Breaking News
Home / ಕೊರೊನಾ

ಕೊರೊನಾ

ಬಸವತತ್ವ ನಿಷ್ಠುರ, ಕೇಂದ್ರ ಸಚಿವ ಸುರೇಶ ಅಂಗಡಿ ಲಿಂಗೈಕ್ಯ

  ಬೆಳಗಾವಿ : ನಗರದ ಲಿಂಗಾಯತ ಸಂಘಟನೆಯೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಸುರೇಶ ಅಂಗಡಿ ಅವರು ನೂರಾರು ಬಸವತತ್ವ ಪ್ರಸಾರದ ಕಾರ್ಯವನ್ನು ಕೈಗೊಂಡಿದ್ದರು. ಇವರು ಇಂದು ಕೊರೊನಾ ಸೋಂಕಿಗೆ ತುತ್ತಾಗಿ ಲಿಂಗೈಕ್ಯರಾಗಿದ್ದು ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. 2014ರಲ್ಲಿ ದೆಹಲಿಯಲ್ಲಿ ಜರುಗಿದ ‌ಲಿಂಗಾಯತ ಧರ್ಮದ ಸಮಾವೇಶ ಬೆಳಗಾವಿ ಸಂಸದ ಸುರೇಶ ಅಂಗಡಿಯವರು ಇವರಲ್ಲಿರುವ ಲಿಂಗಾಯತ ಸಮಾಜದ ಮೇಲಿನ ಕಾಳಜಿ ಹಾಗೂ ಸಹಕಾರದಿಂದ ಇಂದು ನಡೆಯುತ್ತಿರುವ ಲಿಂಗಾಯತ ಕ್ರಾಂತಿ ಪತ್ರಿಕೆ ಆರಂಭವಾಗುವಲ್ಲಿ …

Read More »

ಸಿದ್ದರಾಮಯ್ಯಗೂ ಕೊರೊನಾ ದೃಢ, ಮಣಿಪಾಲ್ ಆಸ್ಪತ್ರೆಗೆ ದಾಖಲು!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಯಾವುದೇ ರೋಗ ಲಕ್ಷಣ ಇಲ್ಲ ಆದರೂ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿರುವೆ ಎಂದು ಅವರು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಹಿರಿಯ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅನಾರೋಗ್ಯದ ಹಿನ್ನೆಲೆ ಅವರನ್ನು ಸೋಮವಾರ ರಾತ್ರಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಿದ್ದರಾಮಯ್ಯ ಅವರಿಗೆ ಕೊರೊನಾ ವೈರಸ್ ಸೋಂಕಿರುವ ವಿಚಾರವನ್ನು …

Read More »

ಬಿ.ಎಸ್.ಯಡಿಯೂರಪ್ಪನವರಿಗೂ ಕೊರೋನ ಸೋಂಕು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೂ ಕೊರೋನಾ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ನನಗೆ ಕೊರೋನಾ ಪಾಸಿಟಿವ್ ಬಂದಿದೆ. ರೋಗ ಲಕ್ಷಣ ಇಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲವೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದೂ ಅವರು ಕೋರಿದ್ದಾರೆ.

Read More »

ಶಾಸಕ ಮಹಾಂತೇಶ ಕೌಜಲಗಿ ಗೆ ಕರೋನ ಪಾಸಿಟಿವ್.!

ಬೈಲಹೊಂಗಲ: ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಕೊರೋನಾ ವಕ್ಕರಿಸಿದೆ. ಶಾಸಕರ ಜೊತೆ ಸಭೆ ನಡೆಸಿದ ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳಿಂದ ಸತತ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಶಾಸಕರ ಸಂಪರ್ಕಕ್ಕೆ ಬಂದಿರುವ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಸೀಲ್ದಾರ ಡಾಕ್ಟರ್ ದೊಡ್ಡಪ್ಪ ಹೂಗಾರ್, ತಾಪಂ ಇಒ ಸುಭಾಷ್ ಸಂಪಗಾವಿ ಇವರು …

Read More »

