Breaking News
Home / featured / ಬಸವಣ್ಣನ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು

ಬಸವಣ್ಣನ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು

ಬಸವಣ್ಣನ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು

ಶ್ರೀಧರ ಗೌಡರ

ಕೂಡಲಸಂಗಮ : ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದಲ್ಲಿರುವ ಬಸವಣ್ಣನ ಐಕ್ಯ ಮಂಟಪದ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಐಕ್ಯಸ್ಥಳದ ದರ್ಶನ ಪಡೆಯಲು ದೇಶ ವಿದೇಶಗಳಿಂದ ನಿತ್ಯ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವವರಲ್ಲಿ ಬಹಳಷ್ಟು ಜನರು ಲಿಂಗದತ್ತ ನಾಣ್ಯಗಳನ್ನು ಎಸೆಯುತ್ತಾರೆ. ಇದರಿಂದ ಅದಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸ್ಥಳೀಯರ ಅನಿಸಿಕೆ.

ದರ್ಶನಕ್ಕೆ ಬಂದವರು, ನಾಣ್ಯ ಎಸೆ
ಯುವಂಥ ಮೌಢ್ಯವನ್ನು ಬಿಡಬೇಕು ಎಂದು ಮನವಿ ಮಾಡಿರುವ ಬಸವ ಭಕ್ತರು, ಈ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯನ್ನು ಆಗ್ರಹಿಸಿದ್ದಾರೆ.

ಮಂಡಳಿಯು, ಕಾಣಿಕೆಯನ್ನು ಹುಂಡಿಯಲ್ಲಿ ಹಾಕುವಂತೆ ಹಾಗೂ ಹಣವನ್ನು ಎಸೆಯದಂತೆ ಈ ಸ್ಥಳದಲ್ಲಿ ಫಲಕ ಅಳವಡಿಸಿದೆ. ಆದರೂ ಒಬ್ಬರನ್ನು ನೋಡಿ ಮತ್ತೊಬ್ಬರು ಎಸೆಯುತ್ತಲೇ ಇರುತ್ತಾರೆ. ಅಧಿಕವಾದಾಗ ಮಂಡಳಿಯ ಸಿಬ್ಬಂದಿ ಅವುಗಳನ್ನು ಆಯ್ದು ಹುಂಡಿಗೆ ಹಾಕುತ್ತಾರೆ. ಈ ಸ್ಥಳದಲ್ಲಿ, ಫೈಬರ್‌ ಗ್ಲಾಸ್‌ ಅಳವಡಿಸುವ ಮೂಲಕ ಲಿಂಗವನ್ನು ರಕ್ಷಿಸುವ ಕಾರ್ಯಕ್ಕೆ ಶೀಘ್ರವೇ ಮುಂದಾಗಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!