Breaking News
Home / featured / ಇಷ್ಠಲಿಂಗಧಾರಿಗಳಿಗೆ ಜಾತಿಯಿಲ್ಲ…..

ಇಷ್ಠಲಿಂಗಧಾರಿಗಳಿಗೆ ಜಾತಿಯಿಲ್ಲ…..

ಹೊಳಿಹೊಸುರ ಮಡಿವಾಳೇಶ್ವರ ಮಠದ ಪ್ರಭುರಾಜೇಂದ್ರ ಸ್ವಾಮೀಜಿ ಅಭಿಮತ
ನೇಗಿನಹಾಳ :  ಜಗತ್ತಿಗೆ ದಾರಿದ್ವೀಪವಾದ ವಿಶ್ವಗುರು ಬಸವಣ್ಣನವರ ೧೨ನೆಯ ಶತಮಾನದಲ್ಲಿ ನೀಡಿದ ವಚನ ಸಾಹಿತ್ಯ ಇಂದು ಜಗತ್ತಿನ ನೂರಾರು ದೇಶಗಳಿಗೆ ಸಂವಿಧಾನವಾಗಿದೆ. ಅವರು ನೀಡಿರುವ ವಚನಗಳ ಜ್ಞಾನ ಇಂದು ಗುರುವಿಗೆ ಗುರುಗಳಾಗುವ ಮೂಲಕ ಬಸವಣ್ಣನವರು ವಿಶ್ವಕ್ಕೆ ಜಗದ್ಗುರುಗಳಾದರು. ವರ್ಣಾಶ್ರಮ ಪದ್ಧತಿಯ ಕಿತ್ತೊಗೆಯಲು ಎಲ್ಲ ವರ್ಗದ ಜನರಿಗೆ ಇಷ್ಠಲಿಂಗ ನೀಡಿ ಸಮಾನತೆಯ ಸಂದೇಶ ಜಗತ್ತಿಗೆ ಸಾರೀದರು ಎಂದು ಹೊಳಿಹೊಸುರ ಮಡಿವಾಳೇಶ್ವರ ಮಠದ ಪ್ರಭುರಾಜೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಹೊಳಿಹೊಸುರ ಗ್ರಾಮದಲ್ಲಿ ಆಯೋಜಿಸಿದ್ದ ಜಗನ್ಮಾತಾ ಅಕ್ಕಮಹಾದೇವಿ ಆಶ್ರಮದಲ್ಲಿ ವೈರಾಗ್ಯನಿಧಿ ಅಕ್ಕಮಹಾದೇವಿತಾಯಿ ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಅಲ್ಲಮಪ್ರಭು ಜಯಂತ್ಯೋತ್ಸವದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿ ಮಾತನಾಡಿದರು. ಇಷ್ಠಲಿಂಗ ಜ್ಞಾನದ ಸಂಖ್ಯೇತ, ಸಮಾನತೆಯ ಸಂಖ್ಯೇತ, ಇದನ್ನು ಅತ್ಯಂತ ಕೆಳಸ್ಥರದಲ್ಲಿದ್ದ ಹರಳಯ್ಯನಿಂದ ಹಿಡಿದು ಬ್ರಾಹ್ಮಣರ ಮದುವರಸರಿಗೂ ದೀಕ್ಷೆ ನೀಡಿವ ಮೂಲಕ ಇಷ್ಠಲಿಂಗ ಯಾವುದೇ ಜಾತಿಗೆ ಸಿಮಿತವಾದುದ್ದಲ್ಲ ಎಂದ ಬಸವಣ್ಣನವರು ತೋರಿಸಿಕೊಟ್ಟಿದಾರೆ ಎಂದರು.
(ಹೊಳಿಹೊಸುರ ಅಕ್ಕಮಹಾದೇವಿ ಆಶ್ರಮದಲ್ಲಿ ಜರುಗಿದ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಚಿಕ್ಕೊಪ್ಪ ಬಸವಾನುಭವ ಮಂಟಪದ ಅದ್ಯಕ್ಷ ಚನ್ನಪ್ಪ ನರಸಣ್ಣವರ ದಂಪತಿಗಳನ್ನು ಸತ್ಕರಿಸಿದರು.)
