Breaking News
Home / featured / ಇಂದಿನಿಂದ ೧೯ರ ವರಿಗೆ ನೇಗಿನಹಾಳ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವ ಆರಂಭ

ಇಂದಿನಿಂದ ೧೯ರ ವರಿಗೆ ನೇಗಿನಹಾಳ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವ ಆರಂಭ

ಜಗದ್ಗುರು ಮಡಿವಾಳೇಶ್ವರ ಮಠ
ನೇಗಿನಹಾಳ :  ನಮ್ಮ ನಾಡು ಬಸವಾದಿ ಶರಣರ, ಸಂತರ, ಮಹಾತ್ಮರ ಮೆಟ್ಟಿದ ನೆಲೆಯಾಗಿದ್ದು ಇಲ್ಲಿ ವೈಚಾರಿಕ ಕ್ರಾಂತಿ ಜಾತಿ ರಹಿತ ಸಮಾಜ ಹಾಗೂ ಸಾಮಾಜಿಕ ಅಸಮಾನತೆ, ಜನರಲ್ಲಿರುವ ಮೌಡ್ಯವನ್ನು ಕಿತ್ತೆಸೆಯುವಲ್ಲಿ ಪೂಜ್ಯ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಪಾತ್ರ ಬಹಳ ಪ್ರಮುಖವಾದದ್ದು ಎಂದು ನೇಗಿನಹಾಳ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಮಹಾಸ್ವಾಮೀಜಿಗಳು ಹೇಳಿದರು.
ಜಗದ್ಗುರು ಮಡಿವಾಳೇಶ್ವರರು
ನೇಗಿನಹಾಳ ಗ್ರಾಮದಲ್ಲಿ ಇದಿನಿಂದ ಸತತ ೫ ದಿನಗಳ ಕಾಲ ನಡೆಯುವ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ೧೩೮ನೆಯ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಪೂಜ್ಯ ಅಡಿವೆಪ್ಪ ಮಹಾಸ್ವಾಮಿಗಳ ೧೩ನೆಯ ಸ್ಮರಣೋತ್ಸವ ಕಾಯಕ್ರಮದ ನಿಮಿತ್ತ ಷಟಸ್ಥಲ ಧ್ವಜಾರೋಹಣ ಮಾಡುವ ಮೂಲಕ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಪೂಜ್ಯರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ, ಜನರಲ್ಲಿರುವ ಮೌಡ್ಯವನ್ನು ಹೊಡೆದೊಡಿಸಿ, ಜಾತಿರಹಿತ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಯನ್ನೆ ಮಾಡಿದ ಮಹಾನ್ ಚೇತನ ಅಪ್ಪ ಮಡಿವಾಳೇಶ್ವರರು ಎಂದರು.
ಪೀಠಾಧಿಪತಿ ಬಸವ ಸಿದ್ಧಲಿಂಗ ಮಹಾಸ್ವಾಮಿಗಳು
ಪ್ರತಿದಿನ ಶ್ರೀಮಠದಲ್ಲಿ ನಾಡಿನ ಹಲವಾರು ಪೂಜ್ಯರು ಹಾಗೂ ಅನುಭಾವಿಗಳು ಆಗಮಿಸಿ ಬಸವಾದಿ ಶರಣರ ಚಿಂತನೆಗಳು ನಡೆಸಲ್ಲಿದ್ದು ಪ್ರತಿಯೊಬ್ಬರೂ ಭಾಗಿಯಾಗಿ ತಮ್ಮ ಜೀವನವನ್ನು ಸನ್ಮಾರ್ಗದತ್ತ ಸಾಗಿಸಬೇಕೆಂದು ತಿಳಿಸಿದರು.
ನೇಗಿನಹಾಳ ಗ್ರಾಮದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ೧೩೮ ನೆಯ ಸ್ಮರಣೋತ್ಸವ ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣವನ್ನು ಪೀಠಾಧಿಪತಿಗಳಾದ ಬಸವ ಸಿದ್ಧಲಿಂಗ ಸ್ವಾಮೀಜಿಗಳು ನೇರವೇರಿಸಿದರು. ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಉಪಸ್ಥಿತರಿದ್ದರು.
ಈ ವೇಳೆ ಗ್ರಾಮದ ಗಣ್ಯರಾದ ಜಿ.ಪಂ ಮಾಜಿ ಸದಸ್ಯೆ ಬಾಬಾಸಾಹೇಬ ಪಾಟೀಲ, ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಗ್ರಾ.ಪಂ ಉಪಾದ್ಯಕ್ಷ ಮಹಾದೇವ ನರಸಣ್ಣವರ, ಬಸವ ಕೇಂದ್ರದ ಮುಖಂಡ ಸೋಮನಿಂಗ ಬಾಗೇವಾಡಿ, ಸಿದ್ದಪ್ಪ ಶಿರಸಂಗಿ, ಮಡಿವಾಳಪ್ಪ ಮರಿತಮ್ಮನವರ, ಮಲ್ಲಿಕಾರ್ಜುನ ಮೆಳವಂಕಿ, ಕೃಷ್ಣಾಜಿ ಕುಲಕರ್ಣಿ, ಸೋಮನಿಂಗ ಪಾಶ್ಚಾಪೂರ, ಸಂತೋಷ ಅರವಳ್ಳಿ, ಸತ್ಯಪ್ಪ ತುರಮರಿ, ಬಸವರಾಜ ಕರ್ಲೆಪ್ಪನವರ, ಶಿವಾನಂದ ಹಂಪಣ್ಣವರ, ಸತ್ಯಪ್ಪ ತಳವಾರ ಮತ್ತಿತ್ತರರು ಉಪಸ್ಥಿತರಿದ್ದರು. ಶಿಕ್ಷಕ ಬಸಯ್ಯಾ ಹಿರೇಮಠ ಪೂಜೆ ಸಲ್ಲಿಸಿದರು. ಶಿವಾನಂದ ನರಸಣ್ಣವರ ಪ್ರಾರ್ಥಿಸಿದರು, ಶ್ರೀಶೈಲ ತೋರಣಗಟ್ಟಿ ನಿರೂಪಿಸಿ ವಂದಿಸಿದರು.
ಇಂದಿನಿಂದ ವಿವಿಧ ಕಾರ್ಯಕ್ರಮಗಳು :
ಪ್ರತಿದಿನ ಸಂಜೆ ೬:೩೦ ರಿಂದ ೯:೦೦ ಗಂಟೆ ವರಿಗೆ ನಾಡಿನ ಪೂಜ್ಯರಿಂದ ಪ್ರವಚನ, ಅನುಭಾವ ಹಾಗೂ ವಚನ ಸಂಗೀತ, ಭಜನೆ, ನೃತ್ಯ, ವಿವಿಧ ಕಾರ್ಯಕ್ರಮ ನಡೆಯಲಿದ್ದು
ದಿನಾಂಕ ೧೯ ರಂದು ಮುಂಜಾನೆ ಶಿವಯೋಗ,
ಮಧ್ಯಾಹ್ನ ಮಹಾಪ್ರಸಾದ,
ಸಂಜೆ ೪ಗಂಟೆಗೆ ಮಹಾರಥೋತ್ಸವ ಜರುಗಲಿದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!