Breaking News
Home / ವಚನ ವಿಶ್ಲೇಷಣೆ

ವಚನ ವಿಶ್ಲೇಷಣೆ

ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ

ವಚನ: ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ. ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ. ವ್ರತಹೀನನರಿದು ಬೆರೆದಡೆ ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ. ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ. ಸೂಳೆಸಂಕವ್ವೆ ಭಾವಾರ್ಥ = ಸೂಳೆ ಸಂಕೆವ್ವೆಯವರು ತಮ್ಮ ಈವೊಂದು ವಚನದಲ್ಲಿ ತನ್ನ ವೃತ್ತಿಪದಗಳನ್ನೆ ಬಳಸಿ, ತಾನೇಗೆ ತನ್ನ ಒಳಗಿನ ದೈವತ್ವಕ್ಕೆ ಅರ್ಪಣೆಗೊಂಡೆ ಎಂಬುದನ್ನ ಆಕೆಯು ಇಲ್ಲಿ ತಿಳಿಸಿ ಹೇಳಿದ್ದಾಳೆ. ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ. ನನ್ನ ಈ ತನುಮನ ಭಾವನೆಗಳೆಲ್ಲವನ್ನ …

Read More »

ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ

ವಚನ ವಿಶ್ಲೇಷಣೆ: ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು? ಬೆಳಗಾವಿ : ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ. ಪುರದ ನಾಗಣ್ಣ ವಚನ ಅನುಸಂಧಾನ …

Read More »

ಶರಣ ಪರಂಪರೆ: ಕೋಟಾರದ ಸೋಮಣ್ಣ

ಶರಣ ಕೋಟಾರದ ಸೋಮಣ್ಣ ಈತನು ಬಸವಣ್ಣನವರ ಸಮಕಾಲೀನನಾದ ಶರಣನಾಗಿದ್ದು ಈತನ ಕಾಲ 1160 ಎಂದು ಗುರುತಿಸಲಾಗಿದೆ. ಈತನ ಇತಿವೃತ್ತಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕಿರುವುದಿಲ್ಲ. ಕೊಟಾರ ಎಂದರೆ ಉಗ್ರಾಣ‌, ದಾಸ್ತಾನು ಮಳಿಗೆ ಎಂಬರ್ಥವಿದೆ. ಅಂದರೆ ಈ ಶರಣ ಸೋಮಣ್ಣನು ಕಲ್ಯಾಣದ ರಾಜ ಬಿಜ್ಜಳನ ರಾಜ್ಯದಲ್ಲಿ ದಾಸ್ತಾನು ಮಳಿಗೆಯನ್ನೋ, ಉಗ್ರಾಣವನ್ನೋ ನೋಡಿಕೊಳ್ಳುವ ಕಾಯಕದವನು ಇರಬೇಕೆಂದು ಅಂದಾಜಿದಲಾಗಿದೆ. ಯಾವುದೇ ಶರಣರು ತಮ್ಮ ಕಾಯಕದಿಂದಲೇ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರಿಂದ ಈ ಶರಣ ಸೋಮಣ್ಣನಿಗೆ ಕೊಟಾರದ ಸೋಮಣ್ಣ ಎಂಬ …

Read More »

ಶರಣರು ಶೈವ/ವೀರಶೈವಗಳನ್ನೆಲ್ಲ ಅಲ್ಲಗಳೆದಿದ್ದರು.

ಬಸವಾದಿ ಶರಣರು ಒಂದು ಹೊಸ ವಿಚಾರಧಾರೆಯನ್ನು ಹುಟ್ಟುಹಾಕಿದ್ದರು ಎನ್ನುವುದು ಸೂರ್ಯನಷ್ಟೆ ಸತ್ಯವಾಗಿದ್ದರೂ ಪಟ್ಟಭದ್ರರು ಅವರು ಹಿಂದೂ ಧರ್ಮದ ಸುಧಾರಣಾವಾದಿಗಳುˌ ಶೈವ/ವೀರಶೈವ ಪಂಥದ ಅನುಯಾಯಿಗಳು ಎಂದು ವಾದಿಸುತ್ತಲೆ ಇರುತ್ತಾರೆ. ಈ ಮೊಂಡುವಾದಗಳು ಶರಣರು ಪ್ರತಿಪಾದಿಸಿದ ವೈಚಾರಿಕ ತತ್ವಗಳಿಗೆ ಹೆದರಿ ಹುಟ್ಟಿದಂತವು ಎಂದು ಬೇರೆ ಹೇಳಬೇಕಿಲ್ಲ. ಚೆನ್ನಬಸವಣ್ಣನವರು ಶರಣರು ಹೇಗೆ ಶೈವ ತತ್ವವನ್ನು ನಿರಾಕರಿಸಿದರು ಎಂದು ವರ್ಣಿಸುವ ವಚನ : ” ಅಂಧಕನು ಓಡ ಹಿಡಿದು ತನ್ನ ಸ್ವರೂಪವ ತಾ ನೋಡುವಂತೆ, ಶೈವ …