ಚಿಕ್ಕೊಪ್ಪ ಬಸವಾನುಭವ ಮಂಟಪದ ಅದ್ಯಕ್ಷ ಚನ್ನಪ್ಪ ನರಸಣ್ಣವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಲಿಂಗಾಯತ ಎಂಬುವುದು ಜಾತಿಯಲ್ಲ ಹಾಗೂ ಜಾತಿವಂತರು ಲಿಂಗಾಯತರಲ್ಲ. ಅದು ಗುರು ಬಸವಣ್ಣನವರಿಂದ ಆರಂಭವಾದ ಸಮಾನತೆಯ ಸಂಖ್ಯೇತವಾದ ಹಾಗೂ ಅರಿವಿನ ಪ್ರಜ್ಞೆ ಮೂಡಿಸುವ  ವಿಶ್ವಾತ್ಮನ ಕುರುಹು ಎಂದರು.
ಬೈಲಹೊಂಗಲ ಕೃಷಿ ಅಧಿಕಾರಿಗಳಾದ ಆರ್. ಆಯ್ ಕುಂಬಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಡಾ. ಜಗದೀಶ ಹಾರೂಗೋಪ್ಪ, ಡಿ. ಆರ್ ಪಾಟೀಲ, ಜಗದೀಶ ಬಿಕ್ಕಣ್ಣವರ, ಬಾಳಪ್ಪ ತಬರದ ಮತ್ತಿತ್ತರರು ಉಪಸ್ಥಿತರಿದ್ದರು. ಮಾನಪ್ಪ ಕುಂಬಾರ, ಸರಸ್ವತಿ ಸಂಗೀತ ಸೇವೆ ನೀಡಿದರು, ಕಿತ್ತೂರ ರಾಷ್ಟ್ರೀಯ ಬಸವಸೇನೆಯ ಕಾರ್ಯದರ್ಶಿ ಕೋರಿಶಟ್ಟರ ಸ್ವಾಗತಿಸಿದರು, ಶಿಕ್ಷಕ ಸತೀಶ ಕಾರಿಮನಿ ನಿರೂಪಿಸಿ ವಂಧಿಸಿದರು.
ಇದೇ ವೇಳೆ ಕಾರ್ಯಕ್ರಮಗಳ ಸಂಚಾಲಕ ನಾಗೇಶ ಬಸರಕೋಡ ಪ್ರಸ್ಥಾವಿಕವಾಗಿ ಮಾತನಾಡಿ ಕುರಗುಂದ ಗ್ರಾಮದ ಲಿಂಗೈಕ್ಯ ಶಿವಾನಂದ ಅಪ್ಪಯ್ಯನವರಮಠ ಸ್ವಾಮಿಗಳು ಹಾಗೂ ನೇಗಿನಹಾಳದ ಲಿಂಗೈಕ್ಯ ತಾವಲಗಿ ಗುರುಗಳ ಇರ್ವರೂ  ಈ ಗ್ರಾಮಕ್ಕೆ ನೀಡಿದ ಜ್ಞಾನದಾಸೋಹ, ವಚನ ಸಾಹಿತ್ಯದ ಅನುಭಾವ ಸ್ಮರಣೀಯವಾದದ್ದು ಅಂದಿನ ಕಾಲದಲ್ಲಿ ಗ್ರಾಮದ ಎಲ್ಲ ವರ್ಗದ ಬಡಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿ ವಿದ್ಯಾರ್ಜನೆ ಮಾಡಿದರು, ಅಂತಹವರ ಅಭೂತಪೂರ್ವ ಕೊಡುಗೆ ಇಂದು ಇತಂಹ ವೈಶಿಷ್ಠಪೂರ್ಣ ಕಾರ್ಯಕ್ರಮ ಜರಗುತ್ತಿದೆ ಎಂದು ಸ್ಮರಿಸಿದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!