Breaking News
Home / featured / 14

14

 ಬಸವ ಭೀಮ ಸೇನೆಯಿಂದ ಹಲವು ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಬೆಳಗಾವಿ: 2018 ರಲ್ಲಿ ಅಂದಿನ ಸಿದ್ದರಾಮಯ್ಯ ಸರಕಾರವು ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ವರದಿ ನೀಡಲು ಡಾ. ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು 2018 ರ ಮಾರ್ಚ 19 ರಂದು ಸ್ವತಂತ್ರ ಧರ್ಮದ ಐತಿಹಾಸಿಕ ವರದಿ ನೀಡಿತ್ತು.
ಆ ವರದಿಯ ಸವಿ ನೆನಪಿಗಾಗಿ ಮಾರ್ಚ 19 ರಂದು ಬಸವ ಭೀಮ ಸೇನೆಯ ವತಿಯಿಂದ ಆಚರಿಸಲಾಗುತ್ತಿರುವ ಲಿಂಗಾಯತ ಧರ್ಮದ ಪ್ರಥಮ ವಿಜಯೋತ್ಸವ ಮತ್ತು ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಆ ಅದ್ಭುತ ವರದಿ ನೀಡಿರುವ ಉನ್ನತಾಧಿಕಾರ ಸಮಿತಿಯ ಸಪ್ತರ್ಷಿಗಳಿಗೆ ಅಭಿನಂದನೆಯ ಜೊತೆಗೆ ಬಸವಾದಿ ಶರಣರ ವೈಭವವನ್ನು ಮೇಳೈಸುವ ದಿಸೆಯಲ್ಲಿ ಬಸವಾದಿ ಶರಣ ಶರಣೆಯ ಹೆಸರಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ.
12ನೇ ಶತಮಾನದ ಆ ಮಹಾ ಕ್ರಾಂತಿಯ ರೂವಾರಿ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಎರಡು ಮತ್ತು ಯುವ ಚೇತನ ಚನ್ನಬಸವಣ್ಣನವರ ಹೆಸರಿಯಿಂದ ಒಂದು ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ.

ಬಸವ ಚೇತನ ಪ್ರಶಸ್ತಿ: ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುವದು.

ಬಸವ ರತ್ನ ಪ್ರಶಸ್ತಿ: ಬಸವ ಧರ್ಮದ ಪ್ರಚಾರ ಮತ್ತು ಬಸವಾದಿ ಶರಣರ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುವದು.

ಯುವ ಚೇತನ ಚನ್ನಬಸವಣ್ಣ ಪ್ರಶಸ್ತಿ: ವಿವಿಧ ಕ್ಷೇತ್ರಗಳ ಯುವ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವದು.
ಆಸಕ್ತರು ತಮ್ಮ ಸ್ವವಿವರ ಹಾಗೂ ಭಾವಚಿತ್ರದೊಂದಿಗೆ ಅರ್ಜಿಗಳನ್ನು ಆರ್.ಎಸ್.ದರ್ಗೆ, ಅಧ್ಯಕ್ಷರು ಬಸವ ಭೀಮ ಸೇನೆ. ರುಕ್ಷ್ಮಿಣಿ ನಿವಾಸ. ನಗರ ಕೇಂದ್ರ ಗ್ರಂಥಾಲಯದ ಎದುರುಗಡೆ, ಚಾವಟಗಲ್ಲಿ, ಬೆಳಗಾವಿ. ಈ ವಿಳಾಸಕ್ಕೆ ಮಾರ್ಚ 10 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮೋ.ನಂ.9986710560 ಗೆ ಸಂಪರ್ಕಿಸಬಹುದು ಎಂದು ಆರ್.ಎಸ್.ದರ್ಗೆ ಅವರು ತಿಳಿಸಿದ್ದಾರೆ.

 

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!