Breaking News
Home / featured / ಎಂ.ಬಿ.ಪಾಟೀಲ್ ರ ವಿರುದ್ಧ ನಕಲಿ ಪತ್ರ ರಚಿಸಿದ್ದ ಶೃತಿ ಬೆಳ್ಳಕ್ಕಿ ಬಂಧನ

ಎಂ.ಬಿ.ಪಾಟೀಲ್ ರ ವಿರುದ್ಧ ನಕಲಿ ಪತ್ರ ರಚಿಸಿದ್ದ ಶೃತಿ ಬೆಳ್ಳಕ್ಕಿ ಬಂಧನ

ಎಂ.ಬಿ.ಪಾಟೀಲ್ ರ ವಿರುದ್ಧ ನಕಲಿ ಪತ್ರ ರಚಿಸಿದ್ದ ಶೃತಿ ಬೆಳ್ಳಕ್ಕಿ ಬಂಧನ.

ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟಗಾರ ಲಿಂಗಾಯತ ಸಮಾಜದ ನಾಯಕರಾದ ಸನ್ಮಾನ್ಯ ಗೃಹ ಮಂತ್ರಿಗಳಾದ ಎಂ.ಬಿ.ಪಾಟೀಲ್ ರು ಸೋನಿಯಾ ಗಾಂಧಿಯವರಿಗೆ ಲಿಂಗಾಯತ ಧರ್ಮದ ಕುರಿತು ಪತ್ರ ಬರೆದರೆಂದು ಖೊಟ್ಟಿ ಪತ್ರ ರಚಿಸಿದ್ದ ಧಾರವಾಡ ಜಿಲ್ಲೆಯ ಬಿಜೆಪಿಯ ಗ್ರಾಮೀಣ ಉಪಾಧ್ಯಕ್ಷ ಪರಮೇಶ ಉಳವಣ್ಣನವರ ಪತ್ನಿ ಶೃತಿ ಬೆಳ್ಳಕ್ಕಿ ಯನ್ನು ಪೋಲಿಸರು ಬಂಧಿಸಿದ್ದಾರೆ…

ಲಿಂಗಾಯತ ಹೋರಾಟದ ದಿಕ್ಕು ತಪ್ಪಿಸಲು, ಲಿಂಗಾಯತ ಹೋರಾಟಗಾರರ ಹೆಸರಿಗೆ ಮಸಿ ಬಳಿಯುವ ಷಢ್ಯಂತ್ರದ ಭಾಗವಾಗಿ ಈ ನಕಲಿ ಪತ್ರ ರಚಿಸಿ ವಾಟ್ಸಪ್ ಗುಂಪುಗಳಲ್ಲಿ ಹಾಗೂ ಫೇಸ್ ಬುಕ್ ಗಳಲ್ಲಿ ಹರಿಯಬಿಡಲಾಗಿತ್ತು. ಇದು ರಾಜ್ಯದ ತುಂಬಾ ವೈರಲ್ ಆಗಿತ್ತು.

ಇಂತಹ ದುರುದ್ದೇಶದಿಂದ ರಚಿಸಿದ್ದ ನಕಲಿ ಪತ್ರವನ್ನು ಲಿಂಗಾಯತ ವಿರೋಧಿ ವೈದ್ಧಿಕ ವಿಜಯ ಸಂಕೇಶ್ವರನ ವಿಜಯವಾಣಿ ದಿನಪತ್ರಿಕೆಯಲ್ಲಿ ಲೋಕಸಭಾ ಚುಣಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಮ್ಮ ಲಿಂಗಾಯತ ನಾಯಕರನ್ನು ಟೀಕೆಗೆ ಗುರುಮಾಡಬೇಕೆಂದು ಇಂತಹ ಸುಳ್ಳು ಸುದ್ಧಿಯನ್ನು  ಪ್ರಕಟಿಸಿದ್ದರು.

ಲಿಂಗಾಯತ ಧರ್ಮದ ಹೋರಾಟವನ್ನು ದಮನ ಮಾಡುವ ಷಡ್ಯಂತ್ರದ ಭಾಗವಾಗಿ ನಕಲಿ ಪತ್ರಗಳನ್ನು, ದೊಂಬಿಗಳನ್ನು,ಸುಳ್ಳು ಸುದ್ದಿ ಹಬ್ಬಿಸುವವರ ಹಿಂದೆ ರಾಜ್ಯದ ಲಿಂಗಾಯತ ವಿರೋಧಿ ದೊಡ್ಡ ದೊಡ್ಡ ರಾಜಕಾರಣಿಗಳು ಷಾಮೀಲಾಗಿದ್ದಾರೆ. ಇವರೊಡನೆ ಕೆಲ ದಿನಪತ್ರಿಕೆಗಳು ಹಾಗೂ ಕೆಲ ಟಿವಿ ಮಾಧ್ಯಮಗಳು ಸೇರಿಕೊಂಡಿವೆ.

ವರದಿ ಮೂಲ : ಪ್ರಜಾಕಿರಣ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

One comment

  1. Murughendarkorneshwar

    ಲಿಂಗಾಯತ ಧರ್ಮ ಬಸವ ಧರ್ಮ ಒಂದು ಇದರ ಬೆಳವಣಿಗೆ ಸಹಿಸದ ಕೆಲವರು ಬರೆಯುವದು ನಕಲಿ ಸೃಷ್ಠಿಮಾಡಿದ ದಾಖಲೆಗಳ ಪ್ರಕಟಿಸುವದು ಮಾಡಿದರೆ ನಿಜವಾದ ಸಾಹಿತ್ಯ ಇತಿಹಾಸ ಮರೆಮಾಡಲು ಸಾಧ್ಯವಿಲ್ಲ

Leave a Reply

Your email address will not be published. Required fields are marked *

error: Content is protected !!