Read More »

ಅಕ್ಕಮಹಾದೇವಿ ವಚನಗಳಲ್ಲಿ: ಗುರು

ವಚನ ಸಾಹಿತ್ಯದ ವೈಚಾರಿಕ ನೆಲೆಯಲ್ಲಿ ಸ್ತ್ರೀ ಗೆ ತನ್ನದೆ ಆದ ವ್ಯಕ್ತಿತ್ವ ಎಂದು ತೋರಿಸಿ ಕೊಟ್ಟವಳು ಶರಣೆ ಅಕ್ಕಮಹಾದೇವಿ. ಶರಣ ಸಾಹಿತ್ಯದ ಮಹಿಳೆಯರೆಂದರೆ ಶೀಘ್ರವೆ ಅಕ್ಕಮಹಾದೇವಿ ನೆನಪಾಗುತ್ತಾಳೆ.ಅಕ್ಕ ಬದುಕಿದ ಬದುಕು ಮತ್ತು ಅವಳ ದಿಟ್ತ ಅಭಿವ್ಯಕ್ತಿಗಳು ಎಂತಹ ನಿರ್ಲಕ್ಷ್ಯವನ್ನು ದಾಟಿ ಮುಚ್ಚಿಟ್ಟ ಬೆಳಕಿನಂತೆ ಹೊರಬರಲಾರಂಬಿಸಿದವು.ಬಿಚ್ಚಿದ ಕೂದಲ ಶಿವಶರಣೆಯಾಗಿ.ಲೋಕದ ನೀತಿಯನ್ನು ಧಿಕ್ಕರಿಸುವ ಹೆಣ್ತನದ ಜೀವಂತ ಚಿಲುಮೆಯಾಗಿ ಕಾಣಿಸುವಲ್ಲಿ ಅಕ್ಕನೆಂಬ ಅದಮ್ಯ. ಶಕ್ತಿಯ ನಿಜದ ನೆಲೆಯ ಹುಡುಕಾಟವಾಗಿದೆ. ಅಕ್ಕಮಹಾದೇವಿಗೆ ಬಾಲ್ಯದಲ್ಲಿ ಗುರುಕಾರುಣ್ಯದೊಂದಿಗೆ ಇಸ್ಥಲಿಂಗ …

Read More »

ಶರಣರು ಸಕಲ ಭ್ರಮಾತೀತರು

ಈ ನೆಲದಲ್ಲಿ ಅನೇಕ ಬಗೆಯ ವಿಚಾರಧಾರೆಗಳುˌ ಧಾರ್ಮಿಕ ನಂಬಿಕೆಗಳುˌ ಸಾಧನಾ ಮಾರ್ಗಗಳು ಪ್ರತಿಪಾದಿಸಲ್ಪಟ್ಟಿವೆ. ಕಾಲಕಾಲಕ್ಕೆ ಹಳೆ ವಿಚಾರಗಳನ್ನು ಅಲ್ಲಗಳೆದು ಹೊಸ ವಿಚಾರಗಳು ಹುಟ್ಟಿಕೊಂಡಿವೆ. ಪ್ರತಿಯೊಂದು ಮಾರ್ಗಗಳಲ್ಲೂ ಒಂದಲ್ಲ ಒಂದು ನ್ಯೂನ್ಯತೆ ಇದ್ದೆ ಇದೆ. ಈ ಎಲ್ಲ ಮಾರ್ಗಗಳಿಗೆ ಪರ್ಯಾಯವಾಗಿ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡದ್ದೆ ಶರಣರ ಅನುಭಾವ ಮಾರ್ಗ. ಪ್ರಸ್ತುತ ಸಾಧನಾ ಮಾರ್ಗಗಳೊಳಗಿನ ಎಲ್ಲ ನ್ಯೂನ್ಯತೆಗಳನ್ನು ನೀಗಿ ಯಾವೊಂದು ಚೌಕಟ್ಟಿಗೂ ಒಳಪಡದೆ ಗುರುತಿಸಿಕೊಂಡದ್ದೆ ಶರಣರ ಅನುಭಾವ ಮಾರ್ಗವೆಂದು ಚೆನ್ನಬಸವಣ್ಣನವರು ಬಹು ಮಾರ್ಮಿಕವಾಗಿ …

