪಂಚಪೀಠ ಶ್ರೀಗಳಿಗೆ ಕೇಳಿದರು.
ಜೈನರು ಹಾಗೂ ಬೌದ್ಧರು ಮೊದಲು ಹಿಂದೂಗಳಾಗಿದ್ದರು. ಆದರ ಈಗ ಹಿಂದೂ ಧರ್ಮದಿಂದ ಹೊರಗೆ ಹೋಗಿದ್ದಾರೆ. ಇದರಿಂದ ಹಿಂದೂ ಧರ್ಮಕ್ಕೆ ಏನು ಹಾನಿಯಾಗಿದೆ?
ಲಿಂಗಾಯತರು ದೇಶಪ್ರೇಮಿಗಳು ದೇಶದ್ರೋಹಿಗಳಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಾವತ್ತೂ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.
ಲಿಂಗಾಯತಲಿಂಗಾಯತರ ಮೂರು ಪ್ರಶ್ನೆಗಳಿಗೆ ಪಂಚಪೀಠ ಶ್ರೀಗಳು ಉತ್ತರಿಸಿಲಿ: ಎಸ್.ಎಂ ಜಾಮದಾರ್ ಸವಾಲು
ಜಾಗತಿಕ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ ಜಾಮದಾರ್ ಅವರು ಮಾತನಾಡಿ, ಲಿಂಗಾಯತ ಧರ್ಮ ಹಾಳಾಗಿದ್ದೇ ಪಂಚಪೀಠದ ಶ್ರೀಗಳಿಂದ ಎಂದು ಗಂಭೀರ ಆರೋಪ ಮಾಡಿದರು. ಪಂಚಪೀಠ ಶ್ರೀಗಳಿಗೆ ಜಾಮದಾರ್ 3 ಪ್ರಶ್ನೆಗಳನ್ನು ಉತ್ತರಿಸುವಂತೆ ಕೇಳಿದ್ದಾರೆ.
ಪಂಚಪೀಠ ಶ್ರೀಗಳು ತಮ್ಮ ಮಠಗಳಲ್ಲಿ ಬಸವಣ್ಣನವರ ಫೋಟೋ ಹಾಕಿಕೊಂಡಿದ್ದಾರೆ. ಕಳೆದ 200 ವರ್ಷಗಳಿಂದ ಸುಮಾರು 160ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಸಿದ್ದಾರೆ. ಆ ಪುಸ್ತಕಗಳ ಮೂಲಕ ಬಸವಣ್ಣನವರ ಹಾಗೂ ಅವರ ಜೊತೆಗಿದ್ದ ಶರಣದ ಚಾರಿತ್ರ್ಯವದೆಯನ್ನು ಮಾಡಿದ್ದಾರೆ. ನೀವು ಹೀಗೆ ಮಾಡಿದ್ದು ಯಾಕೆ? ಇದಕ್ಕೆ ಪಂಚಪೀಠ ಶ್ರೀಗಳು ಉತ್ತರ ನೀಡಿಲಿ ಎಂದು ಆಗ್ರಹಿಸಿದರು.
ನೀವು ಲಿಂಗಾಯತರು ಬಸವಾದಿ ಶರಣರ ತತ್ವ ಒಪ್ಪುವುದಾದರೆ ನಾವು ಗೌರವಯುತವಾಗಿ ಸ್ವಾಗತಿಸುತ್ತೇವೆ. ಆದರೆ ಬಸವಣ್ಣನವರ ಚಾರಿತ್ರ್ಯವದೆ ಮಾಡಿ ಅಮಾಯಕ ಜನರ ದಾರಿತಪ್ಪಿಸುವ ಕೆಲವನ್ನು ಮಾಡಬಾರದು ಎಂದು ಗುಡುಗಿದರು.