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ

ಕೋವಿಡ್ ನಿಯಂತ್ರಣದಲ್ಲಿ “ಆಶಾ” ಪಾತ್ರ ಪ್ರಶಂಸನೀಯ: ಸಚಿವ ಎಸ್.ಟಿ ಸೋಮಶೇಖರ ಬೆಳಗಾವಿ : ಕೋವಿಡ್-೧೯ ಹಿನ್ನೆಲೆಯಲ್ಲಿ ಸರ್ಕಾರ ಘೋಷಣೆ ಮಾಡಿರುವಂತೆ ಈಗಾಗಲೆ ೨೮ ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಣೆ ಮಾಡಲಾಗಿದ್ದು, ಉಳಿದ ಆಶಾ ಕಾರ್ಯಕರ್ತೆಯರಿಗೆ ಒಂದು ವಾರದಲ್ಲಿ ಪ್ರೊತ್ಸಾಹ ಧನದ ಚೆಕ್ ವಿತರಣೆ ಮಾಡಲಾಗುವುದು ಎಂದು ಸಹಕಾರ ಇಲಾಖೆಯ ಸಚಿವ ಎಸ್. ಟಿ ಸೋಮಶೇಖರ ಅವರು ತಿಳಿಸಿದರು. ಸಹಕಾರ ಇಲಾಖೆ ಹಾಗೂ ಜೊಲ್ಲೆ ಉದ್ಯೋಗ ಸಮೂಹ, …

Read More »

ನೇಸರಗಿಯಲ್ಲಿ ಮೊದಲ ಕರೋನ ಪಾಸಿಟಿವ್ ಪ್ರಕರಣ ದಾಖಲು

ನೇಸರಗಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು,  ಸೋಂಕಿತರ ಸಂಖ್ಯೆ 8 ಲಕ್ಷ ಗಡಿ ದಾಟಿದೆ. ನೇಸರಗಿಯಲ್ಲಿ ಮೊದಲ ಕರೋನ ಪ್ರಕರಣ ದಾಖಲಾಗಿದ್ದು, ಜನ ತೀವ್ರ ಆತಂಕಗೊಳಗಾಗಿದ್ದಾರೆ. ಸೋಖಿತ ವ್ಯಾಪಾರಸ್ಥ ಎಂದು ತಿಳಿದುಬಂದಿದೆ.  ಕುಟುಂಬದೊಂದಿಗೆ ನೇಸರಗಿಯಲ್ಲಿ ವಾಸವಾಗಿದ್ದ ಕರೋನಾ ಪೊಸಿಟಿವ್ ವ್ಯಕ್ತಿ ಇಪ್ಪತ್ತು ದಿನಗಳ ಹಿಂದೆ ಆಂದ್ರಪ್ರದೇಶ ರಾಜ್ಯದಿಂದ ಲಾಕಡೌನ ಮುಕ್ತಾಯವಾದ ನಂತರ ಅಕ್ಕಿ ತಂದು ವಹಿವಾಟು ನಡೆಸುತ್ತಿದ್ದ. ಕಳೆದ ಹತ್ತು ದಿನಗಳಿಂದ ಜ್ವರ, ಕೆಮ್ಮು, ನೆಗಡಿಯಿಂದ …

Read More »

ಸಂಸದೆ ಸುಮಲತಾ ಅಂಬರೀಶ್‌ಗೆ ಕರೋನ ಸೋಂಕು

ಮಂಡ್ಯ: ಮಂಡ್ಯ ಜಿಲ್ಲೆ ಸಂಸದೆ ಸುಮಲತಾ ಅಂಬರೀಶ್‌ಗೆ ಕೊರೊನಾ ಸೋಂಕು ಇರೋದು ಧೃಡಪಟ್ಟಿದೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಅವರು ಬರೆದುಕೊಂಡಿದ್ದು, ಅವರು ಹೇಳಿರುವ ಪ್ರಕಾರ ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. …

Read More »

