Breaking News
Home / featured / ಹಳಸಿದ್ದ ಸಂಬಂಧಕ್ಕೆ ಮತ್ತೆ ಬೆಸುಗೆ

ಹಳಸಿದ್ದ ಸಂಬಂಧಕ್ಕೆ ಮತ್ತೆ ಬೆಸುಗೆ

ಲಿಂಗೈಕ್ಯ ಮಾತೆ ಮಹಾದೇವಿ ಸಂಸ್ಮರಣೆ ಸಮಾರಂಭದಲ್ಲಿ ಶಿವಮೂರ್ತಿ ಶರಣರ ಹೇಳಿಕೆ

ಕೂಡಲಸಂಗಮದಲ್ಲಿ ಭಾನುವಾರ ನಡೆದ ಸಂಸ್ಮರಣೆ ಸಮಾರಂಭದಲ್ಲಿ ಮಾತೆ ಮಹಾದೇವಿ ಅವರ ಭಾವಚಿತ್ರಕ್ಕೆ ಮಾತೆ ಗಂಗಾದೇವಿ ಹೂ ಅರ್ಪಿಸಿದರು.

ಕೂಡಲಸಂಗಮ : ‘ಲಿಂಗದೇವ’ ವಚನ ನಾಮಾಂಕಿತ ತಿದ್ದುಪಡಿಯಾದ ಕಾರಣಕ್ಕೆ ಮಾತೆ ಮಹಾದೇವಿ ಅವರೊಂದಿಗೆ ನಮ್ಮ ಮಠದ ಸಂಬಂಧ ಹಳಸಿತ್ತು. ಇನ್ನು ಮುಂದೆ ಬಸವಧರ್ಮ ಪೀಠದೊಂದಿಗೆ ಸಂಬಂಧ ಬೆಸೆಯುವ ಕೆಲಸ ನಿರಂತರವಾಗಿರಲಿದೆ’
ಎಂದು ಚಿತ್ರದುರ್ಗ ಮುರುಘಾ
ಮಠದ ಶಿವಮೂರ್ತಿ ಶರಣರು ಹೇಳಿದರು.

ಇಲ್ಲಿನ ಬಸವಧರ್ಮ ಪೀಠದಲ್ಲಿ ಭಾನುವಾರ ನಡೆದ ಮಾತೆ ಮಹಾದೇವಿ ಸಂಸ್ಮರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ನಾವು–ನೀವು ಎಲ್ಲರೂ ಒಂದೇ. ಹೃದಯದಲ್ಲಿ ಹರಿಯುವುದು ಬಸವಭಕ್ತಿ, ಬಸವಶಕ್ತಿ’ ಎಂದು ಮಾರ್ಮಿಕವಾಗಿ ಹೇಳಿದರು.

‘ಜಗತ್ತಿನಲ್ಲಿ ಆಸೆಗೆ ಅಂಕುಶ ಇಟ್ಟ ಏಕೈಕ ಜೀವಪರ ಧರ್ಮ ನಮ್ಮದು. ಲೌಕಿಕತೆ, ಭೌತಿಕತೆ ಬಿಟ್ಟು ಬೌದ್ಧಿಕತೆಯೇ ಶಾಶ್ವತ ಎಂದು ಬಸವಾದಿ ಶರಣರು ಹೇಳಿದ್ದಾರೆ. ಬೀಗುವವರನ್ನು ಬಾಗುವಂತೆ ಮಾಡಿದ್ದು ಶರಣಧರ್ಮ. ನಾವು ಹೆಚ್ಚು ಹೆಚ್ಚು ವಿನಯವಂತರು, ಸೌಜನ್ಯಶೀಲರೂ ಆಗಬೇಕು’ ಎಂದು ಸಲಹೆ ನೀಡಿದರು.

