Breaking News
Home / featured / ಬೆಳಗಾವಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ

ಬೆಳಗಾವಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ

ಬೆಂಗಳೂರಿನ ರಾಮಪ್ರಸಾದ ರವರ ಅಶ್ವಿನಿ ರೆಕಾರ್ಡಿಂಗ್ ಸಂಸ್ಥೆಯಿಂದ ಜ್ಯೋತಿ ಬದಾಮಿಯವರು ರಚಿಸಿದ “ಶರಣು ಶರಣೆಂಬೆ” ಎಂಬ ಕೃತಿಯನ್ನು ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.

ಹಾಂತೇಶನಗರ/ಬೆಳಗಾವಿ : ದಯೆ, ಕರುಣೆ, ಪ್ರೀತಿ, ಸಮಾನತೆ, ಇವು ಧಾರ್ಮಿಕತೆ ಸಂಕೇತಗಳಾಗಿದ್ದು ಅವುಗಳನ್ನು ಆಚರಣೆಗೆ ತಂದು ನಾವೂ ಬದುಕಿ ಮತ್ತೊಬ್ಬರಿಗೆ ಬದುಕಲು ಅವಕಾಶವನ್ನು ಮಾಡಿಕೊಡುವದೇ ಆಧ್ಯಾತ್ಮ ಅದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು.

ಮಹಾಂತೇಶನಗರದ ಮಹಾಂತ ಭವನದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ನಿಮಿತ್ತ ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳಿಂದ ನಡೆಯುತ್ತಿರುವ ಒಂಭತ್ತನೆಯ ದಿನ ಶರಣ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಿ ಮಾತನಾಡಿದರು.

ಸ್ಪಷ್ಟವಾಗಿ ದೇವರ ದರ್ಶನ ಮಾಡಿಸಿದ ಅಕ್ಕಮಹಾದೇವಿ ವಚನ ಸಾಹಿತ್ಯದ ಮೂಲಕ ಹದಿಹರೆಯದ ವಯಸ್ಸಿನಲ್ಲಿಯೇ ಸುಖದ ಸುಪ್ಪತ್ತಸಂಜಯ ಹಾತೊರೆಯದೆ ಕೌಶಿಕ ರಾಜನ ಅರಮನೆಯ ತೊರೆದು ವೀರ ವೀರಾಗಿಣಿಯಾಗಿ ಆದರ್ಶದ ಬದುಕನ್ನು ಅನುಭವಿಸಿ ಅನುಭಾವ ಸರ್ವರಿಗೂ ಉಣಬಡಿಸಿದ ಮಹಾತಾಯಿ ಅಕ್ಕಮಹಾದೇವಿಯವರ ಜೀವನ ಸರ್ವ ಕಾಲಕ್ಕೂ ಸ್ಮರಣೀಯ ಎಂದು ತಿಳಿಸಿದರು. ಅಕ್ಕನವರು ಸಾವಿಲ್ಲದ,ರೂಹಿಲ್ಲದ ಚಲುವ ಚನ್ನಮಲ್ಲಿಕಾರ್ಜುನ ದೇವರು ನನ್ನ ಗಂಡನೆಂದು ಹೇಳಿದ ಮೊದಲ ಮಹಿಳಾ ವಚನಗಾರ್ತಿ ಎಂದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ರಾಮಪ್ರಸಾದ ರವರ ಅಶ್ವಿನಿ ರೆಕಾರ್ಡಿಂಗ್ ಸಂಸ್ಥೆಯಿಂದ ಜ್ಯೋತಿ ಬದಾಮಿಯವರು ರಚಿಸಿದ “ಶರಣು ಶರಣೆಂಬೆ” ಎಂಬ ಕೃತಿ ಬಿಡುಗಡೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ನ್ಯಾಯಾಧೀಶರಾದ ಉಜ್ವಲಾ ಸಿದ್ದಣ್ಣವರ ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಅದ್ಯಕ್ಷ ಅರವಿಂದ ಪರುಶೆಟ್ಟಿ, ಕಾಶಪ್ಪ ಉಪ್ಪಿನ, ರಾಷ್ಟ್ರೀಯ ಬಸವ ಸೇನಾ ಅದ್ಯಕ್ಷ ಶಂಕರ ಗುಡಸ, ಅಶೋಕ ಮಳಗಲಿ, ರಾಜು ಪದ್ಮನ್ನವರ, ಉಜ್ವಲಾ ವೀರಣ್ಣ ಸಂಜಯ ಭಾಂವಿ, ಸತೀಶ್ ಚೌಗಲಾ, ಆನಂದ ಕರ್ಕಿ, ಸದಾನಂದ ಬಶೆಟ್ಟಿ,
ಚೆನ್ನಪ್ಪ ನರಸನ್ನವರ ಮತ್ತಿತ್ತರ ಸಾವಿರಾರು ಸಂಖ್ಯೆಯ ಶರಣ ಶರಣೆಯರು ಭಾಗಿಯಾಗಿ ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!