ಪೂಜ್ಯ ಡಾ. ಮಾತೆ ಮಹಾದೇವಿಯವರಿಗೆ ನೇಗಿನಹಾಳ ಗ್ರಾಮಸ್ಥರಿಂದ ಶ್ರದ್ಧಾಂಜಲಿ
ನೇಗಿನಹಾಳ
ವಿಶ್ವದ ಪ್ರಥಮ ಮಹಿಳಾ ಜಗದ್ಗುರುಗಳಾಗಿ ಹಳ್ಳಿಯಿಂದ ದಿಲ್ಲಿಯವರಿಗೂ ಬಸವ ದಳದ ಸಂಘಟನೆಗಳ ಕಟ್ಟಿಬೆಳಸಿ ಲಿಂಗಾಯತ ಧರ್ಮಕ್ಕಾಗಿ ರಾಜ್ಯದಲ್ಲಿ ಹಲವಾರು ಸಮಾವೇಶಗಳ ಮಾಡುವ ಮೂಲಕ ಬಸವತತ್ವವನ್ನು ವಿಶ್ವವ್ಯಾಪಿಯಾಗಿ ಪ್ರಚಾರಪಡಿಸಿದ ಕೀರ್ತಿ ಲಿಂಗೈಕ್ಯ ಪೂಜ್ಯ ಮಾತಾಜಿಯವರಿಗೆ ಸಲ್ಲುತ್ತದೆ ಎಂದು ನೇಗಿನಹಾಳ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿಗಳು ತಿಳಿಸಿದರು.
ಗ್ರಾಮದ ಬಸವ ಸರ್ಕಲ್ನಲ್ಲಿ ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಬಸವ ಕೇಂದ್ರ ಹಾಗೂ ಅಕ್ಕನ ಬಳಗದಿಂದ ಆಯೋಜಿಸಿದ್ದ ಲಿಂಗೈಕ್ಯ ಪೂಜ್ಯ ಡಾ. ಮಾತೆ ಮಹಾದೇವಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿ ಮಾತನಾಡಿದ ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ವೀರಮಾತೆ ಕಿತ್ತೂರ ಚನ್ನಮ್ಮನಂತೆ ಇಂದಿನ ೨೧ ಶತಮಾನದಲ್ಲಿ ಲಿಂಗಾಯತ ಧರ್ಮದ ಮಾನ್ಯತೆಯ ಹೋರಾಟಕ್ಕಾಗಿ ಪೂಜ್ಯ ಮಾತಾಜಿಯ ಹೋರಾಟ ಬಹಳ ಸ್ಮರಣೀಯವಾದದ್ದು ಎಂದರು.
ಸಂಪಗಾವಿ ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ ಮಹಿಳಾ ಸಮಾಜಕ್ಕೆ ಪೂಜ್ಯ ಮಾತಾಜಿಯವರು ಕಳಸಪ್ರಾಯ. ಅವರು ಕೋಟ್ಯಾಂತರ ಬಸವ ಭಕ್ತರಿಗೆ ಜಗದ್ಗುರುಗಳಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ದಾಖಲಾರ್ಹವಾಗಿವೆ ಎಂದರು. ಬಸವ ಕೇಂದ್ರದ ಮುಖಂಡ ಸೋಮನಿಂಗ ಬಾಗೇವಾಡಿ, ಹನುಮಂತಪ್ಪ ತೋಟಗಿ, ಮಹರುದ್ರಪ್ಪ ಬೋಳೆತ್ತಿನ, ಲಿಂಗಾಯತ ಕ್ರಾಂತಿ ಸಂಪಾದಕ ಶಿವಾನಂದ ಮೇಟ್ಯಾಲ, ಲಿಂಗಾಯತ ಅಭಿವೃದ್ಧಿ ಸಂಸ್ಥೆ ಅದ್ಯಕ್ಷ ನಾಗರಾಜ ಕುಂಕೂರ, ಮಂಜುನಾಥ ಕೋಟಗಿ, ಸಚೀನ ಪಾಟೀಲ, , ಸಿದ್ದಪ್ಪ ಶಿರಸಂಗಿ, ಬಸವರಾಜ ಬಸೋಜಿ, ಬಸವರಾಜ ಕರ್ಲೆಪ್ಪನವರ, ಸತ್ಯಪ್ಪ ತಳವಾರ, ಮಡಿವಾಳಪ್ಪ ಮೇಟ್ಯಾಲ, ಸಿದ್ದಾರೂಢ ದುಗ್ಗಾಣಿಮಠ, ಗದಿಗೆಪ್ಪಾ ರೂಮೋಜಿ, ಬಸವರಾಜ ಹಡಪದ, ಮಹಾದೇವ ಮುದ್ದನ್ನವರ, ಸಿದ್ದು ತಿಗಡಿ, ಶ್ರೀಧರ ತಿಗಡಿ, ಸತೀಶ ಹಾರೂಗೋಪ್ಪ, ಸುನೀಲ ವನ್ನೂರ, ಅಕ್ಕನ ಬಳಗದ ಮಹಾದೇವಿ ಕೋಟಗಿ, ಅಶ್ವಿನಿ ಬಾಗೇವಾಡಿ, ಕವಿತಾ ಬೆಳಗಾವಿ, ಗೀತಮ್ಮ ಕುಂಕೂರ, ಕಸ್ತೂರಮ್ಮ ಪಾಶ್ಚಾಪೂರ, ದೀಪಾ ಮರಕುಂಬಿ ಮತ್ತಿತ್ತರರು ಉಪಸ್ಥಿತರಿದ್ದರು. ಮಂಜುನಾಥ ಮಡಿವಾಳರ ಪ್ರಾಥಿಸಿದರು.