ಗದಗ ತೋಂಟದಾರ್ಯ ಮಠದ ತೋಂಟದ ಡಾ. ಸಿದ್ದರಾಮ ಸ್ವಾಮೀಜಗಳು ಪೂಜ್ಯ ಲಿಂಗಾನಂದ ಅಪ್ಪಾಜಿಯವರಿಂದ ಮಾತಾಜಿಯ ಜೀವನದ ಕುರಿತು ರಚಿಸಿರುವ  ಚಿನ್ಮೂಲಾದ್ರಿಯ ಚಿತ್ಕಳೆ ಎಂಬ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತ, ‘ರಾಷ್ಟ್ರದೆತ್ತರಕ್ಕೆ ಶರಣಧರ್ಮವನ್ನು ಕೊಂಡೊಯ್ದ ಶ್ರೇಯ ಅಪ್ರತಿಮ ಸಂಘಟಕಿಯಾಗಿದ್ದ ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ. ಬಸವಧರ್ಮ ಪ್ರಚಾರ ಅಂದುಕೊಂಡಷ್ಟು ಸುಲಭವಲ್ಲ. ಆದರೆ ಐದು ದಶಕ ಕಾಲ ದೇಶ–ವಿದೇಶಗಳಲ್ಲಿ ನಿರಂತರವಾಗಿ ಜಂಗಮತ್ವ ರೂಢಿಸಿಕೊಂಡು ಪ್ರಚಾರ ನಡೆಸಿದ್ದರು’ ಲಿಂಗಾಯತ ಧರ್ಮದ ಅರ್ನಘ್ಯ ರತ್ನವಾಗಿದ್ದರು ಎತ್ತು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಬಸವತತ್ವ ಜಾಗತಿಕ ತತ್ವ. ಕೇವಲ ಕರ್ನಾಟಕದ ಮಠಾಧೀಶರ ಗದ್ದುಗೆಯ ಮೇಲೆ ಪುಸ್ತಕ ರೂಪದಲ್ಲಿ ಇದ್ದ ತತ್ವಗಳಿಗೆ ಜಂಗಮತ್ವ ನೀಡಿದವರು ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ. ವ್ಯಕ್ತಿ ನಿಷ್ಠೆ ಬದಲು ತತ್ವ ನಿಷ್ಠೆ ಹೇಳಿಕೊಟ್ಟ ಮಾತಾಜಿ ಲಕ್ಷಾಂತರ ಅನುಯಾಯಿಗಳನ್ನು ಬೆಳೆಸಿದ್ದಾಗಿ’ ಹೇಳಿದರು.

‘ವೈದಿಕರ ಜೇನುಗೂಡಿಗೆ ಕಲ್ಲುಹೊಡೆದು ಬಸವಪರಂಪರೆ ಮುಂದುವರೆಸಿಕೊಂಡು ಬಂದ ಮಾತಾಜಿ, ಬಸವಣ್ಣ ಹೇಳಿದಂತೆ ಅಂಗದ ಮೇಲೆ ಲಿಂಗ ಇಟ್ಟುಕೊಳ್ಳುವ ಎಲ್ಲರೂ ಸಮಾನರು ಎಂಬುದನ್ನು ಸಾರಿದರು’ ಎಂದು ಅವರು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಭಾಲ್ಕಿಯ ಬಸವಲಿಂಗ ಪಟ್ಟದೇವರು, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ,  ಹಿರಿಯ ಕೆ.ಎ.ಎಸ್ ಅಧಿಕಾರಿ ಎಸ್.ದಿವಾಕರ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರವರು ಮಾತಾಜಿಅವರೊಂದಿಗಿನ ಒಡನಾಟ ಹಂಚಿಕೊಂಡರು.

‘ಶರಣಮೇಳಕ್ಕೆ ಬರದಂತೆ ತಡೆಯುವ ಯತ್ನ’

‘ಕೂಡಲಸಂಗಮದಲ್ಲಿ ಲಿಂಗಾನಂದರು, ಮಾತೆಮಹಾದೇವಿ ನೇತೃತ್ವದಲ್ಲಿ ನಡೆದ ಮೊದಲ ಶರಣಮೇಳಕ್ಕೆ ನನ್ನ ಕರೆದಿದ್ದರು. ಹಿಂದಿನ ದಿನ ಬಾಗಲಕೋಟೆಗೆ ಬಂದು ವೈದ್ಯರೊಬ್ಬರ ಮನೆಯಲ್ಲಿ ಉಳಿದಿದ್ದೆ. ಆಗ ಅವರ ಮನೆಗೆ ಫೋನ್ ಕರೆಯೊಂದು ಬಂದಿತ್ತು. ನೀವು ಯಾವುದೇ ಕಾರಣಕ್ಕೂ ಶರಣ ಮೇಳಕ್ಕೆ ಹೋಗುವಂತಿಲ್ಲ. ವಾಪಸ್ ಹೋಗಿ ಎಂದು ಹೇಳಿದ್ದರು. ಅದಕ್ಕೆ ಜಗ್ಗದೇ ಅಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ’ ಎಂದು ಮುರುಘಾಮಠದ ಶಿವಮೂರ್ತಿ ಶರಣರು ನೆನಪಿಸಿಕೊಂಡರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!