ಕೊರೊನಾ ನಿಯಂತ್ರಣಕ್ಕಾಗಿ 10,000 ಹಾಸಿಗೆಯ ಆಸ್ಪತ್ರೆ ಸಿದ್ಧ

ಬೆಂಗಳೂರು : ಕರ್ನಾಟಕದ ಜನತೆಗೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಂದ ಮಹತ್ವದ ಹೆಜ್ಜೆ, ರಾಜ್ಯದ ಜನತೆಗೆ ಒಂದು ಸಂತೋಷದ ಸುದ್ದಿ. ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೂತನವಾಗಿ 10,000 ಹಾಸಿಗೆಗಳೊಂದಿಗೆ ಸಜ್ಜುಗೊಂಡಿರುವ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವು ಭಾರತದಲ್ಲೇ ಬೃಹತ್ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವಾಗಿದೆ. 10,100 ಹಾಸಿಗೆಯ ವ್ಯವಸ್ಥೆಯನ್ನು ಲಕ್ಷಣ ರಹಿತ ರೋಗಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಮತ್ತು ವಯಸ್ಕರ ಮನರಂಜನೆಗಾಗಿ ಎಲ್ …

Read More »

ಗೋಕಾಕ ತಾಲೂಕಿಗೂ ವಕ್ಕರಿಸಿದ ಮಹಾಮಾರಿ ಕರೋನ

ಗೋಕಾಕ:  ತಾಲೂಕಿನ ಶಿಲ್ತಿಭಾವಿ ಮತ್ತು ಮೂಡಲಗಿ  ತಾಲೂಕಿನ ಕಲ್ಲೋಳಿಯಲ್ಲಿ  ಇಬ್ಬರಿಗೆ ಕೋರೊನಾ ಧೃಡ ಪಟ್ಟಿದ್ದು ಎರಡು ಗ್ರಾಮಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಮುಂಬೈನಿಂದ ಆಗಮಿಸಿದವರ ಪೈಕಿ  ಇಬ್ಬರು ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದೆ.  ಕಲ್ಲೋಳಿಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ 11 ದಿನಗಳ ಬಳಿಕ ಊರೆಲ್ಲ ಅಡ್ಡಾಡಿದ್ದಾನೆ ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಶಿಲ್ಥಿಭಾವಿಯಲ್ಲೂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಸೊಂಕು ಧೃಡಪಟ್ಟಿದೆ. ಸೋಂಕು ತಗುಲಿದ ಹಿನ್ನಲೆ …

Read More »

ಕೊರೊನಾಘಾತ: ಒಂದೇ ದಿನ 388 ಜನರಿಗೆ ಕೊರೋನಾ ಸೋಂಕು

ಬೆಂಗಳೂರು: ಬೆಳಗಾವಿ ಸೇರಿದಂತೆ ಕರ್ನಾಟಕಕ್ಕೆ ಇಂದು ದೊಡ್ಡ ಕೊರೋನಾ ಶಾಕ್ ಉಂಟಾಗಿದೆ. ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ಇಂದು ಮಹಾಸ್ಫೋಟ ಸಂಭವಿಸಿದೆ. ಉಡುಪಿಯಲ್ಲಿ 150, ಬೆಳಗಾವಿಯಲ್ಲಿ 51, ಕಲಬುರಗಿ 100 ಸೇರಿದಂತೆ ರಾಜ್ಯದಲ್ಲಿ ಒಟ್ಟೂ 388 ಜನರಿಗೆ ಕೋರೋನಾ ಪತ್ತೆಯಾಗಿದೆ.  ರಾಜ್ಯದಲ್ಲಿ ಒಟ್ಟೂ 3796 ಜನರಿಗೆ ಸೋಂಕು ತಗುಲಿದಂತಾಗಿದೆ. ಸಮಾಧಾನದ ಸಂಗತಿಯೆಂದರೆ ಸೋಂಕಿತರಲ್ಲಿ ಬಹುತೇಕ ಜನರು ಕ್ವಾರಂಟೈನ್ ನಲ್ಲಿದ್ದವರೇ ಆಗಿರುವುದು. 363 ಜನರು ಮಹಾರಾಷ್ಟ್ರದಿಂದ ಹಿಂತಿರುಗಿ ಬಂದವರು.

Read More »
error: Content is protected !!