Read More »

ಎನ್ನ ಗಂಡಂಗೆ ಅಂಡದ ಬೀಜವಿಲ್ಲ

ಎಲ್ಲರ ಹೆಂಡಿರು ತೊಳಸಿಕ್ಕುವರು; ಎನ್ನ ಗಂಡಂಗೆ ತೊಳಸುವುದಿಲ್ಲ. ಎಲ್ಲರ ಗಂಡಂದಿರಿಗೆ ಬಸಿವರು; ಎನ್ನ ಗಂಡಂಗೆ ಬಸಿವುದಿಲ್ಲ. ಎಲ್ಲರ ಗಂಡಂದಿರಿಗೆ ಬೀಜವುಂಟು; ಎನ್ನ ಗಂಡಂಗೆ ಅಂಡದ ಬೀಜವಿಲ್ಲ. ಎಲ್ಲರ ಗಂಡಂದಿರು ಮೇಲೆ; ಎನ್ನ ಗಂಡ ಕೆಳಗೆ, ನಾ ಮೇಲೆ. ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ. ಕದಿರ ರೆಮ್ಮವ್ವೆ ———————————————————— ವಚನ ಅನುಸಂಧಾನ: ಶರಣೆ ಕದಿರ ರೆಮ್ಮೆವ್ವೆಯ ಪ್ರಸ್ತುತ ಈ ವಚನವು; ಶರಣತತ್ವ ಸಿದ್ಧಾಂತದಂತೆ ‘ಶರಣ ಸತಿ ಲಿಂಗ ಪತಿ’ಯ ಭಾವವು ಇಲ್ಲಿ ಅತ್ಯಂತ …

Read More »

ವಚನ ವಿಶ್ಲೇಷಣೆ: ಹಡಪದ ಲಿಂಗಮ್ಮ

ಅಯ್ಯಾ, ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದವಳ ತಂದು, ಮಹಾಶರಣರು ಎನಗೆ ಕುರುಹ ತೋರಿದರು. ಗುರುವೆಂಬುದನರುಹಿದರು, ಜಂಗಮವೆ ಜಗದ ಕರ್ತುವೆಂದರುಹಿದರು. ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ, ಭವ ಬಂಧನವ ಹರಿದೆ, ಮನವ ನಿರ್ಮಲವ ಮಾಡಿದೆ. ಬೆಳಗಿದ ದರ್ಪಣದಂತೆ ಚಿತ್ತ ಶುದ್ಭವಾದಲ್ಲಿ, ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.             ಶರಣೆ ಹಡಪದ ಲಿಂಗಮ್ಮ ಸಂಕ್ಷಿಪ್ತ ಪರಿಚಯ:- …

Read More »

ಜೀವ ಹೋದಡೆ ಸಾಯಿ. ಇದಕ್ಕೆ ದೇವರ ಹಂಗೇಕೆ …?

ಆವ ಕಾಯಕವಾದಡೂ,ಸ್ವಕಾಯಕವ ಮಾಡಿ; ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು, ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ. ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ? ಶರಣ ಲದ್ದೆಯ ಸೋಮ ವಚನ ಅನುಸಂಧಾನ: ಶರಣರು; ಸತ್ಯನಿಷ್ಠುರತೆ ಕಾರಣದಿಂದ ಸ್ವತಂತ್ರ ಧೀರರೆನಿಸಿದ್ದಾರೆ. ಮತ್ತು ಇವ ರಿಗೆ ತಮ್ಮ ವಿಚಾರ ವಿಷಯದಲ್ಲಿ ಸ್ಪಷ್ಟತೆ ಇದ್ದುದರಿಂದಲೇ ತಮ್ಮ ನಡೆನುಡಿಗಳಲ್ಲಿ ಯೂ ನೇರ ನಿರ್ಭಿಡೆಯ …

Read More »
error: Content is protected !!